ಸಾಫ್ಟ್ ಡ್ರಿಂಕ್ಸ್ ನಿಂದ ಕೂದಲಿಗೆ ಸಂಚಕಾರ! – ಎನರ್ಜಿ ಕೊಡೋದಕ್ಕಿಂತ ಕೂದಲು ಉದುರುತ್ತೆ ಹುಷಾರ್!
![ಸಾಫ್ಟ್ ಡ್ರಿಂಕ್ಸ್ ನಿಂದ ಕೂದಲಿಗೆ ಸಂಚಕಾರ! – ಎನರ್ಜಿ ಕೊಡೋದಕ್ಕಿಂತ ಕೂದಲು ಉದುರುತ್ತೆ ಹುಷಾರ್!](https://suddiyaana.com/wp-content/uploads/2024/01/೨.jpg)
ಕೂದಲು ಸೊಂಪಾಗಿ, ದಟ್ಟವಾಗಿರಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಕೂದಲು ಚೆನ್ನಾಗಿ ಬೆಳೆಯಲು ವಿವಿಧ ಶ್ಯಾಂಪೂಗಳು ಮತ್ತು ಎಣ್ಣೆಗಳನ್ನು ಬಳಸುತ್ತಾರೆ. ಆದರೆ ಈಗೀಗ ಅತಿ ಚಿಕ್ಕ ವಯಸ್ಸಿನವರಲ್ಲೂ ಕೂದಲು ಉದುರುವ ಸಮಸ್ಯೆ ಜಾಸ್ತಿಯಾಗುತ್ತಿದೆ. ಇದಕ್ಕೆ ಹಲವು ಕಾರಣಗಳಿವೆ. ಒತ್ತಡ, ಅನುವಂಶಿಕ ಸಮಸ್ಯೆಗಳು, ಹಾರ್ಮೋನುಗಳ ಅಸಮತೋಲನ ಅಥವಾ ಮಾದಕ ದ್ರವ್ಯ ಸೇವನೆಯಿಂದ ತಲೆ ಕೂದಲು ಉದುರಬಹುದು. ಆದರೆ, ಪ್ರತಿದಿನ ಸಾಫ್ಟ್ ಡ್ರಿಂಕ್ಸ್ ಸೇವನೆಯಿಂದಲೂ ಬೋಳು ತಲೆಯ ಸಮಸ್ಯೆ ಎದುರಾಗಬಹುದು ಎಂಬ ಆತಂಕಕಾರಿ ಸುದ್ದಿ ಹೊರಬಿದ್ದಿದೆ.
ಇದನ್ನೂ ಓದಿ: ಮಗುವಿನ ಕಿವಿ ಚುಚ್ಚಿಸೋದು ಏಕೆ? – ಸಂಪ್ರದಾಯದ ಹಿಂದಿನ ವೈಜ್ಞಾನಿಕ ಕಾರಣಗಳೇನು?
ಬೀಜಿಂಗ್‌ನ ಸಿಂಘುವಾ ವಿಶ್ವವಿದ್ಯಾಲಯದ ಸಂಶೋಧಕರ ಅಧ್ಯಯನದ ಪ್ರಕಾರ, ಕೆಲವು ರೀತಿಯ ಪಾನೀಯಗಳನ್ನು ಕುಡಿದರೆ ಕೂದಲು ಉದುರೋದು ಹೆಚ್ಚಾಗುತ್ತದೆ ಎಂದು ಗೊತ್ತಾಗಿದೆ. ಎನರ್ಜಿ ಡ್ರಿಂಕ್ಸ್ ಅಥವಾ ಸಕ್ಕರೆ ಪಾನೀಯಗಳು ಮತ್ತು ಸೋಡಾವನ್ನು ಸೇವಿಸುವ ಜನರು ಕೂದಲು ಉದುರುವಿಕೆ ಹೆಚ್ಚು ಒಳಗಾಗುತ್ತಾರೆ ಎಂದು ಅಧ್ಯಯನದಲ್ಲಿ ಬಯಲಾಗಿದೆ. Energy drinks ಪರಿಣಾಮ ಪುರುಷರಲ್ಲಿ ಹೆಚ್ಚು ಗೋಚರಿಸುತ್ತದೆ. ವಿಶೇಷವಾಗಿ 13ರಿಂದ 29 ವರ್ಷ ವಯಸ್ಸಿನ ಮಧ್ಯಮ ವಯಸ್ಸಿನವರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅಂತಾ ಗೊತ್ತಾಗಿದೆ.