ಬಡ ಕುಟುಂಬಗಳ ಮಹಿಳೆಗೆ ವರ್ಷಕ್ಕೆ ₹1 ಲಕ್ಷ ಆರ್ಥಿಕ ಸಹಾಯ – ಕಾಂಗ್ರೆಸ್‌ನಿಂದ ಮತ್ತೊಂದು ಗ್ಯಾರಂಟಿ!

ಬಡ ಕುಟುಂಬಗಳ ಮಹಿಳೆಗೆ ವರ್ಷಕ್ಕೆ ₹1 ಲಕ್ಷ ಆರ್ಥಿಕ ಸಹಾಯ – ಕಾಂಗ್ರೆಸ್‌ನಿಂದ ಮತ್ತೊಂದು ಗ್ಯಾರಂಟಿ!

ಕಾಂಗ್ರೆಸ್‌, ಗ್ಯಾರಂಟಿ ಮೂಲಕವೇ ವಿಧಾನಸಭೆ ಚುನಾವಣೆಗಳಲ್ಲಿ ಗೆದ್ದಿದೆ. ಇದೀಗ ಗ್ಯಾರಂಟಿ ಅಸ್ತ್ರವನ್ನು ಮುಂದಿಟ್ಟುಕೊಂಡು ಲೋಕಸಭೆ ಚುನಾವಣೆ ಗೆಲ್ಲಲು ಪ್ಲ್ಯಾನ್‌ ಮಾಡಿಕೊಂಡಿದೆ. ಇದೀಗ ಒಡಿಶಾದ ಕಾಂಗ್ರೆಸ್‌ ಮಹಿಳೆಯರಿಗಾಗಿ ಭರ್ಜರಿ ಗ್ಯಾಂಟಿಗಳನ್ನು ಘೋಷಿಸಿದೆ.

ಇದನ್ನೂ ಓದಿ: ಕೊಹ್ಲಿಗೆ ಮಾತ್ರನಾ ಮ್ಯಾಚ್? – ಉದ್ಧಟ ಗಂಭೀರ್ ಗೆ ಉತ್ತರವಿಲ್ವಾ?

ಒಡಿಶಾದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳಾ ಸ್ವ-ಸಹಾಯ ಗುಂಪುಗಳ ಸದಸ್ಯರ ಬ್ಯಾಂಕ್ ಸಾಲವನ್ನು ಪಕ್ಷದ ‘ನಾರಿ ನ್ಯಾಯ ಗ್ಯಾರಂಟಿ’ ಅಡಿಯಲ್ಲಿ ಮನ್ನಾ ಮಾಡಲಾಗುವುದು. ‘ಮಹಾಲಕ್ಷಿ ಗ್ಯಾರಂಟಿ’ ಅಡಿಯಲ್ಲಿ ಎಲ್ಲಾ ಬಡ ಕುಟುಂಬಗಳ ತಲಾ ಒಬ್ಬ ಮಹಿಳೆಗೆ ವರ್ಷಕ್ಕೆ ₹1 ಲಕ್ಷ ಆರ್ಥಿಕ ಸಹಾಯ ನೀಡಲಾಗುವುದು. ಅಲ್ಲದೆ, ಕೇಂದ್ರ ಸರ್ಕಾರದ ಎಲ್ಲಾ ಹುದ್ದೆಗಳಲ್ಲಿ ಮಹಿಳೆಯರಿಗೆ ಶೇ 50 ರಷ್ಟು ಮೀಸಲಾತಿಯನ್ನು ‘ನಾರಿ ನ್ಯಾಯ’ ಗ್ಯಾರಂಟಿಯಡಿಯಲ್ಲಿ ಒದಗಿಸಲಾಗುವುದು ಎಂದು ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಮೀನಾಕ್ಷಿ ಬಹಿನಿಪತಿ ಹೇಳಿದಾರೆ.

ಸಾವಿತ್ರಿ ಬಾಯಿ ಫುಲೆ ಯೋಜನೆ ಅಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ಕೆಲಸ ನಿರತ ಮಹಿಳೆಯರಿಗೆ ವಸತಿ ನಿಲಯ, ವಾರ್ಷಿಕ ₹2 ಲಕ್ಷಕ್ಕೂ ಕಡಿಮೆ ಆದಾಯ ಹೊಂದಿರುವ ಕುಟುಂಬಗಳ ಹೆಣ್ಣು ಮಕ್ಕಳ ಮದುವೆಗೆ ₹2 ಲಕ್ಷ ಸಹಾಯಧನವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.

Shwetha M