‘ಸಂವಿಧಾನ ಉಳಿಯಬೇಕಾದರೆ ಮೋದಿಯನ್ನು ಕೊಲ್ಲಿ’ – ಕಾಂಗ್ರೆಸ್ ನಾಯಕನ ವಿವಾದಾತ್ಮಕ ಹೇಳಿಕೆ
ಭೋಪಾಲ್: ಮಧ್ಯಪ್ರದೇಶದ ಮಾಜಿ ಸಚಿವ, ಕಾಂಗ್ರೆಸ್ ನಾಯಕ ರಾಜಾ ಪಟೇರಿಯಾ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪಟೇರಿಯಾ ಅವರು ಬೆಂಬಲಿಗರೊಂದಿಗೆ ಮಾತನಾಡುತ್ತಾ, `ಪ್ರಧಾನಿ ಮೋದಿ ಅವರು ಧರ್ಮದ ಆಧಾರದ ಮೇಲೆ ಜನರನ್ನ ವಿಭಜಿಸುತ್ತಿದ್ದಾರೆ. ಮೋದಿ ಅವರ ಆಡಳಿತದಲ್ಲಿ ದಲಿತರು ದೊಡ್ಡ ಬೆದರಿಕೆ ಎದುರಿಸುತ್ತಿದ್ದಾರೆ. ಸಂವಿಧಾನ ಉಳಿಸಬೇಕಾದರೆ ಮೋದಿಯನ್ನು ಕೊಲ್ಲಲು ಸಿದ್ಧರಾಗಬೇಕು. ಕೊಲ್ಲುವುದೆಂದರೆ ಹತ್ಯೆ ಮಾಡುವುದಲ್ಲ. ಅವರನ್ನು ಸೋಲಿಸಬೇಕು’ಎಂದು ಹೇಳಿಕೆ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮಾಜಿ ಸಚಿವರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ:‘ಪ್ರೀತಿಯ ಕ್ರಿಕೆಟ್.. ನನಗೆ ಇನ್ನೊಂದು ಅವಕಾಶ ಕೊಡು’ – ಕರುಣ್ ನಾಯರ್ ಟ್ವೀಟ್ ವೈರಲ್
ವಿಡಿಯೋ ವೈರಲ್ ಆದ ಬೆನ್ನಲ್ಲೇ ಈ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಪಟೇರಿಯಾ, ನನ್ನ ಅಭಿಪ್ರಾಯವನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಗಾಂಧಿಯನ್ನು ನಂಬುವ ವ್ಯಕ್ತಿ, ಈ ರೀತಿ ಮಾತನಾಡಲಾರೆ. ಸಂವಿಧಾನ ಉಳಿಸಲು ಮೋದಿ ಅವರನ್ನು ಸೋಲಿಸಬೇಕು ಅನ್ನೋ ಅರ್ಥದಲ್ಲಿ ಮಾತನಾಡಿದ್ದೇನೆ. ದಲಿತರು, ಆದಿವಾಸಿಗಳನ್ನು ರಕ್ಷಿಸಲು ಹಾಗೂ ನಿರುದ್ಯೋಗ ಸಮಸ್ಯೆಯನ್ನು ತೊಡೆದುಹಾಕಲು ಮೋದಿಯನ್ನು ಸೋಲಿಸುವುದು ಅವಶ್ಯಕ ಎಂಬ ಅರ್ಥದಲ್ಲಿ ಹೇಳಿದ್ದೇನೆ. ಆದರೆ ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಹೇಳಿದ್ದಾರೆ.
Congress leader & former minister Raja Pateria incites people to kill PM Modi – earlier too Cong leaders spoke about death of PM Modi (Sheikh Hussain)
But now a death threat!
After “Aukat dikha denge” “Raavan” this is Rahul Gandhi’s Pyaar ki Rajniti? Will they act on him? No! pic.twitter.com/wH6LSi63g2
— Shehzad Jai Hind (@Shehzad_Ind) December 12, 2022
ರಾಜಾ ಪಟೇರಿಯಾ ಹೇಳಿಕೆಯಿಂದ ಬಿಜೆಪಿ ನಾಯಕರು ಕೆಂಡಾಮಂಡಲವಾಗಿದ್ದಾರೆ. ‘ಭಾರತ್ ಜೋಡೋ ಯಾತ್ರೆ ಮಾಡುತ್ತಿರುವವರ ಅಸಲಿ ಮುಖ ಅನಾವರಣವಾಗುತ್ತಿದೆ’ಎಂದು ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಟಾರ್ಗೆಟ್ ಮಾಡಿದ್ದಾರೆ. ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು, ಕೇಸ್ ದಾಖಲಿಸುವಂತೆ ಪನ್ನಾ ಪೊಲೀಸ್ ಠಾಣೆಗೆ ಸೂಚಿಸಿದ್ದಾರೆ. ನಾನು ಪಟೇರಿಯಾ ಹೇಳಿಕೆಯನ್ನ ಕೇಳಿದ್ದೇನೆ. ಈ ಕಾಂಗ್ರೆಸ್ ಪಕ್ಷವು ಮಹಾತ್ಮ ಗಾಂಧಿಯವರದ್ದಲ್ಲ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ. ಆದ್ದರಿಂದ `ಈ ಕಾಂಗ್ರೆಸ್ ಇಟಲಿಗೆ ಸೇರಿದ್ದು, ಅದರ ಸಿದ್ಧಾಂತ ಮುಸಲೋನಿಯದ್ದು’ಎಂದು ಎಫ್‌ಐಆರ್ ದಾಖಲಿಸುವಂತೆ ಎಸ್‌ಪಿಗೆ ಸೂಚನೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.