ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್‌ಗೆ ಸಾಲು ಸಾಲು ಸಂಕಷ್ಟ – ಆದಾಯ ತೆರಿಗೆ ಇಲಾಖೆ ಹೊಸ ನೋಟಿಸ್‌ ಜಾರಿ

ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್‌ಗೆ ಸಾಲು ಸಾಲು ಸಂಕಷ್ಟ – ಆದಾಯ ತೆರಿಗೆ ಇಲಾಖೆ ಹೊಸ ನೋಟಿಸ್‌ ಜಾರಿ

ಸಾಲು ಸಾಲು ಸವಾಲು ಎದುರಿಸುತ್ತಿರುವ ಕಾಂಗ್ರೆಸ್‌ಗೆ ಹೊಸ ಹೊಸ ಸಂಕಷ್ಟ ಎದುರಾಗುತ್ತಲೇ ಇದೆ. ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಅಕೌಂಟ್‌ಗಳನ್ನು ಸ್ಥಗಿತಗೊಳಿಸಲಾಗಿದೆ ಅನ್ನೋ ಆರೋಪ ಕೇಳಿ ಬಂದಿತ್ತು. ಈ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ ಹೊಸ ನೋಟಿಸ್ ಜಾರಿಯಾಗಿದೆ.

ಇದನ್ನೂ ಓದಿ: ಲೋಕಸಭಾ ಅಖಾಡದಿಂದ ದೂರ ಉಳಿದ್ರಾ ಯತ್ನಾಳ್‌?  

ಕಾಂಗ್ರೆಸ್ ಪಕ್ಷದಿಂದ 1,700 ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿ ಮಾಡುವುದು ಬಾಕಿ ಇದೆ. ಹೀಗಾಗಿ 1,700 ಕೋಟಿ ರೂಪಾಯಿ ಆದಾಯ ತೆರಿಗೆಯನ್ನು ಪಾವತಿಸಬೇಕು ಅಂತಾ ಐಟಿ ಇಲಾಖೆ ಕಾಂಗ್ರೆಸ್‌ಗೆ ನೋಟಿಸ್‌ ಜಾರಿ ಮಾಡಿದೆ.

ಕಾಂಗ್ರೆಸ್ ಪಕ್ಷ ಆದಾಯ ತೆರಿಗೆ ಮರುಮೌಲ್ಯಮಾಪನ ಮಾಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಹೈಕೋರ್ಟ್‌ನಲ್ಲಿ ಕಾಂಗ್ರೆಸ್ ಅರ್ಜಿ ವಜಾಗೊಂಡ ಬಳಿಕ ಹೊಸ ಡಿಮ್ಯಾಂಡ್‌ ನೋಟಿಸ್ ಜಾರಿ ಮಾಡಲಾಗಿದೆ.

ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್ ಪಕ್ಷಕ್ಕೆ ದಂಡ, ಬಡ್ಡಿ ಸೇರಿದಂತೆ 1,700 ಕೋಟಿ ರೂಪಾಯಿಯನ್ನು ಪಾವತಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಐ.ಟಿ ನೋಟಿಸ್‌ನಿಂದ ಚುನಾವಣೆಯ ಸಮಯರದಲ್ಲಿ ಕಾಂಗ್ರೆಸ್ ಪಕ್ಷ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಐ.ಟಿ. ನೋಟಿಸ್ ವಿರುದ್ಧ ನಾಳೆ, ನಾಡಿದ್ದು ದೇಶಾದ್ಯಂತ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಪಕ್ಷ ನಿರ್ಧಾರ ಮಾಡಿದೆ.

Shwetha M