ʼಭಾರತ್ ಜೋಡೊ-2.0ʼಗೆ ಕಾಂಗ್ರೆಸ್‌ ಚಿಂತನೆ! – ಜನವರಿಯಿಂದಲೇ ಯಾತ್ರೆ ಆರಂಭ ಸಾಧ್ಯತೆ!

ʼಭಾರತ್ ಜೋಡೊ-2.0ʼಗೆ ಕಾಂಗ್ರೆಸ್‌ ಚಿಂತನೆ! – ಜನವರಿಯಿಂದಲೇ ಯಾತ್ರೆ ಆರಂಭ ಸಾಧ್ಯತೆ!

ಲೋಕಸಭಾ ಚುನಾವಣೆಗೆ ಹತ್ತಿರವಾಗುತ್ತಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ಈಗಿನಿಂದಲೇ ಪ್ಲಾನ್‌ ಮಾಡಿಕೊಳ್ಳುತ್ತಿದೆ. ಇದೀಗ ಕಾಂಗ್ರೆಸ್‌ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಬಳಿಕ ಲೋಕಸಭಾ ಚುನಾವಣೆಗೂ ಮುನ್ನವೇ ಕಾಂಗ್ರೆಸ್‌ 2ನೇ ಹಂತದ ಭಾರತ್‌ ಜೋಡೋ ಯಾತ್ರೆ ಹಮ್ಮಿಕೊಳ್ಳಲು ಚಿಂತನೆ ನಡೆಸಿದೆ.

ಇದನ್ನೂ ಓದಿ: ಡೊನಾಲ್ಡ್‌ ಟ್ರಂಪ್‌ ಗೆ ದೊಡ್ಡ ಶಾಕ್‌! – ಅಧ್ಯಕ್ಷೀಯ ಚುನಾವಣೆಯಿಂದಲೇ ಅನರ್ಹಗೊಳಿಸಿದ ಕೋರ್ಟ್‌!

ಹೌದು, ಕಾಂಗ್ರೆಸ್‌ನ ಮೊದಲ ಹಂತದ ಭಾರತ್‌ ಜೋಡೋ ಯಾತ್ರೆ ಸಕ್ಸಸ್‌ ಕಂಡಿದೆ. ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆಯ ಮೊದಲ ಹಂತವು ಸೆಪ್ಟೆಂಬರ್ 7, 2022 ರಿಂದ ಜನವರಿ 2023ರವರೆಗೂ ನಡೆಯಿತು. ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಗಿ ಸರಿಸುಮಾರು 4,080 ಕಿಮೀ ಗಳಷ್ಟು ದೂರ ಕ್ರಮಿಸಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಯಾತ್ರೆಯನ್ನ ಮುಕ್ತಾಯಗೊಳಿಸಲಾಗಿತ್ತು. ಯಾತ್ರೆಯು 12 ರಾಜ್ಯಗಳ 75 ಜಿಲ್ಲೆಗಳ ಮೂಲಕ 126 ದಿನಗಳಲ್ಲಿ ಸಾಗಿತು, ಇದು ಭಾರತದ ಸುದೀರ್ಘ ಪಾದಯಾತ್ರೆಯಾಗಿದೆ. ಇದೀಗ ಕಾಂಗ್ರೆಸ್‌ ಲೋಕಸಭಾ ಚುನಾವಣೆಗೂ ಮುನ್ನವೇ ಭಾರತ್ ಜೋಡೊ-2.0ಗೆ ಚಿಂತನೆ ನಡೆಸಿದೆ. 2ನೇ ಹಂತದ ಭಾರತ್ ಜೋಡೊ ಯಾತ್ರೆ ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲೇ ನಡೆಯಲಿದೆ. ಜನವರಿ ಮೊದಲ ವಾರದಿಂದಲೇ ಯಾತ್ರೆ ಆರಂಭವಾಗಬಹುದು ಎಂದು ಮೂಲಗಳು ತಿಳಿಸಿವೆ.

ರಾಹುಲ್ ಗಾಂಧಿ ನೇತೃತ್ವದಲ್ಲಿ ಎರಡನೇ ಹಂತದ ಭಾರತ್ ಜೋಡೋ ಯಾತ್ರೆ ಹೈಬ್ರಿಡ್ ಮೋಡ್‍ನಲ್ಲಿರಲಿದೆ, ಯಾತ್ರೆಯಲ್ಲಿ ಭಾಗವಹಿಸುವವರು ಕಾಲ್ನಡಿಗೆಯಲ್ಲಿ ಅಥಾವ ಮತ್ತು ವಾಹನ ಬಳಬಹುದಾಗಿದ್ದು ರಾಹುಲ್‍ಗಾಂಧಿ ಮಾತ್ರ ಕಾಲ್ನಡಿಗೆಯಲ್ಲಿ ಯಾತ್ರೆ ಮಾಡಲಿದ್ದಾರೆ ಎನ್ನಲಾಗಿದೆ.

ಈ ಆವೃತ್ತಿಯ ವಿಶೇಷ ಗಮನವು ಉತ್ತರ ಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರದ ಮೇಲೆ ಇರುತ್ತದೆ ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಮೊದಲ ಆವೃತ್ತಿಯಂತೆಯೇ ಪ್ರತಿ ದಿನವೂ ಸಾರ್ವಜನಿಕ ಸಭೆಗಳಲ್ಲಿ ರಾಹುಲ್ ಗಾಂಧಿ ಮಾತನಾಡಲಿದ್ದಾರೆ. ಜನರೊಂದಿಗೆ ಬೆರೆಯಲಿದ್ದಾರೆ. ಡಿಸೆಂಬರ್ 21 ರಂದು ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಗುಂಪಿನ ಸಭೆಯಲ್ಲಿ ಉದ್ದೇಶಿತ ಯಾತ್ರೆಯನ್ನು ಚರ್ಚಿಸಿ ಅನುಮೋದಿಸುವ ಸಾಧ್ಯತೆಯಿದೆ.

Shwetha M