ಹೊಸ ವರ್ಷ ಆಚರಣೆಯಲ್ಲಿ ಮದ್ಯ ಸೇವನೆ ಮಾಡಿದವರಿಗೆ ಡ್ರಾಪ್‌ ವ್ಯವಸ್ಥೆ ವಿವಾದ! – ಯೂಟರ್ನ್‌ ಹೊಡೆದ ಗೃಹಸಚಿವ!  

ಹೊಸ ವರ್ಷ ಆಚರಣೆಯಲ್ಲಿ ಮದ್ಯ ಸೇವನೆ ಮಾಡಿದವರಿಗೆ ಡ್ರಾಪ್‌ ವ್ಯವಸ್ಥೆ ವಿವಾದ! – ಯೂಟರ್ನ್‌ ಹೊಡೆದ ಗೃಹಸಚಿವ!  

ಸಿಲಿಕಾನ್‌ ಸಿಟಿ ಬೆಂಗಳೂರು ಹೊಸ ವರ್ಷವನ್ನ ವೆಲ್‌ಕಮ್‌ ಮಾಡಲು ಸಜ್ಜಾಗಿದೆ. ನಗರ ಹಲವು ಕಡೆಗಳಲ್ಲಿ ಸೆಲೆಬ್ರೆಷನ್‌ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಯ ದಿನ ಮದ್ಯಸೇವನೆ ಮಾಡಿದರವರನ್ನು ಡ್ರಾಪ್ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪರಮೇಶ್ವರ್ ಅವರು ಹೇಳಿದ್ದರು. ಈ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಪರಮೇಶ್ವರ್‌ ಯೂಟರ್ನ್‌ ಹೊಡೆದಿದ್ದಾರೆ.

ಇದನ್ನೂ ಓದಿ: ಜಾಲಿ ಮೂಡ್‌ನಲ್ಲಿ ಡಿವೈನ್‌ ಸ್ಟಾರ್‌! – ಫ್ಯಾಮಿಲಿ ಜೊತೆ ಗೋವಾದಲ್ಲಿ ಎಂಜಾಯ್‌ ಮಾಡಿದ ರಿಷಬ್‌ ಶೆಟ್ಟಿ!

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ  ಹೊಸ ವರ್ಷಾಚರಣೆ ವೇಳೆ ಡ್ರಿಂಕ್ಸ್ ಮಾಡಿದ ಎಲ್ಲರನ್ನೂ ಮನೆಗೆ ಕರೆದುಕೊಂಡು ಹೋಗಿ ಬಿಡಲ್ಲ.  ತುಂಬಾ ಕುಡಿದಿರುವವರು, ನಡೆಯಲು ಆಗದಿರುವವರನ್ನ ವಿಶ್ರಾಂತಿ ಸ್ಥಳಕ್ಕೆ ಬಿಡುತ್ತೇವೆ. ಕೆಲವರು ಪ್ರಜ್ಞೆ ಇರದ ಮಟ್ಟಕ್ಕೆ ಹೋಗಿ ಬಿಡ್ತಾರೆ. 15 ಕಡೆ ರೆಸ್ಟಿಂಗ್ ಪ್ಲೇಸ್ ಮಾಡಿದ್ದೇವೆ. ನಶೆ ಇಳಿಯುವವರೆಗೂ ಇಟ್ಟುಕೊಂಡು ನಂತರ ಕಳಿಸುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಬಾರ್, ಪಬ್ ಓಪನ್ ಇಡಲು ಸಮಯ ನಿಗದಿ ಮಾಡಲಾಗಿದೆ. ಟೈಮಿಂಗ್ ಪ್ರಕಾರ ಬಾರ್ ಮುಚ್ಚಬೇಕು. ರಾತ್ರಿ ಒಂದು ಗಂಟೆಗೆ ಎಲ್ಲ ಬಾರ್‌ಗಳನ್ನು ಮುಚ್ಚಬೇಕು. ಮುಚ್ಚದಿದ್ರೆ ಕೇಸ್ ಹಾಕಲಾಗುವುದು . ಇನ್ನು ಡ್ರಿಂಕ್ ಆಂಡ್ ಡ್ರೈವ್‌ಗೆ ಅದೇ ರೀತಿಯಲ್ಲಿ ಕೇಸ್ ಇರುತ್ತೆ. 160 ಸ್ಪಾಟ್ ಐಡೆಂಟಿಫೈ ಮಾಡಿದ್ದಾರೆ. ಒಂದು ಹಂತದವರೆಗೆ ಬಿಡುತ್ತೇವೆ. ಹಂತ ಮೀರಿದಾಗ ಡ್ರೈವ್ ಮಾಡೋದು ಕಷ್ಟವಾಗುತ್ತೆ, ಆಗ ಅಪಘಾತವಾಗಿ ತಾವು ಸಾಯ್ತಾರೆ, ಬೇರೆಯವರನ್ನು ಸಾಯಿಸುತ್ತಾರೆ. ಎರಡು ದಿನ ನಾವು ಕಂಟ್ರೋಲ್ ಮಾಡಿದ್ರೆ ಕೆಲವರ ಪ್ರಾಣ ಉಳಿಯುತ್ತವೆ ಎಂದಿದ್ದಾರೆ.

ಹೆಚ್ಚು ಜನರು ಸೇರಿದಾಗ ಬೇರೆ ಆಯಾಮದಲ್ಲಿ ನೋಡಬೇಕಾಗುತ್ತೆ. ಟೆರೆರಿಸ್ಟ್ ಆಯಾಮದಲ್ಲಿ ನೋಡಬೇಕಾಗುತ್ತೆ. ಎಲ್ಲ ಆಯಾಮದಲ್ಲಿ ಪೊಲೀಸರು ಕ್ರಮ ತೆಗೆದುಕೊಳ್ಳಲಿದ್ದಾರೆ. ಪೊಲೀಸ್ ಅವರಿಗೆ ಬಾಡಿ ಕ್ಯಾಮರಾ ಹಾಕಲು ಹೇಳಿದ್ದೇವೆ. ಡೈರೆಕ್ಟ್ ಆಗಿ ಕಮಾಂಡ್ ಸೆಂಟರ್‌ಗೆ ಕನೆಕ್ಟ್ ಆಗಿರುತ್ತೆ. ಹೆಚ್ಚಿನ ಪೋರ್ಸ್ ಬೇಕಾದರೆ ಆ ಸ್ಥಳಕ್ಕೆ ಬರುತ್ತೆ ಎಂದು ಮಾಹಿತಿ ನೀಡಿದ್ದಾರೆ.

Shwetha M