ಪುತ್ತೂರಿಗಿಲ್ಲ ಪುತ್ತಿಲ – ಬಿಜೆಪಿ ಹಿಂದುತ್ವದ ಪೈಪೋಟಿಯಲ್ಲಿ ಗೆದ್ದು ಬೀಗಿದ ಕಾಂಗ್ರೆಸ್
ಪುತ್ತೂರಿಗೆ ಪುತ್ತಿಲ ಎಂಬ ಅಭಿಯಾನದಡಿ ಈ ಬಾರಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಬಹಳಷ್ಟು ಪ್ರಚಾರ ಪಡೆದಿತ್ತು. ಈ ಬಾರಿ ಬಿಜೆಪಿ ವರ್ಸಸ್ ಹಿಂದುತ್ವದ ನಡುವೆ ಭಾರೀ ಪೈಪೋಟಿ ನಡೆದಿತ್ತು. ಪುತ್ತೂರಿಗೆ ಪುತ್ತಿಲ ಎಂಬ ಟ್ರೆಂಡ್ ಜೋರಾಗಿದ್ದರು ಕೂಡಾ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದ್ದಾರೆ. ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂಬಂತೆ ಬಿಜೆಪಿ ಮತ್ತು ಹಿಂದುತ್ವದ ಪೈಪೋಟಿಗೆ ಕಾಂಗ್ರೆಸ್ ಗೆದ್ದು ಬೀಗಿದೆ.
ಇದನ್ನೂ ಓದಿ: ರಾಮನಗರದಲ್ಲಿ ಅಮ್ಮನ ತ್ಯಾಗ ವ್ಯರ್ಥವಾಯ್ತು..! – ಜೆಡಿಎಸ್ ಭದ್ರಕೋಟೆಯಲ್ಲೇ ನಿಖಿಲ್ ಕುಮಾರಸ್ವಾಮಿಗೆ ಸೋಲು
ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಅರುಣ್ ಕುಮಾರ್ ಪುತ್ತಿಲ 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಎಂದರೆ ಹಿಂದುತ್ವ, ಹಿಂದುತ್ವ ಎಂದರೆ ಬಿಜೆಪಿ ಎನ್ನುವ ಪರಿಸ್ಥಿತಿ ದಕ್ಷಿಣ ಕನ್ನಡದ ಪುತ್ತೂರಿನಲ್ಲಿತ್ತು. ಆದರೆ, ಅರುಣ ಪುತ್ತಿಲ ಬಿಜೆಪಿಗೆ ಭಾರೀ ಪೈಪೋಟಿ ನೀಡಿದ್ದರು. ಕೊನೆಗೂ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.