ಮಹಿಳೆಯರೇ ಎಚ್ಚರ.. ಎಚ್ಚರ – ಗರ್ಭನಿರೋಧಕ ಮಾತ್ರೆಗಳು ನಿಮ್ಮ ಜೀವಕ್ಕೆ ಡೇಂಜರ್..!

ಗರ್ಭನಿರೋಧಕ ಮಾತ್ರೆಗಳನ್ನ ಬಳಸುವ ಮಹಿಳೆಯರೇ ಎಚ್ಚರ. ಮೆಡಿಕಲ್ ಶಾಪ್ಗಳಲ್ಲಿ ಸುಲಭವಾಗಿ ಗರ್ಭನಿರೋಧಕ ಮಾತ್ರೆಗಳು ಸಿಗುತ್ತೆ ಅಂತ ಹೆಚ್ಚಾಗಿ ತೆಗೆದುಕೊಂಡ್ರೆ ಜೀವಕ್ಕೆ ಅಪಾಯ. ಈ ಮಾತ್ರೆಗಳ ಅತಿಯಾದ ಸೇವನೆಯೇ ಮಹಿಳೆಯರಲ್ಲಿ ಹೃದಯಾಘಾತಕ್ಕೂ ಕಾರಣವಾಗಿದೆ ಎನ್ನುವ ಆಘಾತಕಾರಿ ಅಂಶ ಬಹಿರಂಗವಾಗಿದೆ.
ಇದನ್ನೂ ಓದಿ:ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ – ಚಿಕ್ಕಬಳ್ಳಾಪುರ ಜಿಲ್ಲೆಗೆ ಬಂಪರ್ ಲಾಟರಿ
ಮಹಿಳೆಯರಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಗರ್ಭನಿರೋಧಕ ಮಾತ್ರೆಗಳ ಸೇವನೆ ಕೂಡ ಕಾರಣ ಎಂದು ಜಯದೇವ ಆಸ್ಪತ್ರೆಯ ತಜ್ಞರ ಅಧ್ಯಯನದಲ್ಲಿ ಕಂಡುಬಂದಿದೆ. ರಕ್ತ ಹೆಪ್ಪುಗಟ್ಟುವಿಕೆ ಮತ್ತು ಇತರ ಅಡ್ಡಪರಿಣಾಮಗಳಿಂದಾಗಿ ಈ ಸಮಸ್ಯೆ ಉಂಟಾಗುತ್ತಿದೆ ಎಂದು ತಜ್ಞರು ಹೇಳಿದ್ದು, ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ಮುಂದಾಗಿದ್ದಾರೆ. ಮಹಿಳೆಯರು ತೆಗೆದುಕೊಳ್ಳುವ ಗರ್ಭನಿರೋಧಕ ಮಾತ್ರೆ ಕೂಡ ಜೀವಕ್ಕೆ ಕುತ್ತು ತರಬಹುದು. ಈ ಗುಳಿಗೆ ಸೇವನೆ ಕೂಡ ಮಹಿಳೆಯರಲ್ಲಿ ಹೃದಯಾಘಾತಕ್ಕೆ ಕಾರಣವಾಗುತ್ತಿದೆ ಎಂದು ಜಯದೇವ ತಜ್ಞರು ನಡೆಸಿದ ಅಧ್ಯಯನದಲ್ಲಿ ಬಯಲಾಗಿದೆ.
ಇತ್ತೀಚೆಗೆ ಮಹಿಳೆಯರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲಿಯೂ ಬೆಂಗಳೂರಿನಲ್ಲಿ ಯುವ ವಯಸ್ಕರೇ ಹೆಚ್ಚು ಬಲಿಯಾಗುತ್ತಿದ್ದಾರೆ. ಗರ್ಭ ನಿರೋಧಕ ಮಾತ್ರೆ ಸೇವನೆ ಕೂಡ ಮಹಿಳೆಯರ ಹೃದಯಸ್ಥಂಭನಕ್ಕೆ ಕಾರಣವಾಗುತ್ತಿದೆ. ಗರ್ಭ ನಿರೋಧಕ ಔಷಧಗಳ ಬಳಕೆಯಿಂದ ಮಹಿಳೆಯರಲ್ಲಿ ರಕ್ತದ ಹೆಪ್ಪುಗಟ್ಟುವಿಕೆ ಕಂಡು ಬರುತ್ತಿದೆ. ಇದು ಕೂಡ ಹೃದಯಾಘಾತಕ್ಕೆ ಕಾರಣವಾಗುತ್ತಿದೆ ಎಂದು ತಜ್ಞರು ಹೇಳಿದ್ದು, ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ, ಗರ್ಭ ನಿರೋಧಕ ಮಾತ್ರೆ ಹಾಗೂ ನೋವು ನಿವಾರಕಗಳನ್ನು ಆದಷ್ಟು ಕಡಿಮೆ ಬಳಸುವಂತೆ ಮಹಿಳೆಯರಿಗೆ ಜಯದೇವ ಆಸ್ಪತ್ರೆಯ ತಜ್ಞ ವೈದ್ಯರು ಸಲಹೆ ನೀಡಿದ್ದಾರೆ. ಮತ್ತೊಂದೆಡೆ, ಗರ್ಭ ನಿರೋಧಕ ಮಾತ್ರೆ ಹಾಗೂ ನೋವು ನಿವಾರಕಗಳ ಬಳಕೆ ಸಂಬಂಧ ಸೂಕ್ತ ಕಾನೂನು ರೂಪಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲು ತಜ್ಞರು ನಿರ್ಧರಿಸಿದ್ದಾರೆ.

ನೋಡಿರಿ

