ಮುಂದುವರಿದ ಹಮಾಸ್‌ – ಇಸ್ರೇಲ್‌ ಭೀಕರ ಕದನ – ಗಾಜಾಪಟ್ಟಿಯಲ್ಲಿ 8 ಸಾವಿರಕ್ಕೂ ಹೆಚ್ಚು ಸಾವು!

ಮುಂದುವರಿದ ಹಮಾಸ್‌ – ಇಸ್ರೇಲ್‌ ಭೀಕರ ಕದನ – ಗಾಜಾಪಟ್ಟಿಯಲ್ಲಿ 8 ಸಾವಿರಕ್ಕೂ ಹೆಚ್ಚು ಸಾವು!

ಹಮಾಸ್‌ ಹಾಗೂ ಇಸ್ರೇಲ್‌ ನಡುವಿನ ಭೀಕರ ಕದನ ಮುಂದುವರಿದಿದೆ. ಹಮಾಸ್‌ ಉಗ್ರರನ್ನು ನಿರ್ನಾಮ ಮಾಡಲೇಬೇಕೆಂದು ಪಣತೊಟ್ಟಿರುವ ಇಸ್ರೇಲ್‌ ಗಾಜಾಪಟ್ಟಿ ಮೇಲೆ ಮನಬಂದಂತೆ ದಾಳಿ ಮಾಡುತ್ತಿದೆ. ಈ ಯುದ್ಧದಲ್ಲಿ ಇಲ್ಲಿವರೆಗೆ ಬರೋಬ್ಬರಿ 8 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಇಸ್ರೇಲ್‌ ಸೇನೆ ಹಮಾಸ್ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮುಂದುವರಿಸಿದೆ. ಹಮಾಸ್​​​ನ ಮೆಟ್ರೋ ಸುರಂಗಗಳನ್ನು ಟಾರ್ಗೆಟ್ ಮಾಡಿರುವ ಇಸ್ರೇಲ್ ಪಡೆಗಳು ವಾಯು ದಾಳಿಯ ಜತೆ ಎಚ್ಚರಿಕೆಯ ಭೂ ದಾಳಿ ನಡೆಸುತ್ತಿದೆ. ಪರಿಣಾಮ 8ಸಾವಿರಕ್ಕೂ ಹೆಚ್ಚು ಪ್ಯಾಲಿಸ್ಟೈನಿಯನ್ನರು ಪ್ರಾಣ ಕಳೆದುಕೊಂಡಿದ್ದಾರೆಂದು ಗಾಜಾ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಇದನ್ನೂ ಓದಿ: ಹಾವು ಮನೆ ಸೇರಿತು ಅಂತಾ ಹೊಗೆ ಹಾಕಿದ್ರು.. – ನಾಗಪ್ಪನ ಶಾಪಕ್ಕೆ ಇಡೀ ಮನೆಯೇ ಭಸ್ಮ!

ಇನ್ನು ಹಮಾಸ್​ ದಾಳಿಯಲ್ಲಿ 1400 ಇಸ್ರೇಲಿಗಳು ಮೃತಪಟ್ಟಿದ್ದಾರೆ. ಒಟ್ಟಾರೆ ಈ ಯುದ್ಧದಲ್ಲಿ ಇದುವರೆಗೂ ಅಂದಾಜು 10 ಸಾವಿರ ಮಂದಿ ಬಲಿಯಾಗಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ.

ತುರ್ತು ಕದನ ವಿರಾಮ ಘೋಷಣೆ ಮಾಡುವಂತೆ ವಿಶ್ವಸಂಸ್ಥೆ ನಿರ್ಣಯ ಅಂಗೀಕರಿಸಿದ್ದರೂ ಇದಕ್ಕೆ ಬಗ್ಗದ ಇಸ್ರೇಲ್​ ಹಮಾಸ್ ವಿರುದ್ಧ ಯುದ್ಧವನ್ನು ಮುಂದುವರೆಸಿದೆ. ಇಸ್ರೇಲ್​ ಗಾಜಾಪಟ್ಟಿಗೆ ಇರುವ ಎಲ್ಲ ಸಂಪರ್ಕಗಳನ್ನು ತೆಗೆದು ಹಾಕುವ ದಾಳಿಯನ್ನು ಮುಂದುವರೆಸಿದೆ. ಈ ನಡುವೆ ಹೆಚ್ಚಿನ ಗಾಜಾ ನಿವಾಸಿಗಳು ಯುದ್ಧದಿಂದಾಗಿ ಗಾಜಾದಾ ದಕ್ಷಿಣ ಭಾಗಕ್ಕೆ ಪಲಾಯನ ಮಾಡಿದ್ದಾರೆ ಎಂದು ಇಸ್ರೇಲ್​ ಹೇಳಿದೆ.

Shwetha M