ಕೋಲಾರದಿಂದಲೇ ಚುನಾವಣೆಗೆ ಸ್ಪರ್ಧೆ – ಕಾಂಗ್ರೆಸ್ ಸಮಾವೇಶದಲ್ಲಿ ಸಿದ್ದರಾಮಯ್ಯ ಘೋಷಣೆ

ಕೋಲಾರದಿಂದಲೇ ಚುನಾವಣೆಗೆ ಸ್ಪರ್ಧೆ – ಕಾಂಗ್ರೆಸ್ ಸಮಾವೇಶದಲ್ಲಿ ಸಿದ್ದರಾಮಯ್ಯ ಘೋಷಣೆ

ಕೋಲಾರ: ಕೋಲಾರದಿಂದಲೇ ಮುಂದೆ ಚುನಾವಣೆ ಸ್ಪರ್ಧಿಸುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಇಂದು ಕೋಲಾರದಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಈ ಮಹತ್ವದ ಘೋಷಣೆ ಮಾಡಿರುವ ಸಿದ್ದರಾಮಯ್ಯ ಅಂತಿಮ ನಿರ್ಧಾರದ ಆಯ್ಕೆಯನ್ನು ಹೈಕಮಾಂಡ್‌ಗೆ ಬಿಟ್ಟಿದ್ದಾರೆ. ಆದ್ರೆ ಪ್ರತಿಪಕ್ಷ ನಾಯಕ ಕ್ಷೇತ್ರ ಆಯ್ಕೆ ಮಾಡಿಕೊಂಡ ಮೇಲೆ ಹೈಕಮಾಂಡ್‌ಗೆ ಬೇರೆ ಆಯ್ಕೆಗಳು ಇರೋದಿಲ್ಲ.. ಇವರು ಕಳಿಸಿದ ಪತ್ರಕ್ಕೆ ಅವರು ಸಹಿ ಹಾಕಿ ವಾಪಸ್‌ ಕಳಿಸಬೇಕಷ್ಟೇ.. ಹೀಗಾಗಿ ಸಿದ್ದರಾಮಯ್ಯ ಘೋಷಣೆ ಮಹತ್ವ ಪಡೆದಿದೆ.

ಇದನ್ನೂ ಓದಿ:  ‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆಗೆ ತಡೆಯಾಜ್ಞೆ: ಸಿದ್ದರಾಮಯ್ಯ ತಪ್ಪು ಮಾಡಿರಬೇಕು ಎಂದ ಬಿಜೆಪಿ

ಇಷ್ಟಕ್ಕೂ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡ್ತಿರುವುದು ಮುಖ್ಯವಾಗಿ ಎರಡು ಕಾರಣಗಳಿಗಾಗಿ.. ಒಂದು ಬೆಂಗಳೂರಿನಿಂದ ಜಾಸ್ತಿ ದೂರ ಓಡಾಡೋದಿಕ್ಕೆ ಆಗೋದಿಲ್ಲ. ಅಂದ್ರೆ ಬಾದಾಮಿಗೆಲ್ಲಾ ಹೋಗಿ ಬರೋದು ಕಷ್ಟ ಎನ್ನುವುದು ಒಂದು ಕಾರಣವಾದ್ರೆ,, ಅಸಲಿಗೆ ಕೋಲಾರದಲ್ಲಿರುವವ ಜಾತಿ ಲೆಕ್ಕಾಚಾರ ತಮಗೆ ಫೇವರ್‌ ಆಗಿದೆ ಎನ್ನುವ ನಂಬಿಕೆ ಸಿದ್ದರಾಮಯ್ಯ ಅವರದ್ದು. ಇಷ್ಟಕ್ಕೂ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಿದ್ರೆ, ಕೇವಲ ನಾವು ಒಂದು ಹಾಳೆಯ ಮೇಲೆ ಜಾತಿಗಳ ಲೆಕ್ಕ ಬರೆದು, ಅದನ್ನು ಕೂಡಿಸುತ್ತಾ ಹೋದ್ರೆ ಕೋಲಾರದಲ್ಲಿ ಸಿದ್ದರಾಮಯ್ಯ ಗೆಲುವಿನ ಅಂತರ 50 ಸಾವಿರ ದಾಟಬಹುದು. ಯಾಕಂದ್ರೆ ಇದು ಅಹಿಂದ ಪ್ರಾಬಲ್ಯದ ಕ್ಷೇತ್ರ. ದಲಿತರು ಮತ್ತು ಮುಸ್ಲಿಮರ ಜೊತೆಗೆ ಕುರುಬರು ಕೈಜೋಡಿಸಿದ್ರೆ ಸಿದ್ದರಾಮಯ್ಯ ವಿಧಾನಸಭೆಯ ಮೆಟ್ಟಿಲು ಹತ್ತುವುದು ಕಷ್ಟವಲ್ಲ.. ಮೊದಲು ನಾನು ಕೋಲಾರ ಆಯ್ಕೆ ಮಾಡಿಕೊಳ್ಳಲು ಎರಡು ಕಾರಣ ಎಂದು ಹೇಳಿದೆ.. ಆದ್ರೆ ಅದಕ್ಕಿಂತಲೂ ಮುಖ್ಯವಾದ ಮೂರನೇ ಇನ್ನೊಂದು ಕಾರಣವಿದೆ. ಅದೇನಂದ್ರೆ ತಾವು ಸ್ಪರ್ಧಿಸಿ ಗೆಲ್ಲುತ್ತಿದ್ದ ವರುಣಾ ಕ್ಷೇತ್ರವನ್ನು ಪಿತ್ರಾರ್ಜಿತ ಆಸ್ತಿಯಂತೆ ಮಗನಿಗೆ ಬಿಟ್ಟಿಕೊಟ್ಟಿರೋದನ್ನು ಹಾಗೆಯೇ ಉಳಿಸಿಕೊಂಡು ಹೋಗಬೇಕು ಎನ್ನುವ ಲೆಕ್ಕಾಚಾರವೂ ಇದೆ. ಇಲ್ದೇ ಹೋಗಿದ್ರೆ ಕಡೆಯ ಚುನಾವಣೆ ಅಂತ ಸಿದ್ದರಾಮಯ್ಯ ಅವರೇ ಹೇಳ್ತಿರೋದ್ರಿಂದ ಅವರಿಗೆ ವರುಣಾದಿಂದ ನಿಲ್ಲೋದು ಕಷ್ಟವೇನೂ ಇರಲಿಲ್ಲ.

suddiyaana