ಈ ಉಂಗುರ ಕೈಯಲ್ಲಿದ್ದರೆ Phonepay ಅಗತ್ಯವಿಲ್ಲ! – ಸ್ಮಾರ್ಟ್ ರಿಂಗ್ ನಲ್ಲಿ ಏನೆಲ್ಲಾ ಉಪಯೋಗ?
ಮೊದಲೆಲ್ಲಾ ಏನೇ ವ್ಯವಹಾರ ಮಾಡ್ಬೇಕು ಅಂದ್ರೂ ನೋಟುಗಳ ಮೂಲಕವೇ ನಡೆಯುತ್ತಿತ್ತು. ನಂತರ ATM ಕಾರ್ಡ್ ಇದ್ರೆ ಸಾಕಿತ್ತು. ಈಗ ಡಿಜಿಟಲ್ ಯುಗ. ಕಾಲದ ಜೊತೆ ವ್ಯವಹಾರವೂ ಬದಲಾಗಿದೆ. Paytm, Phonepay, Google Pay ಗಳಲ್ಲೇ ಎಲ್ಲಾ ವ್ಯವಹಾರಗಳೂ ನಡೆಯುತ್ತೆ. ಆದ್ರೆ ಇನ್ಮುಂದೆ ಕೈಯಲ್ಲಿ ಒಂದು ರಿಂಗ್ ಇದ್ರೆ ಸಾಕು ನೀವು ಸುಲಭವಾಗಿ ಪೇಮೆಂಟ್ ಮಾಡಬಹುದು.
ಇದನ್ನೂ ಓದಿ: ಹೆಣ್ಣು ಮಕ್ಕಳ ವಿವಾಹ ವಯಸ್ಸು 21ಕ್ಕೆ ಏರಿಕೆ! – ಕ್ಯಾಬಿನೆಟ್ ಸಭೆಯಲ್ಲಿ ಮಹತ್ವದ ನಿರ್ಧಾರ!
ಟೆಕ್ನಾಲಜಿ ದಿನದಿನಕ್ಕೂ ಅಪ್ಡೇಟ್ ಆಗ್ತಿರುತ್ತೆ. ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನವು ಇದೀಗ ಹೊಸ ಪಾವತಿ ವಿಧಾನವನ್ನು ಕಂಡು ಹಿಡಿದಿದೆ. ಇನ್ಮುಂದೆ ATM ಕಾರ್ಡ್, Paytm, Phonepay ಇತ್ಯಾದಿಗಳ ಅಗತ್ಯವಿರೋದಿಲ್ಲ. ಇದರ ಬದಲಾಗಿ ಕೈನಲ್ಲಿ ಉಂಗುರವಿದ್ದರೆ ಸಾಕು. ತುಂಬಾ ಜನ ಕೈಗೆ ಉಂಗುರ ಹಾಕಿಕೊಳ್ತಾರೆ. ಕೆಲವರು ಫ್ಯಾಷನ್ ವಸ್ತುವಾಗಿ ಧರಿಸುತ್ತಾರೆ. ಆದರೆ ಈಗ ಅದೇ ರಿಂಗ್ ಸ್ಮಾರ್ಟ್ ಟೂಲ್ ಆಗಿ ಮಾರ್ಪಟ್ಟಿದೆ. ಕೈಯಲ್ಲಿರುವ ಉಂಗುರದೊಂದಿಗೆ ನಗದು ರಹಿತ ಪಾವತಿ ಮಾಡಬಹುದು. ಇದನ್ನು ಸ್ಮಾರ್ಟ್ ರಿಂಗ್ ಎಂದು ಕರೆಯಲಾಗುತ್ತದೆ. ಯಾವುದೇ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳಿಲ್ಲದೆ ಮತ್ತು Paytm ಅಥವಾ ಫೋನ್ ಕರೆಗಳ ಅಗತ್ಯವಿಲ್ಲದೆ ಈ ರಿಂಗ್‌ನೊಂದಿಗೆ ಪೇಮೆಂಟ್ ಮಾಡಬಹುದು.
ಸ್ಮಾರ್ಟ್ ರಿಂಗ್ ಅನ್ನು ಹಾಂಗ್ ಕಾಂಗ್ ಮೂಲದ ಟೋಪಿ ಎಂಬ ಕಂಪನಿ ಅಭಿವೃದ್ಧಿಪಡಿಸಿದೆ. ಈ ರಿಂಗ್ ಸ್ಮಾರ್ಟ್ ವೈರ್‌ಲೆಸ್ ಪೇಮೆಂಟ್ ಚಿಪ್‌ಗಳನ್ನು ಒಳಗೊಂಡಿದ್ದು, ಫೋನ್ ಅಪ್ಲಿಕೇಶನ್‌ನೊಂದಿಗೆ ಸಂಯೋಜಿತವಾಗಿ ಕಾರ್ಯನಿರ್ವಹಿಸುತ್ತದೆ. ಬಳಕೆದಾರರು ಫೋನ್‌ನಲ್ಲಿರುವ ಆಯಾ ಅಪ್ಲಿಕೇಶನ್‌ನಿಂದ ಬ್ಯಾಂಕ್ ಖಾತೆಗಳನ್ನು ರಿಂಗ್ಗೆ ಲಿಂಕ್ ಮಾಡಬೇಕು. ಆ ನಂತರ ನೀವು ಯಾವುದೇ ಶಾಪ್, ಪೇಮೆಂಟ್ ಯಂತ್ರದ ಬಳಿ ಈ ಉಂಗುರವನ್ನು ತೋರಿಸುವ ಮೂಲಕ ಸುಲಭವಾಗಿ ಪಾವತಿ ಮಾಡಬಹುದು. ಹಾಗಂತ ಈ ಉಂಗುರವನ್ನು ಚಾರ್ಜ್ ಮಾಡುವ ಅಗತ್ಯವಿಲ್ಲ. ಉಂಗುರದ ತಂತ್ರಜ್ಞಾನವನ್ನು ಆಭರಣ ಕಂಪನಿಗಳಿಗೆ ಒದಗಿಸಿದರೆ, ಬೆಳ್ಳಿ ಮತ್ತು ಚಿನ್ನದಿಂದಲೂ ಸ್ಮಾರ್ಟ್ ಉಂಗುರಗಳನ್ನು ತಯಾರಿಸಬಹುದು. ಈ ಸ್ಮಾರ್ಟ್ ರಿಂಗ್ ಇದೀಗ ನಮ್ಮ ಮಾಡುಕಟ್ಟೆಯಲ್ಲೂ ಬಂದಿದೆ.
ಸ್ವದೇಶಿ ಗ್ರಾಹಕ ಎಲೆಕ್ಟ್ರಾನಿಕ್ಸ್ ಸ್ಟಾರ್ಟ್ಅಪ್ ಸೆವೆನ್ ಸಂಪರ್ಕವಿಲ್ಲದ ಪಾವತಿಗಾಗಿ 7 ರಿಂಗ್ ಎಂಬ ಸ್ಮಾರ್ಟ್ರಿಂಗ್ ಬಿಡುಗಡೆ ಮಾಡಿದೆ. NPCI ಸಹಯೋಗದೊಂದಿಗೆ ಭಾರತೀಯ ಬ್ರಾಂಡ್ 7 ನಿಂದ ಅಭಿವೃದ್ಧಿಪಡಿಸಲಾಗಿದೆ. 7 ವಿವಿಧ ಗಾತ್ರಗಳಲ್ಲಿ ಲಭ್ಯವಿರಲಿದೆ.