ಇಂಡಿಗೋ ವಿಮಾನದಲ್ಲಿ ಕರ್ನಾಟಕದ 21 ಶಾಸಕರು ಲಾಕ್!‌ – ಬೆಳ್ಳಂ ಬೆಳಗ್ಗೆ ಆಗಿದ್ದೇನು?

ಇಂಡಿಗೋ ವಿಮಾನದಲ್ಲಿ ಕರ್ನಾಟಕದ 21 ಶಾಸಕರು ಲಾಕ್!‌ – ಬೆಳ್ಳಂ ಬೆಳಗ್ಗೆ ಆಗಿದ್ದೇನು?

ಕರ್ನಾಟಕದ 21 ಶಾಸಕರು ಇಂಡಿಗೋ ವಿಮಾನದಲ್ಲೇ ಲಾಕ್‌ ಆಗಿರುವ ಘಟನೆ ಆಗಿದ್ದಾರೆ. ದೆಹಲಿಯಲ್ಲಿ ದಟ್ಟವಾದ ಹೊಗೆ, ಮಂಜು ಕವಿದ ಪರಿಣಾಮ ರಾಜ್ಯದ ಶಾಸಕರು ಇಂಡಿಗೋ ವಿಮಾನದ ಒಳಗೆ ಸಿಲುಕಿದ್ದಾರೆ.

ಇದನ್ನೂ ಓದಿ: ಭಾರತದ ಬೌಲಿಂಗ್‌ ದಾಳಿಗೆ ತತ್ತರಿಸಿದ ಸೌತ್‌ ಆಫ್ರಿಕಾ – ಭಾರತಕ್ಕೆ 7 ವಿಕೆಟ್‌ಗಳ ಅಮೋಘ ಜಯ

ದೆಹಲಿಯಲ್ಲಿ ಭಾನುವಾರ ವೋಟ್‌ ಚೋರಿ ಸಮಾವೇಶ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಮಂತ್ರಿಗಳು, ಕಾಂಗ್ರೆಸ್‌ ಶಾಸಕರು ಆಗಮಿಸಿದ್ದರು. ಇಂದು ದಾವಣಗೆರೆಯಲ್ಲಿ ನಡೆಯಲಿರುವ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ದೆಹಲಿಯಿಂದ ಬೆಳಗಾವಿಗೆ ಹೊರಟಿದ್ದರು. ಇಂದು ಬೆಳಗ್ಗೆ 5.30ಕ್ಕೆ ಇಂಡಿಗೋ ವಿಮಾನದಲ್ಲಿ ಶಾಸಕರು ಹೊರಟಿದ್ದರು. ಆದ್ರೆ  ವಿಮಾನದ ಒಳಗಡೆ ಕುಳಿತುಕೊಂಡ ಬಳಿಕ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ಹೀಗಾಗಿ ವಿಮಾನ ಟೇಕಾಫ್‌ ಆಗಿಲ್ಲ. ಸುಮಾರು 4 ಗಂಟೆಯಿಂದ ಶಾಸಕರು ವಿಮಾನದಲ್ಲೇ ಕುಳಿತಿದ್ದು ಬೆಳಗ್ಗೆ 10 ಗಂಟೆಯಾದರೂ ವಿಮಾನ ಟೇಕಾಫ್‌ ಅಗಿಲ್ಲ ಎಂದು ವರದಿಯಾಗಿದೆ.

ಇಂಡಿಗೋ ವಿಮಾನದಲ್ಲಿ, ಲಕ್ಷ್ಮೀ ಹೆಬಾಳ್ಕರ್, ಕೆಜೆ ಜಾರ್ಜ್, ಕೋನರೆಡ್ಡಿ, ಬಸನಗೌಡ ಬಾದರ್ಲಿ, ಆನಂದ್ ಗಡದೇವರಮಠ, ಹೆಚ್‌ಕೆ ಪಾಟೀಲ್, ಶರಣ ಪ್ರಕಾಶ್ ಪಾಟೀಲ್, ರಾಜು ಗೌಡ, ಸಲೀಂ ಅಹಮದ್, ತನ್ವೀರ್ ಸೇಠ್, ಸತೀಶ್ ಜಾರಕಿಹೊಳಿ, ಜಿ ಎಸ್ ಪಾಟೀಲ್, ಮಾಲೀಕಯ್ಯ ಗುತ್ತೇದಾರ್, ಈಶ್ವರ್ ಖಂಡ್ರೆ, ಜೆ ಟಿ ಪಾಟೀಲ್, ತಿಪ್ಪಣ್ಣ ಕಾಮಕನೂರ್, ನಾಗೇಂದ್ರ, ಎಂ ಬಿ ಪಾಟೀಲ್, ಅಲ್ಲಮಪ್ರಭು, ರೆಹಮಾನ್ ಖಾನ್, ಮುಂತಾದವರು ಈ ವಿಮಾನದಲ್ಲಿದ್ದಾರೆ ಎಂದು ಗೊತ್ತಾಗಿದೆ. ವಿಮಾನ ಎಷ್ಟು ಗಂಟೆಗೆ ಟೇಕಾಫ್‌ ಆಗಲಿದೆ ಎಂಬ ಮಾಹಿತಿಯನ್ನು ಸಿಬ್ಬಂದಿ ನೀಡಿಲ್ಲ. ದೆಹಲಿಯಲ್ಲಿ ಹವಾಮಾನ ವೈಪರೀತ್ಯದಿಂದ ವಿಮಾನಗಳ ಟೇಕಾಫ್‌ ಮತ್ತು ಲ್ಯಾಂಡಿಂಗ್‌ಗೆ ಸಮಸ್ಯೆಯಾಗಿದೆ ಎಂದು ಹೇಲಾಗ್ತಿದೆ.

Shwetha M