ಕಾಂಗ್ರೆಸ್ ಸರ್ವೇ ಪಾಲಿಟಿಕ್ಸ್! – ಗುಪ್ತಚರ ವರದಿಯಲ್ಲಿ ಸಿಕ್ಕಿದ್ಯಾ ಕೈ ಗೆ ಅಚ್ಚರಿಯ ಫಲಿತಾಂಶ?
2023ರ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನ ಗೆಲ್ಲುವ ಮೂಲಕ ಪ್ರಚಂಡ ಜಯ ಸಾಧಿಸಿದ್ದ ಕಾಂಗ್ರೆಸ್ಗೆ ಲೋಕಸಭಾ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಗ್ಯಾರಂಟಿ ಯೋಜನೆಗಳನ್ನ ಜಾರಿ ಮಾಡಿ ನುಡಿದಂತೆ ನಡೆದಿದ್ದೇವೆ ಎನ್ನುತ್ತಿರುವ ಕಾಂಗ್ರೆಸ್ ಅಳೆದು ತೂಗಿ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದೆ. ಅದ್ರಲ್ಲೂ ಈ ಸಲ ಕುಟುಂಬ ರಾಜಕಾರಣಕ್ಕೇ ಹೆಚ್ಚು ಮಣೆ ಹಾಕಿದ್ದು, 28 ಕ್ಷೇತ್ರಗಳ ಫೈಕಿ 20 ಕ್ಷೇತ್ರಗಳನ್ನ ಗೆಲ್ಲುವ ಟಾರ್ಗೆಟ್ ಹಾಕಿಕೊಂಡಿದೆ. ಕಳೆದ ವರ್ಷ ಜಸ್ಟ್ ಒಂದೇ ಒಂದು ಸ್ಥಾನ ಅದೂ ಕೂಡ ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ ಸುರೇಶ್ ಗೆದ್ದಿದ್ದು ಬಿಟ್ರೆ ಕಾಂಗ್ರೆಸ್ ಅಕ್ಷರಶಃ ಧೂಳೀಪಟವಾಗಿತ್ತು. ಆದ್ರೆ ಈ ಸಲ ಮಾತ್ರ ತುಂಬಾನೇ ಜೋಶ್ನಲ್ಲಿದೆ. ಇದ್ರ ನಡುವೆ ರಾಜ್ಯದಲ್ಲಿ ಒಂದು ಸುತ್ತಿನ ಗುಪ್ತಚರ ವರದಿ ತರಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಫುಲ್ ಖುಷ್ ಆಗಿದ್ದಾರೆ.
ಇದನ್ನೂ ಓದಿ:3 ರನ್ ಗೆ ಧೋನಿ ಬಂದಿದ್ದೇಕೆ? – ಜಡ್ಡುಗೆ ಕ್ರಿಕೆಟ್ ತಲಪತಿ ಎಂದಿದ್ಯಾರು?- ರುತುರಾಜ್ ಲೆಕ್ಕಕ್ಕಷ್ಟೇ ನಾಯಕನಾ?
ಕಾಂಗ್ರೆಸ್ ಸರ್ವೇ ಪಾಲಿಟಿಕ್ಸ್!
ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರಗಳ ಲೆಕ್ಕಾಚಾರ ಮತ್ತು ಅಭ್ಯರ್ಥಿಗಳ ಗೆಲುವಿನ ಬಗ್ಗೆ ಒಂದು ತಿಂಗಳ ಹಿಂದೆಯೇ ಕಾಂಗ್ರೆಸ್ನಿಂದ ಗುಪ್ತಚರ ಸರ್ವೆ ನಡೆಸಲಾಗಿದೆ. ಸರ್ವೆ ರಿಸಲ್ಟ್ ನೋಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅಚ್ಚರಿಗೊಂಡಿದ್ದಾರೆ. ಕಾಂಗ್ರೆಸ್ ನ ಐದು ಗ್ಯಾರಂಟಿ ಯೋಜನೆಗಳಿಗೆ ಕಾಂಗ್ರೆಸ್ ಪರ ರಾಜ್ಯದ ಜನತೆ ಒಲವು ವ್ಯಕ್ತಪಡಿಸಿದ್ದಾರೆ ಎಂದು ವರದಿ ಹೇಳಲಾಗ್ತಿದೆ. ಲೋಕಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆ ಮಾಡುವ ಮುನ್ನ ಮತದಾರರ ಒಲವಿನ ಬಗ್ಗೆ ಸಿಎಂ ಸಿದ್ದರಾಮಯ್ಯ ಗುಪ್ತಚರ ವರದಿಯ ಬಗ್ಗೆ ಕಲೆ ಹಾಕಿದ್ದಾರೆ. ಅಲ್ದೇ ಕಾಂಗ್ರೆಸ್ ಹೈಕಮಾಂಡ್ 20 ಕ್ಷೇತ್ರಗಳನ್ನ ಗೆಲ್ಲಬೇಕೆಂದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಟಾಸ್ಕ್ ಕೊಟ್ಟ ಹಿನ್ನೆಲೆಯಲ್ಲಿ ಸರ್ವೇ ಮೊರೆ ಹೋದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸರ್ವೇ ವರದಿ ಬಳಿಕವೇ ಅಭ್ಯರ್ಥಿ ಆಯ್ಕೆ ಮಾಡಿದ್ದಾರೆ. ಅಭ್ಯರ್ಥಿ ಆಯ್ಕೆ ಮುಗಿದ ಬಳಿಕ ಇನ್ನೊಂದು ಸರ್ವೆ ಮಾಡಿಸಿದ್ದು, ಇದೀಗ ಸರ್ವೆಯ ರಿಪೋರ್ಟ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈ ಸೇರಿದೆ.
ಮೊದಲ ಸರ್ವೇಯಿಂದ ಶಾಕ್ ಗೆ ಒಳಗಾಗಿದ್ದ ಕಾಂಗ್ರೆಸ್ಗೆ ಎರಡನೇ ಸರ್ವೆಯಲ್ಲಿ ಕಾಂಗ್ರೆಸ್ ಸ್ಥಾನ ಎರಡಂಕಿ ದಾಟಲಿದೆ ಎಂದು ಆಂತರಿಕ ವರದಿ ತಿಳಿಸಿದೆ. ಕ್ಷೇತ್ರದಲ್ಲಿ ಏನು ಚರ್ಚೆ ಆಗುತ್ತಿದೆ, ಅಭ್ಯರ್ಥಿಗಳ ಪರವಾಗಿ ಕ್ಷೇತ್ರದ ಜನರ ಒಲವು ಹೇಗಿದೆ. ಸರ್ಕಾರದ ಗ್ಯಾರೆಂಟಿಗಳ ಬಗ್ಗೆ ಜನ ಅಭಿಪ್ರಾಯ ಏನು, ರಾಜ್ಯದಲ್ಲಿ ಮೋದಿ ಅಲೆ ಇದೆಯಾ ಎಂಬ ಪ್ರಶ್ನೆಗಳನ್ನ ಮುಂದಿಟ್ಟು ಸರ್ವೆಯನ್ನ ಮಾಡಲಾಗಿದೆ. ಹಾಗೇ ಪತ್ರಿ ಕ್ಷೇತ್ರದ ಮತದಾರರ ನಾಡಿಮಿಡಿತದ ಬಗ್ಗೆ ಕುರಿತು ಸರ್ವೆ ನಡೆಸಿದ್ದು, ಈ ಸಮೀಕ್ಷೆಯಿಂದ ಕಾಂಗ್ರೆಸ್ ನಾಯಕರಿಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಈ ವರದಿಯಲ್ಲಿ ಕಾಂಗ್ರೆಸ್ 11-13 ಸ್ಥಾನ ಗೆಲ್ಲುತ್ತದೆ ಎಂದು ವರದಿಯಲ್ಲಿ ತಿಳಿದು ಬಂದಿದೆ. ಯಾವ ಕ್ಷೇತ್ರಗಳಲ್ಲಿ ಗೆಲ್ಲೋ ಚಾನ್ಸ್ ಇದೆ ಅನ್ನೋದನ್ನ ನೋಡೋದಾದ್ರೆ..
ಎಲ್ಲೆಲ್ಲಿ ‘ಕೈ’ ವಶ?
ಡಿಕೆ ಸುರೇಶ್ ಸ್ಪರ್ಧೆ ಮಾಡಿರುವ ಬೆಂಗಳೂರು ಗ್ರಾಮಾಂತರದಲ್ಲಿ ಈ ಸಲವೂ ಕಾಂಗ್ರೆಸ್ ಗೆಲ್ಲುವ ಅವಕಾಶ ಇದೆ. ಹಾಗೇ ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಉಡುಪಿ ಚಿಕ್ಕಮಗಳೂರು, ತುಮಕೂರು , ಚಿತ್ರದುರ್ಗ, ರಾಯಚೂರಿನಲ್ಲಿ ಮತದಾರರು ಕೈ ಹಿಡಿಯುವ ಸಾಧ್ಯತೆ ಇದೆ. ಉಳಿದಂತೆ ಬೀದರ್ , ಚಿಕ್ಕೋಡಿ, ದಾವಣಗೆರೆ ಕೂಡ ಗೆಲ್ಲುವ ಲಿಸ್ಟ್ನಲ್ಲಿದೆ. ಇನ್ನು ಹಾವೇರಿ ಮತ್ತು ಹಾಸನ ಕ್ಷೇಥ್ರಗಳಲ್ಲಿ ಫಿಫ್ಟಿ ಫಫ್ಟಿ ಚಾನ್ಸಸ್ ಇದೆ.
ದಿನ ದಿನಕ್ಕೂ ಲೋಕಸಭಾ ಚುನಾವಣಾ ಅಖಾಡ ರಂಗೇರುತ್ತಿದ್ದು, ಅಭ್ಯರ್ಥಿಗಳು ಈಗಾಗ್ಲೇ ಗೆಲುವಿನ ಲೆಕ್ಕಾಚಾರಕ್ಕಾಗಿ ಜನರ ಹತ್ತಿರ ಹೋಗಿ ಮತಬೇಟೆ ನಡೆಸುತ್ತಿದ್ದಾರೆ. ಆದ್ರೆ ಎಷ್ಟೇ ಪ್ರಚಾರ, ಎಷ್ಟೇ ಅಭಿಮಾನ, ತೋರಿಸಿದ್ರೂ ಮತಮುದ್ರೆಯ ಮೂಲಕ ಭವಿಷ್ಯ ಬರೆಯೋದು ಮತದಾರರೇ.