ಸೂರ್ಯವಂಶಿಗೆ ಅಪ್ಪನೇ ಆಕಾಶ – ತಂದೆ ತ್ಯಾಗದಿಂದಲೇ ವೈಭವ್ಗೆ ಶಕ್ತಿ
ಮನೆ ಹಿಂದಿನ ಗ್ರೌಂಡ್ To T20I ಪಿಚ್

ಸೂರ್ಯವಂಶಿಗೆ ಅಪ್ಪನೇ ಆಕಾಶ – ತಂದೆ ತ್ಯಾಗದಿಂದಲೇ ವೈಭವ್ಗೆ ಶಕ್ತಿಮನೆ ಹಿಂದಿನ ಗ್ರೌಂಡ್ To T20I ಪಿಚ್

ವೈಭವ್ ಸೂರ್ಯವಂಶಿ ಯಶಸ್ಸಿನ ಹಿಂದೆ ಟ್ಯಾಲೆಂಟ್ ಮಾತ್ರ ಅಲ್ಲ.. ಅವನ ಹಿಂದೆ ಇರೋದು ಅಪ್ಪ ಅನ್ನೋ ಶಕ್ತಿ.. ಅಪ್ಪನ ಶಿಸ್ತು, ಅಪ್ಪನ ಬದ್ಧತೆ, ಅಪ್ಪನ, ಯೋಚನೆ, ಅಪ್ಪನ ನಂಬಿಕೆ, ಅಪ್ಪನ ಕಠಿಣ ಶ್ರಮ, ಅಪ್ಪನ ತ್ಯಾಗ ಇವತ್ತು ವೈಭವ್‌ನನ್ನ ಜಸ್ಟ್ 15 ವರ್ಷಕ್ಕೆ ಟೀಂ ಇಂಡಿಯಾ ಟಿ20I ಜರ್ಸಿ ಹಾಕುವಂತೆ ಮಾಡಿದೆ. ಮನೆ ಹಿಂದೆ ಮಾಡಿದ ಪಿಚ್‌ನಿಂದ ಇವತ್ತು ಭಾರತದ ಪರ ಆಡೋ ಶಕ್ತಿಯನ್ನ ಕೊಟ್ಟಿದ್ದು ವೈಭವ್ ತಂದೆ. ಜಸ್ಟ್ 5 ವರ್ಷಕ್ಕೆ ಮಗನ ಕೈಯಲ್ಲಿ ವೈಭವ್ ಅಪ್ಪ ಬ್ಯಾಟ್ ಕೊಟ್ಟು ಕ್ರಿಕೆಟ್‌ ಕೋಚಿಂಗ್ ಕೊಟ್ಟಿದ್ದಕ್ಕೆ ವಭವ್ ಜಸ್ಟ್ 15 ವರ್ಷಕ್ಕೆ ಟೀಂ ಇಂಡಿಯಾ ಪರ ಆಡುತ್ತಾ ಇದ್ದಾರೆ.

ಹಣ ಇಲ್ಲ, ಸೌಲಭ್ಯ ಇಲ್ಲ, ದೊಡ್ಡ ಬ್ಯಾಕ್‌ಗ್ರೌಂಡ್ ಇಲ್ಲ… ಆದ್ರೂ ಕನಸು ದೊಡ್ಡದಿದ್ದರೆ ಏನು ಬೇಕಾದರೂ ಸಾಧಿಸಬಹುದು ಅನ್ನೋದಕ್ಕೆ ವೈಭವ್ ಸೂರ್ಯವಂಶಿಯ ಕಥೆಯೇ ದೊಡ್ಡ ಉದಾಹರಣೆ . ಇವತ್ತು ಜನ ನೋಡೋದು ಟಿ20 ಸ್ಟಾರ್‌ನನ್ನ ಆದರೆ ಅದರ ಹಿಂದೆ ತಂದೆಯ ತ್ಯಾಗ, ತಾಯಿಯ ನಿದ್ದೆಯಿಲ್ಲದ ರಾತ್ರಿಗಳು ಮತ್ತು ಒಂದು ಕುಟುಂಬದ ಹೋರಾಟ ಇದೆ ಅನ್ನೋದನ್ನ ಮರೆಯಬಾರದು..

ವೈಭವ್‌ಗೆ ಸಿಕ್ಕ ಗೆಲುವು ಈಸಿಯಾಗಿ ಸಿಕ್ಕಿದ್ದು ಅಲ್ಲವೇ ಅಲ್ಲ.. ಇವತ್ತು ದೊಡ್ಡ ಸ್ಟಾರ್ ಆಗುವುದ್ದಕ್ಕೆ, ನಾವು ನೀವು ಅವನ ಬಗ್ಗೆ ಮಾತನಾಡುವುದ್ದಕ್ಕೆ ಕಾರಣ ಒಬ್ಬರೇ ಅದು ವೈಭವ್ ತಂದೆ.. ಸಂಜೀವ್ ಸೂರ್ಯವಂಶಿ.. ವೈಭವ್‌ಗೆ

ಬಿಹಾರದ ಸಮಸ್ತಿಪುರ ಜಿಲ್ಲೆಯ ಮೋತಿಪುರ್ ಗ್ರಾಮದಲ್ಲಿರುವ ಮನೆಯ ಹಿಂಭಾಗದಲ್ಲೇ ನೆಟ್, ಪಿಚ್ ಎಲ್ಲ ಸೌಲಭ್ಯವನ್ನೂ ತಂದೆ ಮಾಡಿಕೊಟ್ಟಿದ್ದರು. ಅಂದರೆ ಮನೆ ಹಿಂದಿನ ಗ್ರೌಂಡ್‌ನಲ್ಲೇ ಅಭ್ಯಾಸ ಮಾಡಿ ಈ ಹುಡುಗ ಇವತ್ತು ದೇಶದ ಮಟ್ಟಿಗೆ ಹೆಸರು ಮಾಡಿದ್ದಾನೆ. ಇದರಿಗಿಂತ ದೊಡ್ಡ ವಿಷಯ ಏನಂದ್ರೆ, ಮಗನ ಕ್ರಿಕೆಟ್ ಕನಸಿಗಾಗಿ ವೈಭವ್ ತಂದೆ ಜಮೀನು ಮಾರುವ ಮಟ್ಟಿಗೆ ತ್ಯಾಗ ಮಾಡಿದ್ರು. ಬೆಳಗ್ಗೆ ಬೇಗ ಎದ್ದು ಮಗನ ಅಭ್ಯಾಸಕ್ಕೆ ತಾಯಿ ಸಹ ಬೆಂಬಲ ನೀಡುತ್ತಿದ್ದರಂತೆ. ಇಷ್ಟೆಲ್ಲ ಕಷ್ಟ, ತ್ಯಾಗ, ಸಪೋರ್ಟ್ ಸೇರಿ ಇಂದು ವೈಭವ್ ಸೂರ್ಯವಂಶಿ ಎಂಬ ಹೆಸರನ್ನು ಎಲ್ಲರೂ ಮಾತಾಡುವಂತೆ ಮಾಡಿದೆ.

ವೈಭವ್ ಅವರ ಸಂಪೂರ್ಣ ಜೀವನವನ್ನ ಅವರ ತಂದೆ ಸಂಜೀವ್ ಸೂರ್ಯವಂಶಿ ಹ್ಯಾಂಡಲ್ ಮಾಡುತ್ತಿದ್ದಾರೆ. ಎಲ್ಲೂ ಕೂಡ ಯಾವುದೇ ತೊಂದ್ರೆ ಆಗದಂತೆ ಪ್ಲ್ಯಾನ್ ಮಾಡುತ್ತಿದ್ದಾರೆ. ವೈಭವ್‌ಗೆ ಈಗ 15 ವರ್ಷ ಆಗಿದ್ರಿಂದ ನಿರ್ಧಾರ ತೆಗೆದುಕೊಳ್ಳುವ ಸಮರ್ಥ್ಯ ಇಲ್ಲ. ಹೀಗಾಗಿ ವೈಭವ್ ಭವಿಷ್ಯದ ನಿರ್ಧಾರಗಳನ್ನ ತಂದೆಯಾದ ಸಂಜೀವ್ ಅವರೇ ತೆಗೆದುಕೊಳ್ಳುತ್ತಿದ್ದಾರೆ. ವೈಭವ್‌ಗೆ ಐಪಿಎಲ್‌ನಿಂದ ವಿವಿಧ ಬ್ರ್ಯಾಂಡ್‌ಗಳಿಂದ ಕೋಟಿ ಕೋಟಿ ಹಣ ಬರ್ತಿದೆ. ಆ ಹಣ ಈಗ ವೈಭವ್ ತಂದೆ ನೋಡಿಕೊಳ್ಳಬೇಕಾಗುತ್ತೆ. ಅಪ್ರಾಪ್ತ ವಯಸ್ಕ ಮಗುವೊಂದು ತನ್ನ ಕೌಶಲ್ಯದ ಮೂಲಕ ಆದಾಯ ಗಳಿಸಿದ್ದರೆ, ಅದಕ್ಕಾಗಿ ಕಾನೂನಿನಲ್ಲಿ ಪ್ರತ್ಯೇಕ ನಿಬಂಧನೆ ಇದೆ. ವೈಭವ್ ಸೂರ್ಯವಂಶಿ ತನ್ನ ಕೌಶಲ್ಯದ ಮೂಲಕ ಆದಾಯ ಗಳಿಸಿರುವುದರಿಂದ, ವೈಭವ್ ಈ ಆದಾಯದ ಮೇಲೆ ಐಟಿಆರ್ ಸಲ್ಲಿಸಬೇಕಾಗುತ್ತದೆ. ಅಂದ್ರೆ ಇಲ್ಲಿ ವೈಭವ್ ಸಲ್ಲಿಸಲು ಸಾಧ್ಯವಿಲ್ಲ. ಅವರ ತಂದೆಯ ಹೆಸರಲ್ಲಿ ಐಟಿ ಫೈಲ್ ಮಾಡಬೇಕಾಗುತ್ತೆ. ತಂದೆಯ ಆದಾಯವೆಂದು ಅದ್ದನ್ನ ಪರಿಗಣಿಸಲಾಗಿ ಟ್ಯಾಕ್ಸ್ ಕಟ್ಟಬೇಕಾಗುತ್ತೆ.. ಹೀಗಾಗಿ ವೈಭವ್‌  ಬರುತ್ತಿರೋ ಆದಾಯವನ್ನ ಅವರ ತಂದೆ ನೀಟಾಗಿ ಹ್ಯಾಂಡಲ್  ಮಾಡುತ್ತಿದ್ದಾರೆ. ಯಾವುದೇ ಮ್ಯಾನೇಜರ್ ಇಟ್ಟುಕೊಳ್ಳದೇ ಮಗ ಸಂಪೂರ್ಣ ಜವಾಬ್ದಾರಿ ಸಂಜೀವ್ ಸೂರ್ಯವಂಶಿ ಹೊತ್ತಿದ್ದಾರೆ. ಈಗಾಗಲೇ ಸಾಕಷ್ಟು ಸ್ಟಾರ್ ಕ್ರಿಕೆಟರ್‌ಗಳೂ ಕೂಡ ವೈಭವ್‌ಗೆ ಹಣದ ರುಚಿ ತೋರಿಸಬೇಡಿ.. ಎಲ್ಲಾ ಜವಾಬ್ದಾರಿ ನೀವು ನೋಡಿಕೊಳ್ಳಿ ಎಂದು ಸಲಹೆ ಕೂಡ ನೀಡಿದ್ದಾರೆ.

ಹಣದ ವಿಚಾರ ಬಿಡಿ. ಎಲ್ಲದ್ದಕ್ಕಿಂತ ಹೆಚ್ಚಾಗಿ ನಮಗೆ ಗ್ರೇಟ್ ಅನಿಸೋದು , ತಂದೆ ಕಲಿಸಿಕೊಟ್ಟ ಶಿಸ್ತು.. ವೈಭವ್‌ ಯಾರೇ ಬರ್ಲಿ, ತನಗಿಂದ ದೊಡ್ಡವರಿಲಿ, ಚಿಕ್ಕವರಿರಲಿ. ಅವರ ಕಾಲನ್ನ ಮುಟ್ಟಿ ನಮಸ್ಕಾರ ಮಾಡುತ್ತಾರೆ. ಇದ್ದನ್ನ ಅವರ ತಂದೆಯೇ ಇವರಿಗೆ ಹೇಳಿಕೊಟ್ಟಿದ್ದಾರೆ. ಅಪ್ಪ ಹಾಕಿ ಕೊಟ್ಟ ದಾರಿಯಲ್ಲಿ ವೈಭವ್ ನಡೆದುಕೊಂಡು ಹೋಗುತ್ತಿದ್ದಾರೆ.

ತನ್ನ ಕನಸನ್ನ ಮಗನಲ್ಲಿ ನನಸು ಮಾಡಿದ ವೈಭವ್ ತಂದೆ

ಚಿಕ್ಕ ವಯಸ್ಸಿನಲ್ಲಿ ಕ್ರಿಕೆಟಿಗನಾಗಲು ಸಾಧ್ಯವಾಗದ ಹಿನ್ನೆಲೆ ಸಂಜೀವ್ ಸೂರ್ಯವಂಶಿ ತನ್ನ ಪುತ್ರ ವೈಭವ್ ಯಶಸ್ಸಿ ತನ್ನನ್ನು ತಾನು ಅರ್ಪಿಸಿಕೊಂಡರು. ತಮ್ಮ ಮಗನ ಅಭಿವೃದ್ಧಿ ಮತ್ತು ತರಬೇತಿಯತ್ತ ಗಮನಹರಿಸಲು ತಮ್ಮ ಕೆಲಸ ಮತ್ತು ವ್ಯವಹಾರ ಬಿಟ್ರು. ವೈಭವ್‌ ಸೂರ್ಯವಂಶಿಗೆ ಗುಣಮಟ್ಟದ ತರಬೇತಿ ಕೊಡಿಸಲು, ಸಂಜೀವ್ ಸೂರ್ಯವಂಶಿ ತಮ್ಮ ಕೃಷಿ  ಭೂಮಿಯನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಅಕಾಡೆಮಿ ಶುಲ್ಕ, ಪ್ರಯಾಣ ವೆಚ್ಚ ಮತ್ತು ಇತರ ಕ್ರಿಕೆಟ್ ತರಬೇತಿ ವೆಚ್ಚಗಳನ್ನು ಭರಿಸಲು ಬಳಸಿದರು. ಇವತ್ತು ಮಾರಿದ ಜಮೀನಿನ್ನ ಮತ್ತೆ ಕೊಂಡುಕೊಳ್ಳುವಷ್ಟು ವೈಭವ್ ಬೆಳೆದು ನಿಂತಿದ್ದಾನೆ. ಅಪ್ಪನ ಕನಸಿಗೆ ಮಗನ ಸಾಧನೆ ದೊಡ್ಡ ಬಲ ಕೊಟ್ಟಿದೆ.

ಇನ್ನು ವೈಭವ್‌ಗೆ 15 ವರ್ಷ ಆಗಿದ್ರಿಂದ ಅವರ ತಂದೆ ಕೂಡ ವೈಭವ್ ಜೊತೆಯಲ್ಲೇ ಇದ್ದಾರೆ. ಹೀಗಾಗಿ ತನ್ನ ಮಗನಿಗೆ ಮೊದಲು ಚಾನ್ಸ್ ಕೊಟ್ಟ ಆರ್‌ಆರ್‌ ತಂಡವನ್ನ ಸಂಜೀವ್ ಸಾಕಷ್ಟು ಗೌರವಿಸುತ್ತಾರೆ. ಹೀಗಾಗಿಯೇ ಇಂಗ್ಲೆಂಡ್‌ನಲ್ಲಿ ಸಂಜೀವ್ ಅವರು ರಾಜಸ್ಥಾನ್ ರಾಯಲ್ಸ್ ತಂಡದ ಸಹ-ಮಾಲೀಕರು ಲಕ್ಷ್ಮಿ ಮಿತ್ತಲ್ ಮತ್ತು ಮನೋಜ್ ಅವರನ್ನು ಭೇಟಿಯಾಗಿದ್ದಾರೆ. ಈ ಬಗ್ಗೆ ವೈಭವ್ ತಂದೆ ಸಂಜೀವ್ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ತನ್ನ ಮಗನ ಮುಂದಿನ ಸಕ್ಸಸ್  ಹಾದಿಗೆ ಏನೆಲ್ಲಾ ಬೇಕು ಅದ್ದನ್ನ ವೈಭವ್ ತಂದೆ ಮಾಡುತ್ತಿದ್ದಾರೆ. ಸೂರ್ಯವಂಶಿ ಕೂಡ ಅಪ್ಪ ಹಾಕಿದ ಗೆರೆ ದಾಟದೇ, ಶಿಸ್ತಿನಿದಂ ಕ್ರಿಕೆಟ್ ಲೋಕದಲ್ಲಿ ಚಿಕ್ಕ ವಯಸ್ಸಿಗೆ ದೊಡ್ಡ ಸ್ಟಾರ್ ಆಗಿ ಮಿನುಗುತ್ತಿದ್ದಾರೆ.

Kishor KV

Leave a Reply

Your email address will not be published. Required fields are marked *