‘ಟ್ರಬಲ್ ಇಂಜಿನ್’ ಸರ್ಕಾರದ ‘ಭ್ರಷ್ಟಾಚಾರದ ರೇಟ್ ಕಾರ್ಡ್’ ರಿಲೀಸ್

‘ಟ್ರಬಲ್ ಇಂಜಿನ್’ ಸರ್ಕಾರದ ‘ಭ್ರಷ್ಟಾಚಾರದ ರೇಟ್ ಕಾರ್ಡ್’ ರಿಲೀಸ್

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಬೆರಳಣಿಕೆಯಷ್ಟು ದಿನ ಮಾತ್ರ ಬಾಕಿ ಉಳಿದಿದೆ. ಈ ಹೊತ್ತಲ್ಲೇ ಆರೋಪ, ಪ್ರತ್ಯಾರೋಪಗಳು ಕೇಳಿಬರುತ್ತಿವೆ. ಇದೀಗ ಕಾಂಗ್ರೆಸ್, ಬಿಜೆಪಿ ಭ್ರಷ್ಟಾಚಾರ ಕುರಿತು ರೇಟ್ ಕಾರ್ಡ್ ಬಿಡುಗಡೆ ಮಾಡಿದೆ.

ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ವಕ್ತಾರ ಪವನ್ ಖೇರಾ ಅವರು ಶುಕ್ರವಾರ (ಮೇ.5) ಬಿಜೆಪಿಯ ‘ಭ್ರಷ್ಟಾಚಾರ ರೇಟ್ ಕಾರ್ಡ್ 2019 -2023’ ಅನ್ನು ಬಿಡುಗಡೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು ‘ಬಿಜೆಪಿಯು ರಾಜ್ಯವನ್ನು ರಾಜಕೀಯ ಪ್ರವಾಸದ ಕೇಂದ್ರ ಮಾಡಿಕೊಂಡಿದೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ರಾಜ್ಯದ ಜನರಿಗೆ ಗೊತ್ತಿದೆ. ರಾಜ್ಯದಲ್ಲಿ 40% ಅಲ್ಲ 50% ಕಮಿಷನ್ ನಡೆಯುತ್ತಿದೆ. ರಾಜ್ಯದ ಮುಖ್ಯಮಂತ್ರಿ ಹುದ್ದೆಗೆ 2,500 ಕೋಟಿ ಕಮಿಷನ್​, ಮಂತ್ರಿ ಹುದ್ದೆಗೆ 500 ಕೋಟಿ, ವರ್ಗಾವಣೆಗೆ 5-15 ಕೋಟಿ, ಇಂಜಿನಿಯರ್​ ಹುದ್ದೆಗೆ 1ರಿಂದ 5 ಕೋಟಿ ನೀಡಬೇಕು ಎನ್ನುವ ಮೂಲಕ ಬಿಜೆಪಿ ವಿರುದ್ದ ಹರಿಹಾಯ್ದಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ರೋಡ್ ಶೋ – ಜೇನು ನೊಣ, ಬೀದಿ ನಾಯಿ, ಹಾವು, ಕೋತಿಗಳಿಗೆ ಬಂಧನ ಭೀತಿ!

ಭ್ರಷ್ಟಾಚಾರದ ರೇಟ್ ಕಾರ್ಡ್ ಅನ್ನು ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. 2019 ರಿಂದ 2023ರವರೆಗೆ ಆಡಳಿತದುದ್ದಕ್ಕೂ ಲೂಟಿಯನ್ನೇ ಪರಮಧೈವ ಎಂದುಕೊಂಡು ರಾಜ್ಯದ ಖಜಾನೆಯನ್ನು ಬರಿದು ಮಾಡಿದ ಸರ್ಕಾರ ಕನ್ನಡಿಗರನ್ನು, ಕರ್ನಾಟಕದ ಅಭಿವೃದ್ಧಿಯನ್ನು ಬೀದಿಪಾಲು ಮಾಡಿದೆ. ಮತ ಹಾಕುವ ಮುನ್ನ ಕರ್ನಾಟಕದ ಭವಿಷ್ಯವನ್ನು ಪರಿಗಣಿಸಿ ಎಂದು ಟ್ವೀಟ್ ಮಾಡಿದೆ.

ಕಳೆದ ನಾಲ್ಕು ವರ್ಷದಲ್ಲಿ 40% ಸರ್ಕಾರ ಕನ್ನಡಿಗರಿಂದ 1,50,000 ಕೋಟಿ ರೂಪಾಯಿಗೂ ಹೆಚ್ಚು ಹಣ ಲೂಟಿ ಮಾಡಿದೆ. ಇದೇ ಗತಿಯಲ್ಲಿ ಸಾಗಿದರೆ ನಮ್ಮ ರಾಜ್ಯವೇ ನಾಶವಾಗುತ್ತದೆ. ಈ ಲೂಟಿಯನ್ನು ನಿಲ್ಲಿಸಿ! ಎಂದು ಕಾಂಗ್ರೆಸ್ ಕಿಡಿಕಾರಿದೆ.

ಕಾಂಗ್ರೆಸ್ ಬಿಡುಗಡೆ ಮಾಡಿರುವ ಭ್ರಷ್ಟಾಚಾರದ ರೇಟ್ ಕಾರ್ಡ್ ಹೀಗಿದೆ..

  • ಸಿಎಂ ಹುದ್ದೆ – 2,500 ಕೋಟಿ ರೂಪಾಯಿ
  • ಮಂತ್ರಿಗಳ ಹುದ್ದೆ – 500 ಕೋಟಿ ರೂಪಾಯಿ

ನೇಮಕಾತಿ ಮತ್ತು ವರ್ಗಾವಣೆ ದರ

  • ಕೆಎಸ್ ಡಿಎಲ್ – 5 ರಿಂದ 15 ಕೋಟಿ ರೂಪಾಯಿ
  • ಇಂಜಿನಿಯರ್ – 1 ರಿಂದ 5 ಕೋಟಿ ರೂಪಾಯಿ
  • ಸಬ್ ರಿಜಿಸ್ಟಾರ್ – 50 ಲಕ್ಷ ದಿಂದ ಕೋಟಿ ರೂಪಾಯಿ
  • ಬೆಸ್ಕಾಂ – 1 ಕೋಟಿ ರೂಪಾಯಿ
  • ಪಿಎಸ್ಐ – 80 ಲಕ್ಷ ರೂಪಾಯಿ
  • ಸಹಾಯಕ ಪ್ರಾಧ್ಯಾಪಕ – 50 ರಿಂದ 70 ಲಕ್ಷ ರೂಪಾಯಿ
  • ಉಪನ್ಯಾಸಕ – 30 ರಿಂದ 50 ಲಕ್ಷ ರೂಪಾಯಿ
  • ಎಫ್ ಡಿಎ – 30 ಲಕ್ಷ ರೂಪಾಯಿ
  • ಸಹಾಯಕ ಇಂಜಿನಿಯರ್ – 30 ಲಕ್ಷ ರೂಪಾಯಿ
  • ಬಮುಲ್ – 25 ಲಕ್ಷ ರೂಪಾಯಿ
  • ಪಿಡಬ್ಲ್ಯೂಡಿ ಸಹಾಯಕ ಇಂಜಿನಿಯರ್ – 10 ಲಕ್ಷ ರೂಪಾಯಿ
  • ಪೊಲೀಸ್ – 10 ಲಕ್ಷ ರೂಪಾಯಿ

ಹುದ್ದೆಗಳ ದರ

  • ಬಿಡಿಎ ಆಯುಕ್ತ – 10 ರಿಂದ 15 ಕೋಟಿ ರೂಪಾಯಿ
  • ಕೆಪಿಎಸ್ ಅಧ್ಯಕ್ಷ – 5 ರಿಂದ 15 ಕೋಟಿ ರೂಪಾಯಿ
  • ಡಿಸಿ ಮತ್ತು ಎಸ್ ಸಿ – 5 ರಿಂದ 10 ಕೋಟಿ ರೂಪಾಯಿ
  • ಉಪಕುಲಪತಿ – 5 ರಿಂದ 10 ಕೋಟಿ ರೂಪಾಯಿ
  • ಎಸಿ – ತಹಸೀಲ್ದಾರ್ – 50 ಲಕ್ಷದಿಂದ 3 ಕೋಟಿ ರೂಪಾಯಿ

suddiyaana