ವಿಧಾನಸಭೆ, ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ರಣತಂತ್ರ – ವಿವಿಧ ರಾಜ್ಯಗಳಲ್ಲಿ ಹಲವು ಬದಲಾವಣೆ!
ಹಿಮಾಚಲಪ್ರದೇಶ, ಕರ್ನಾಟಕ ವಿಧಾನಸಭೆ ಚುನಾವಣೆ ಗೆಲುವಿನ ಬಳಿಕ ಕಾಂಗ್ರೆಸ್ನ ಫೋಕಸ್ ಈಗ 2024ರ ಲೋಕಸಭೆ ಮತ್ತು ಈ ವರ್ಷ ನಡೆಯಲಿರುವ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಯತ್ತ ಶಿಫ್ಟ್ ಆಗಿದೆ. ಈ ಎಲ್ಲಾ ಚುನಾವಣೆಗಳನ್ನ ಗೆಲ್ಲೋಕೆ ಪಕ್ಷದಲ್ಲಿ ಒಂದಷ್ಟು ಮಹತ್ವದ ಬದಲಾವಣೆಗಳನ್ನ ಮಾಡೋಕೂ ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸ್ತಿದೆ ಅನ್ನೋ ಮಾಹಿತಿ ಸಿಕ್ಕಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢ ತೆಲಂಗಾಣ ವಿಧಾನಸಭೆ ಚುನಾವಣೆ ಗೆಲ್ಲೋಕೆ ಕಾಂಗ್ರೆಸ್ ರಣತಂತ್ರ ಹೆಣೀತಿದೆ. ಹಾಗೇ ಕಾಂಗ್ರೆಸ್ ಪಾಳಯದಲ್ಲಿ ಒಂದಷ್ಟು ರಾಜ್ಯಗಳಲ್ಲಿ ಬದಲಾವಣೆ ಆಗುವ ಸಾಧ್ಯತೆಗಳೂ ಇದೆ.
ಇದನ್ನೂ ಓದಿ : ಸರ್ಕಾರಕ್ಕೆ ಸೇರಿದ ಸೀಕ್ರೆಟ್ ದಾಖಲೆ ಪತ್ರಗಳ ದುರ್ಬಳಕೆ – ಡೊನಾಲ್ಡ್ ಟ್ರಂಪ್ ವಿರುದ್ಧ ಕ್ರಿಮಿನಲ್ ಕೇಸ್
ರಾಜಸ್ಥಾನದಲ್ಲಿ ಗೆಹ್ಲೋಟ್ Vs ಪೈಲಟ್ ಕಿತ್ತಾಟ ಇರೋದ್ರಿಂಧ ರಾಜಸ್ಥಾನ ಕಾಂಗ್ರೆಸ್ ಗೆ ಹೊಸ ಸಮತಿ ರಚನೆ ಮಾಡುವ ಸಾಧ್ಯತೆ ಇದೆ. ತಮಿಳುನಾಡು, ದೆಹಲಿ, ಪ.ಬಂಗಾಳ, ಒಡಿಶಾ, ಪುದುಚೇರಿ, ಬಿಹಾರ, ಜಾರ್ಖಂಡ್ ರಾಜ್ಯಗಳಲ್ಲಿ ಕಾಂಗ್ರೆಸ್ಗೆ ಹೊಸ ಅಧ್ಯಕ್ಷರ ನೇಮಕ ಮಾಡಬಹುದು. ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ನೂತನ ಸದಸ್ಯರ ನೇಮಕ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳನ್ನ ಮುಂದಿನ 3 ವಾರಗಳಲ್ಲಿ ಅಂತ್ಯಗೊಳಿಸಬಹುದು.
ಇವೆಲ್ಲದರ ಜೊತೆಗೆ ಪ್ರಿಯಾಂಕಾ ಗಾಂಧಿಗೆ ಹೆಚ್ಚಿನ ಜವಾಬ್ದಾರಿ ನೀಡುವ ಸಾಧ್ಯತೆಯೂ ದಟ್ಟವಾಗಿದೆ. ಮುಂಬರುವ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಾಗಿ ಪ್ರಿಯಾಂಕಾ ಪಕ್ಷದ ಪರವಾಗಿ ಹೆಚ್ಚಿನ ಪ್ರಚಾರ ನಡೆಸಲಿದ್ದಾರೆ. ಲೋಕಸಭೆ ವೇಳೆ ಕೇವಲ ಉತ್ತರಪ್ರದೇಶಕ್ಕೆ ಸೀಮಿತವಾಗದೆ ದೇಶಾದ್ಯಂತ ಪ್ರಿಯಾಂಕಾ ಕ್ಯಾಂಪೇನ್ ಮಾಡಲಿದ್ದಾರೆ.