ಸಚಿವ ಸ್ಥಾನಕ್ಕಾಗಿ ಸಿದ್ದರಾಮಯ್ಯಗೆ ಶಾಸಕರ ದುಂಬಾಲು – ಡಿಕೆಶಿ ಸಂಪುಟದಲ್ಲಿ ಯಾರಿಗೆಲ್ಲಾ ಮಂತ್ರಿಗಿರಿ?

ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಕೆಳಗಿಳಿದ್ರೂ ಪಕ್ಷದಲ್ಲಿ ಅವ್ರ ಪವರ್ ಕಡಿಮೆಯಾಗಿಲ್ಲ. ಕಾಂಗ್ರೆಸ್ ನಾಯಕರು ಈಗಲೂ ಕೂಡ ಸಿದ್ದರಾಮಯ್ಯ ಮೇಲೆ ಡಿಪೆಂಡ್ ಆಗಿದ್ದಾರೆ.. ಡಿಕೆ ಶಿವಕುಮಾರ್ ಸಂಪುಟ ಸೇರಿಕೊಳ್ಬೇಕು ಅಂತಾ ಸಚಿವಕಾಂಕ್ಷಿಗಳ ದಂಡು ಸಿದ್ದರಮಯ್ಯ ಅವರನ್ನು ಭೇಟಿ ಮಾಡಿ ಮಂತ್ರಿಗಿರಿಗಾಗಿ ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ : ಜೆಡಿಎಸ್ ನ 8 ಶಾಸಕರಿಂದ ಅಡ್ಡಮತದಾನ ಎಂದ ಬಿಜೆಪಿ – ಕಮಲಪಡೆ ಆರೋಪಕ್ಕೆ ಕೆರಳಿದ ದಳಪತಿಗಳು!
ಡಿಕೆ ಶಿವಕುಮಾರ್ ಸಿಎಂ ಆದಾಗ ಕೆಲವರಿಗೆ ಮಂತ್ರಿಸ್ಥಾನ ನೀಡಲಾಗಿದೆ. ಆದರೆ ಉಳಿದ ಸ್ಥಾನಗಳಿಗೆ ಯಾರು ಮಂತ್ರಿಗಳು ಅನ್ನೋದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಹೀಗಾಗಿ ಇರುವಂಥ ಸ್ಥಾನಗಳಲ್ಲಿ ನಮಗೂ ಒಂದು ಅವಕಾಶ ಕೊಡಿ ಅಂತಾ ಸಾಕಷ್ಟು ಶಾಸಕರು ಲಾಬಿ ಮಾಡುತ್ತಿದ್ದಾರೆ. ಇದರ ನಡುವೆ ಎನ್ ಚಲುವರಾಯಸ್ವಾಮಿ, ಮಧು ಬಂಗಾರಪ್ಪ, ಸಂತೋಷ್ ಲಾಡ್, ಕೆ ಎಂ ಶಿವಲಿಂಗೇಗೌಡ, ಶ್ರೀನಿವಾಸ್ ಮಾನೆ, ಯಾಸಿರ್ ಅಹ್ಮದ್ ಖಾನ್ ಪಠಾಣ್ ಮತ್ತು ಕೆ ವೆಂಕಟೇಶ್ ಅವರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಹಾಗೇ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಕೂಡ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ರು. ಪ್ರದೀಪ್ ತಮ್ಮ ಕ್ಷೇತ್ರದಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಕೆಲವು ಜೆಡಿಎಸ್ ಕಾರ್ಯಕರ್ತರು ಅವರ ಕಡೆಗೆ ಚಪ್ಪಲಿ ಎಸೆದಾಗ ಏನಾಯಿತು ವಿವರಣೆ ನೀಡಿದ್ದಾರೆ. ಈ ವೇಳೆ ಪ್ರದೀಪ್ ಈಶ್ವರ್ ರಿಂದ ಮಾಹಿತಿ ಪಡೆದ ಸಿದ್ದರಾಮಯ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕರೆ ಮಾಡಿ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಕೇಳಿದ್ದಾರೆ. ಪ್ರದೀಪ್ ಅವರನ್ನು ನಿರುತ್ಸಾಹಗೊಳಿಸಬೇಡಿ ಎಂದು ಒತ್ತಾಯಿಸಿದರು ಮತ್ತು ರಾಜಕೀಯ ಜೀವನದಲ್ಲಿ ಇಂತಹ ಘಟನೆಗಳು ಸಾಮಾನ್ಯ ಎಂದು ಹೇಳುವ ಮೂಲಕ ಸಮಾಧಾನಗೊಳಿಸಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಜೂನ್ 3, 2026 ರಂದು ಅಧಿಕಾರ ಸ್ವೀಕರಿಸಿದ್ದಾರೆ. ಇವರ ಸಚಿವ ಸಂಪುಟದಲ್ಲಿ ಡಾ. ಜಿ. ಪರಮೇಶ್ವರ್ ಅವರು ಉಪಮುಖ್ಯಮಂತ್ರಿಯಾಗಿದ್ದಾರೆ. ಸದ್ಯ ಸಂಪುಟದಲ್ಲಿ 13 ಜನ ಸಚಿವರಿದ್ದು, ಸಂಪುಟ ವಿಸ್ತರಣೆಗೆ ಇನ್ನೂ ಕೂಡ ಚರ್ಚೆ ನಡೆಯುತ್ತಲೇ ಇದೆ. ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಸಂಪುಟ ವಿಸ್ತರಣೆಗಾಗಿ ಕಾಯುತ್ತಿದೆ. 34 ಸದಸ್ಯರ ಸಂಪುಟದಲ್ಲಿ 20 ಸ್ಥಾನಗಳು ಖಾಲಿ ಇವೆ. ಇದೇ ತಿಂಗಳಲ್ಲಿ ನಡೆಯಲಿರುವ ಮುಂಗಾರು ಅಧಿವೇಶನಕ್ಕೂ ಮುನ್ನ, ಸಂಪುಟ ವಿಸ್ತರಣೆಯಾಗಿ ಹೊಸ ಶಾಸಕರಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆಯಿದೆ. ಸದ್ಯ ಡಿಕೆಶಿ ಸಂಪುಟದ 13 ಸಚಿವರು & ಖಾತೆಗಳ ವಿವರ ಇಲ್ಲಿದೆ.
13 ಸಚಿವರು ಮತ್ತು ಅವರ ಖಾತೆಗಳು:
- ಡಾ. ಜಿ. ಪರಮೇಶ್ವರ್-ಕಂದಾಯ ಮತ್ತು ಯುವಸಬಲೀಕರಣ.
- 2.. ಪ್ರಿಯಾಂಕ್ ಖರ್ಗೆ- ಗೃಹ ಇಲಾಖೆ ಮತ್ತು ಐಟಿಬಿಟಿ
- ರಾಮಲಿಂಗಾ ರೆಡ್ಡಿ- ಜಲಸಂಪನ್ಮೂಲ ಸಚಿವ.
- ಸತೀಶ್ ಜಾರಕಿಹೊಳಿ-ಲೋಕೋಪಯೋಗಿ.
- ಕೆಎಚ್ ಮುನಿಯಪ್ಪ- ಆಹಾರ ಇಲಾಖೆ.
- ಕೆಜೆ ಜಾರ್ಜ್- ಇಂಧನ ಮತ್ತು ಪ್ರವಾಸೋದ್ಯುಮ.
- ಭೈರತಿ ಸುರೇಶ್-ಸಾರಿಗೆ ಇಲಾಖೆ.
- ಕೃಷ್ಣ ಭೈರೇಗೌಡ- ಬೆಂಗಳೂರು ನಗರಾಭಿವೃದ್ಧಿ.
- ಎದಂಬಿ ಪಾಟೀಲ್- ಬೃಹತ್ ಮತ್ತು ಮಧ್ಯಮ ಕೈಗಾರಿಕೆ.
- ಯುಟಿ ಖಾದರ್-ಆರೋಗ್ಯ.
- ಈಶ್ವರ್ ಖಂಡ್ರೆ- ಗ್ರಾಮೀಣಾಭಿವೃದ್ಧಿ.
- ಯತೀಂದ್ರ ಸಿದ್ದಾಮಯ್ಯ- ನಗರಾಭಿವೃದ್ಧಿ.
- ಶರಣ್ ಪ್ರಕಾಶ್ ಪಾಟೀಲ್- ವೈದ್ಯಕೀಯ ಶಿಕ್ಷಣ

ನೋಡಿರಿ

