ಮಣಿಪುರದಲ್ಲಿ ಮುಂದುವರಿದ ಗಲಭೆ – ಅ. 11 ರವರೆಗೆ ಇಂಟರ್ನೆಟ್ ಸೇವೆ ನಿಷೇಧ!

ಮಣಿಪುರದಲ್ಲಿ ಮುಂದುವರಿದ ಗಲಭೆ – ಅ. 11 ರವರೆಗೆ ಇಂಟರ್ನೆಟ್ ಸೇವೆ ನಿಷೇಧ!

ಜನಾಂಗೀಯ ಸಂಘರ್ಷ ಪೀಡಿತ ಮಣಿಪುರದದಲ್ಲಿ ಹಿಂಸಾಚಾರ ಮುಂದುವರಿದಿದೆ. ಕಿಡಿಗೇಡಿಗಳು ಪದೇ ಪದೆ ದಾಳಿ ನಡೆಸಿ ವಿಕೃತಿ ಮೆರೆಯುತ್ತಲೇ ಇದ್ದಾರೆ. ಈ ಹಿನ್ನೆಲೆ ಮಣಿಪುರದಲ್ಲಿ ಇಂಟರ್‌ನೆಟ್‌ ಸೇವೆಯನ್ನು ಅಕ್ಟೋಬರ್ 11 ರವರೆಗೆ ಮೊಬೈಲ್ ಇಂಟರ್ನೆಟ್ ಸೇವೆ ನಿಷೇಧ ಮಾಡಲಾಗಿದೆ ಎಂದು ಎಂದು ಪೊಲೀಸರು ಪ್ರಕಟಣೆ​​​ ಹೊರಡಿಸಿದ್ದಾರೆ.

ಈಶಾನ್ಯ ರಾಜ್ಯದ ಕೆಲವು ಭಾಗಗಳಲ್ಲಿ ಅಶಾಂತಿ ಮತ್ತು ಹಿಂಸಾಚಾರದ ಘಟನೆಗಳ ಮುಂದುವರಿದಿದೆ. ಹೀಗಾಗಿ ಪೊಲೀಸ್‌ ಇಲಾಖೆ ಈ ನಿರ್ಧಾರ ಕೈಗೊಂಡಿದೆ. ಇನ್ನು ಗಲಭೆಯ ನಡುವೆ ಹಿಂಸಾಚಾರವನ್ನು ಪ್ರಚೋದಿಸಲು ಸಾಮಾಜಿಕ ಮಾಧ್ಯಮಗಳನ್ನು ಬಳಸಬಹುದು ಮತ್ತು ದ್ವೇಷದ ಭಾಷಣವನ್ನು ಬಳಸಬಹುದೆಂಬ ಭಯವಿದೆ ಎಂದು ಮಣಿಪುರದ ಪೊಲೀಸ್ ಮಹಾನಿರ್ದೇಶಕರು ಹೇಳಿದ್ದಾರೆ.

ಇದನ್ನೂ ಓದಿ:  ಮೊದಲ ವಿಶ್ವಕಪ್ ಪಂದ್ಯಕ್ಕೆ ಟೀಮ್ ಇಂಡಿಯಾ ರೆಡಿ – ಭಾನುವಾರ ಭಾರತ-ಆಸ್ಟ್ರೇಲಿಯಾ ಮುಖಾಮುಖಿ

ರಾಜ್ಯ ಸರ್ಕಾರವು ಭಾನುವಾರ ಹೊರಡಿಸಿದ ಅಧಿಸೂಚನೆಯಲ್ಲಿ, “ಕೆಲವು ಸಮಾಜ ವಿರೋಧಿ ಶಕ್ತಿಗಳು ಸಾರ್ವಜನಿಕರ ಭಾವೋದ್ರೇಕಗಳನ್ನು ಪ್ರಚೋದಿಸುವ ಚಿತ್ರಗಳು, ದ್ವೇಷ ಭಾಷಣ ಮತ್ತು ದ್ವೇಷದ ವೀಡಿಯೊ ಸಂದೇಶಗಳನ್ನು ಪ್ರಸಾರ ಮಾಡಲು ಸಾಮಾಜಿಕ ಮಾಧ್ಯಮವನ್ನು ವ್ಯಾಪಕವಾಗಿ ಬಳಸಿಕೊಳ್ಳುವ ಆತಂಕವಿದೆ.

ಇದು ಸಮಾಜದ ಶಾಂತಿಯುತ ಜೀವನಕ್ಕೆ ಧಕ್ಕೆ ತರಬಹುದು. ಮಣಿಪುರ ರಾಜ್ಯದಲ್ಲಿ ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ನಿರ್ಧಾರ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Shwetha M