ಪೂರ್ವ ಲಡಾಖ್‌ನ ನ್ಯೋಮಾ ಬೆಲ್ಟ್‌ನಲ್ಲಿ ಸುಧಾರಿತ ವಾಯುನೆಲೆ ನಿರ್ಮಾಣ – ಇನ್ನಾದ್ರೂ ಕಂತ್ರಿ ಬುದ್ದಿ ನಿಲ್ಲಿಸುತ್ತಾ ಚೀನಾ?

ಪೂರ್ವ ಲಡಾಖ್‌ನ ನ್ಯೋಮಾ ಬೆಲ್ಟ್‌ನಲ್ಲಿ ಸುಧಾರಿತ ವಾಯುನೆಲೆ ನಿರ್ಮಾಣ – ಇನ್ನಾದ್ರೂ ಕಂತ್ರಿ ಬುದ್ದಿ ನಿಲ್ಲಿಸುತ್ತಾ ಚೀನಾ?

ನವದೆಹಲಿ: ಭಾರತದ ಗಡಿ ಪ್ರದೇಶ ಅಕ್ಸಾಯ್ ಚಿನ್ ಒಳಗೊಂಡ ಮ್ಯಾಪ್ ಅನ್ನು ಚೀನಾ ಬಿಡುಗಡೆ ಮಾಡಿದ ಬೆನ್ನಲ್ಲೇ ಇತ್ತ ಗಡಿಯಲ್ಲಿ ಭಾರತ ಸರ್ಕಾರ ಕೂಡ ತನ್ನ ಚಟುವಟಿಕೆ ಮುಂದುವರೆಸಿದೆ. ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಪೂರ್ವ ಲಡಾಖ್‌ನ ನ್ಯೋಮಾ ಬೆಲ್ಟ್‌ನಲ್ಲಿ ಸುಧಾರಿತ ವಾಯುನೆಲೆ ನಿರ್ಮಾಣಕ್ಕೆ ಮುಂದಾಗಿದೆ.

ಪೂರ್ವ ಲಡಾಖ್‍ನ ನ್ಯೋಮಾ ಬೆಲ್ಟ್‌ನಲ್ಲಿ ಸುಮಾರು 218 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಏರ್‌ಫಿಲ್ಡ್ ನಿರ್ಮಿಸಲು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಮುಂದಾಗಿದೆ. ಈ ಏರ್‌ಫಿಲ್ಡ್ ಅನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೆಪ್ಟೆಂಬರ್ 12 ರಂದು ಇದಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸುಧಾರಿತಾ ವಾಯುನೆಲೆ ಇದಾಗಿದ್ದು, ಸೇನಾ ಹೆಲಿಕಾಫ್ಟರ್‌ಗಳು ಮತ್ತು ವಿಶೇಷ ಕಾರ್ಯಾಚರಣೆಯ ವಿಮಾನಗಳನ್ನು ಲ್ಯಾಂಡ್ ಮಾಡಲು ಅನುಕೂಲವಾಗುವಂತೆ ನಿರ್ಮಾಣ ಮಾಡಲಾಗುತ್ತದೆ. ಇದನ್ನು ಚೀನಾದ ನಿಜ ಗಡಿ ನಿಯಂತ್ರಣ ರೇಖೆಯಿಂದ 46 ಕಿಮೀ ದೂರದಲ್ಲಿ ನಿರ್ಮಿಸಲಾಗುತ್ತಿದೆ.

ಚೀನಾದೊಂದಿಗೆ ಇರುವ ಗಡಿ ವಿವಾದಗಳಿಂದ ಈ ಯೋಜನೆ ಮಹತ್ವ ಪಡೆದಿದೆ.  ಇದೇ ವೇಳೆ 2,941 ಕೋಟಿ ರೂಪಾಯಿ ವೆಚ್ಚದ ವಿವಿಧ 90 ಯೋಜನೆಗಳಿಗೂ ರಕ್ಷಣಾ ಸಚಿವರು ಚಾಲನೆ ನೀಡಲಿದ್ದಾರೆ.

suddiyaana