ಎಡಪಂಥೀಯ ಮಹಿಳೆಯರಿಂತ ಬಲಪಂಥೀಯರೇ ಹೆಚ್ಚು ಸಂತೋಷದಿಂದ ಇರುತ್ತಾರೆ! – ಇದು ಭಾವನೆಗಳ ವಿಮರ್ಶೆ!

ಎಡಪಂಥೀಯ ಮಹಿಳೆಯರಿಂತ ಬಲಪಂಥೀಯರೇ ಹೆಚ್ಚು ಸಂತೋಷದಿಂದ ಇರುತ್ತಾರೆ! – ಇದು ಭಾವನೆಗಳ ವಿಮರ್ಶೆ!

ಬಲಪಂಥೀಯ ಹೆಣ್ಣು ಮಕ್ಕಳು ಎಡಪಂಥೀಯ ಹೆಣ್ಣು ಮಕ್ಕಳಿಗಿಂತ ಜಾಸ್ತಿ ಆಕರ್ಷಕರಾಗಿರುತ್ತಾರೆ ಮತ್ತು ಸಂತೋಷವಾಗಿರುತ್ತಾರಂತೆ. ಇಂತಹದ್ದೊಂದು ಕುತೂಹಲಕಾರಿ ಹೇಳಿಕೆಯನ್ನ ಕೊಡ್ತಾ ಇರೋದು ಆರ್ಟಿಫಿಷಿಯಲ್ ಇಂಟಲಿಜೆಂನ್ಸ್. ಹೌದೂ.. ಕೃತಕ ಬುದ್ಧಿಮತ್ತೆ ತನ್ನ ಸಾಮರ್ಥ್ಯದ ಗಡಿಯನ್ನ ವಿಸ್ತರಿಸುತ್ತಾ ಇದೆ. ತನ್ನ ಕೌಶಲ್ಯವನ್ನು ಪ್ರತಿಯೊಂದು ಕ್ಷೇತ್ರದಲ್ಲೂ ತೋರಿಸುತ್ತಾ ಇರುವ AI ಈಗ ವ್ಯಕ್ತಿಯ ಮುಖ ಭಾವನೆಯಿಂದ ರಾಜಕೀಯ ದೃಷ್ಟಿಕೋನವನ್ನು ಊಹಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿದೆ.

ಇದನ್ನೂ ಓದಿ: ಟೈಟಾನಿಕ್ ಅವಶೇಷ ವೀಕ್ಷಣೆಗೆ ತೆರಳಿದ್ದ ಸಬ್‌ಮೆರಿನ್ ಛಿದ್ರ – ಐವರ ಸಾವಿಗೆ ಆಮ್ಲಜನಕ ಕೊರತೆ ಕಾರಣವಲ್ಲ!

ಡೆನ್ಮಾರ್ಕ್ ಮತ್ತು ಸ್ವೀಡನ್‌ನ ಸಂಶೋಧಕರ ತಂಡವು ನಡೆಸಿದ ಹೊಸ ಸಂಶೋಧನೆಯಿಂದ ಇಂತಹದ್ದೊಂದು ಕುತೂಹಲಕಾರಿ ಮಾಹಿತಿಯೊಂದು ಬೆಳಕಿಗೆ ಬಂದಿದೆ.  ಕೃತಕ ಬುದ್ಧಿಮತ್ತೆಯು ವ್ಯಕ್ತಿಯ ಮುಖ ಭಾವನೆಯ ಆಧಾರದ ಮೇಲೆ ವ್ಯಕ್ತಿಯ ರಾಜಕೀಯ ದೃಷ್ಟಿಕೋನಗಳನ್ನು ಊಹಿಸಲು ಸಾಧ್ಯವಾಗುತ್ತದೆ ಎಂದು ಎಂದು ಈ ಅಧ್ಯಯನ ವರದಿ ಹೇಳುತ್ತಿದೆ. ಸುಮಾರು ಶೇ. 61 ಪ್ರಕರಣಗಳಲ್ಲಿ AI ಮಾದರಿಯು ಜನರ ರಾಜಕೀಯ ಸಂಬಂಧಗಳನ್ನು ನಿಖರವಾಗಿ ಊಹಿಸುತ್ತದೆ ಎಂದು ಅಧ್ಯಯನವು ಕಂಡುಹಿಡಿದಿದೆ.

ನೇಚರ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಮುಖದ ಅಭಿವ್ಯಕ್ತಿಗಳಲ್ಲಿನ ವ್ಯತ್ಯಾಸಗಳು ರಾಜಕೀಯ ದೃಷ್ಟಿಕೋನಗಳೊಂದಿಗೆ ಸಂಬಂಧ ಹೊಂದಿವೆ. ಪುರುಷ ಮತ್ತು ಸ್ತ್ರೀ ಬಲಪಂಥೀಯ ತಂಡವು ತಮ್ಮ ಎಡ-ಪಂಥೀಯ ಕೌಂಟರ್ಪಾರ್ಟ್ಸ್‌ಗಳಿಗಿಂತ ಸಂತೋಷವಾಗಿ ಕಾಣಿಸಿಕೊಂಡಿವೆ. ಆದರೆ ಲಿಬರಲ್ ಅಭ್ಯರ್ಥಿಗಳು ಹೆಚ್ಚು ತಟಸ್ಥ ಅಭಿವ್ಯಕ್ತಿಗಳನ್ನು ಪ್ರದರ್ಶಿಸಿದ್ದಾರೆ. ಇಲ್ಲಿ ವ್ಯಕ್ತಿಯ ಆಕರ್ಷಕ ಮಟ್ಟ ಅವರ ರಾಜಕೀಯ ತತ್ವದೊಂದಿಗೆ ನೇರವಾಗಿ ಸಂಬಂಧ ಇರುವುದನ್ನು ಅಧ್ಯಯನಕಾರರು ಗಮನಹರಿಸಿದ್ದಾರೆ.

ಬ್ಯುಸಿನೆಸ್ ಇನ್‌ಸೈಡರ್‌ನ ಪ್ರಕಾರ, ತಮ್ಮ ಸೌಂದರ್ಯದ ಆಧಾರದ ಮೇಲೆ ಹೆಚ್ಚು ಆಕರ್ಷಕವಾಗಿ ಪರಿಗಣಿಸಲ್ಪಟ್ಟ ಮಹಿಳೆಯರು ಸಂಪ್ರದಾಯವಾದಿ ದೃಷ್ಟಿಕೋನಗಳನ್ನು ಹೊಂದಿರುತ್ತಾರೆ ಎಂದು ಊಹಿಸಲಾಗಿದೆ. ಹಾಗಿದ್ದರೂ ಪುರುಷರ ಆಕರ್ಷಣೆ ಮತ್ತು ಬಲಪಂಥೀಯ ಒಲವುಗಳ ನಡುವೆ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಅಧ್ಯಯನ ಹೇಳುತ್ತಿದೆ. ಈ  ಅಧ್ಯಯನಕ್ಕಾಗಿ ಸಂಶೋಧಕರು ಡ್ಯಾನಿಶ್ ರಾಜಕೀಯ ಅಭ್ಯರ್ಥಿಗಳ 3,233 ಚಿತ್ರಗಳ ಡೇಟಾಸೆಟ್ ಅನ್ನು ಬಳಸಿದ್ದರು.

ಕೃತಕ ಬುದ್ಧಿಮತ್ತೆಯ ಸಾಮರ್ಥ್ಯವು ಅಪಾಯಕಾರಿಯೇ?

AI ತಂತ್ರಜ್ಞಾನದ ಇಂತದೊಂದು ಸಾಮರ್ಥ್ಯವು ಪಕ್ಷಪಾತದಂತಹ ಫಲಿತಾಂಶಗಳಿಗೆ ಎಡೆ ಮಾಡಿಕೊಡಬಹುದು ಎಂದು ಊಹಿಸಲಾಗುತ್ತಿದೆ. ಉದ್ಯೋಗ ವಲಯದಲ್ಲಿ ಇದು ಪರಿಣಾಮಬೀರಬಹುದು ಎಂದು ಹೇಳಲಾಗುತ್ತಾ ಇದೆ. ವ್ಯಕ್ತಿ ಭಾವಚಿತ್ರಗಳು ಸಾಮಾನ್ಯವಾಗಿ ಉದ್ಯೋಗದಾತರಿಗೆ ಲಭ್ಯವಿರುತ್ತದೆ.  ನೇಮಕಾತಿಯಲ್ಲಿ ತೊಡಗಿರುವವರು ಸಿದ್ಧಾಂತದ ಆಧಾರದ ಮೇಲೆ ತಾರತಮ್ಯ ಮಾಡುವ ಅವಕಾಶವಿರುತ್ತದೆ ಎಂಬ ವಿಚಾರ ಈ ಅಧ್ಯಯನದಿಂದ ಗೊತ್ತಾಗಿದೆ.

suddiyaana