ಬಿಜೆಪಿಗೆ ವೋಟ್ ಹಾಕಿದ್ರೆ ಕಾಂಗ್ರೆಸ್ ಗ್ಯಾರಂಟಿ ಯೋಜನೆ ರದ್ದಾಗುತ್ತೆ! – ಶಾಸಕ ಪ್ರದೀಪ್ ಈಶ್ವರ್ ಶಾಕಿಂಗ್ ಹೇಳಿಕೆ

ಚುನಾವಣೆ ಹೊತ್ತಲ್ಲೇ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿದರೆ ರಾಜ್ಯ ಕಾಂಗ್ರೆಸ್ ಸರ್ಕಾರದ ‘ಗ್ಯಾರಂಟಿ’ ಯೋಜನೆಗಳು ರದ್ದಾಗಬಹುದು ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.
ಇದನ್ನೂ ಓದಿ: ಡೆಲ್ಲಿ ವಿರುದ್ಧ ಗೆದ್ದು ಬೀಗಿದ ಕೆಕೆಆರ್ – ನೈಟ್ರೈಡರ್ಸ್ಗೆ 106 ರನ್ಗಳ ಭರ್ಜರಿ ಜಯ
ಮತದಾರರನ್ನು ಉದ್ದೇಶಿಸಿ ಮಾತನಾಡಿರುವ ಪ್ರದೀಪ್ ಈಶ್ವರ್, ಎರಡೆರಡು ಸಾವಿರ ರೂಪಾಯಿ ಗೃಹ ಲಕ್ಷ್ಮೀ ಯೋಜನೆಯಡಿ ಮನೆ ಮನೆಗೆ ಕೊಡುತ್ತಿದ್ದೇವೆ. ಹತ್ತತ್ತು ಕೆಜಿ ಅಕ್ಕಿ (ಐದು ಕೆಜಿ ಅಕ್ಕಿ, ಐದು ಕೆಜಿದು ದುಡ್ಡು) ಕೊಡುತ್ತಿದ್ದೇವೆ. ಬಿಜೆಪಿಯವರಿಗೆ ದುಡ್ಡು ಕೊಡುತ್ತೇವೆ ಎಂದರೂ ಅವರು ಅಕ್ಕಿ ಕೊಡುತ್ತಿಲ್ಲ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಕ್ಕಂದಿರೇ ಕೇಳಿಸಿಕೊಳ್ಳಿ. ನೀವು ಬಿಜೆಪಿಗೆ ಏನಾದರೂ ಓಟ್ ಹಾಕಿದರೆ ಅವರು ಗ್ಯಾರಂಟಿ ನಿಲ್ಲಿಸಿಬಿಡುತ್ತಾರೆ. ಮತ್ತೆ ಬಸ್ಸಿನಲ್ಲಿ ನೀವು ಟಿಕೆಟ್ ತಗೊಂಡು ಓಡಾಡಬೇಕಾಗುತ್ತದೆ. ಹಾಗಾಗಿ ಬಿಜೆಪಿಗೆ ಮತ ನೀಡಬೇಡಿ ಎಂದು ಪ್ರದೀಪ್ ಈಶ್ವರ್ ಹೇಳಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.
ಯುವಕರು ಬರಬೇಕು, ಇವತ್ತು ಶರತ್ ಅಣ್ಣಾ ಬಂದಿರೋದಕ್ಕೆ ಒಂದು ಕೋಟಿಯ ಅಭಿವೃದ್ಧಿ ನಡೆಯುತ್ತಿದೆ. ಶರತ್ ಬಚ್ಚೇಗೌಡ ಸಾಹೇಬರಿಗೆ ಜಯವಾಗಲಿ. ಜೈ ಕಾಂಗ್ರೆಸ್. ನನ್ನನ್ನು ಹೇಗೆ ಆಶೀರ್ವದಿಸಿದಿರೋ ಅದೇ ರೀತಿ ರಕ್ಷಾ ರಾಮಯ್ಯ ಅವರನ್ನೂ ಆಶೀರ್ವದಿಸಿ ಎಂದು ಮನವಿ ಮಾಡಿದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಗೆಲ್ಲಿಸಿದರೆ ಗ್ಯಾರಂಟಿ ಯೋಜನಗೆಳು ಸ್ಥಗಿತವಾಗಬಹುದು ಎಂದು ಮಾಗಡಿ ಶಾಸಕ ಬಾಲಕೃಷ್ಣ ಇತ್ತೀಚೆಗೆ ಹೇಳಿದ್ದು ವ್ಯಾಪಕ ವಿವಾದಕ್ಕೆ ಗುರಿಯಾಗಿತ್ತು. ನಂತರ ಸ್ಪಷ್ಟನೆ ನೀಡಿದ್ದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳುವುದಿಲ್ಲ ಎಂದಿದ್ದರು.