ಚುನಾವಣೆ ಗೆಲ್ಲಲು ಬಿಜೆಪಿ ನನ್ನ ಹೆಣ ಬೀಳಿಸೋಕು ರೆಡಿ – ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ

ಚುನಾವಣೆ ಗೆಲ್ಲಲು ಬಿಜೆಪಿ ನನ್ನ ಹೆಣ ಬೀಳಿಸೋಕು ರೆಡಿ – ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ

ಲೋಕಸಭೆ ಚುನಾವಣೆ ಕಾವು ರಂಗೇರಿದೆ. ನಾನಾ.. ನೀನಾ ನೋಡೇ ಬಿಡೋಣ ಅಂತಾ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಅಧಿಕೃತವಾಗಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದು, ಪ್ರಚಾರದ ಅಬ್ಬರ ಜೋರಾಗಿದೆ. ಲೋಕಸಭಾ ಚುನಾವಣೆಯ ಮತಯಾಚನೆ ಜೋರಾಗಿರುವಾಗಲೇ ಸಚಿವ ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಇದನ್ನೂ ಓದಿ: SRH V/s MI ಮುರಿದ ದಾಖಲೆಗಳೆಷ್ಟು? – ಹಾರ್ದಿಕ್ ಪಾಂಡ್ಯಾಗೆ ಇದಕ್ಕಿಂತ ಶಿಕ್ಷೆ ಬೇಕಾ?

ಈ ಬಗ್ಗೆ ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ನಾಯಕರ ಮೇಲೆ ಹರಿಹಾಯ್ದಿದ್ದಾರೆ. ಲೋಕಸಭಾ ಚುನಾವಣೆ ಗೆಲ್ಲೋಕೆ ನನ್ನ ಹೆಣ ಬಿಳಿಸೋಕು ಬಿಜೆಪಿಯವರು ಸಿದ್ಧರಿದ್ದಾರೆ. ಆದರೆ ನಾನು ಸಂವಿಧಾನ ಮೇಲೆ ನಂಬಿಕೆ ಇಟ್ಟವನು. ನಾನು ಸಂವಿಧಾನದ ಮೂಲಕವೇ ಅವರಿಗೆ ಉತ್ತರ ಕೊಡುತ್ತೇನೆ ಎಂದು ಸವಾಲು ಹಾಕಿದ್ದಾರೆ.

IT, ED ಬಗ್ಗೆ ನನಗೆ ಭಯವಿಲ್ಲ. ಮಲ್ಲಿಕಾರ್ಜುನ ಖರ್ಗೆ ಸಾಹೇಬರಿಗೆ ದಿನಾ IT, EDಯಲ್ಲಿ ಕೂಡಿಸ್ತಾರೆ. ಅದ್ಯಾವೋದು ಸ್ವಾತಂತ್ರ್ಯ ಪೂರ್ವದ ಪ್ರಕರಣ ತೆಗೆದು IT, ED ತನಿಖೆ ಮಾಡುತ್ತಿದ್ದಾರೆ. ಬಿಜೆಪಿಯ ಸ್ಟಾರ್ ಪ್ರಚಾರಕರು ಯಾರು ಗೊತ್ತಾ ಇದೇ IT/ED/CBI ಎಂದು ಪ್ರಿಯಾಂಕ್ ಖರ್ಗೆ ಅವರು ಕಿಡಿಕಾರಿದ್ದಾರೆ.

Shwetha M