ಹಾಲಿ ಶಾಸಕರಿಗಿಲ್ಲ ಮಣೆ.. ವಲಸಿಗರಿಗೆ ಮನ್ನಣೆ – ಅಚ್ಚರಿಯ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದ ಕಾಂಗ್ರೆಸ್!

ಹಾಲಿ ಶಾಸಕರಿಗಿಲ್ಲ ಮಣೆ.. ವಲಸಿಗರಿಗೆ ಮನ್ನಣೆ – ಅಚ್ಚರಿಯ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದ ಕಾಂಗ್ರೆಸ್!

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಗೆದ್ದು ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್ ಪಣ ತೊಟ್ಟಿದೆ. ಈಗಾಗ್ಲೇ 124 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದ್ದ ಕಾಂಗ್ರೆಸ್ ಇವತ್ತು 42 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಆಯ್ಕೆ ಮಾಡಿ ಎರಡನೇ ಪಟ್ಟಿ ರಿಲೀಸ್ ಮಾಡಿದೆ. ಈ ಮೂಲಕ ಕರ್ನಾಟಕ ಕುರುಕ್ಷೇತ್ರಕ್ಕೆ ಮತ್ತಷ್ಟು ಸೇನಾನಿಗಳನ್ನ ಕಣಕ್ಕಿಳಿಸಿದೆ.

ಸಾಲು ಸಾಲು ಸಭೆ ನಡೆಸಿ, ಭಿನ್ನಮತ ಶಮನಗೊಳಿಸಿ ಕಸರತ್ತು ನಡೆಸಿದ್ದ ಕಾಂಗ್ರೆಸ್ ಪಡೆ ಅಳೆದುತೂಗಿ ಅಭ್ಯರ್ಥಿಗಳನ್ನ ಫೈನಲ್ ಮಾಡಿದೆ. ಆದರೆ ಇನ್ನೂ 58 ಕ್ಷೇತ್ರಗಳಲ್ಲಿ ಅಭ್ಯರ್ಥಿ ಯಾರೆಂಬುದನ್ನ ಡಿಸೈಡ್ ಮಾಡಿಲ್ಲ. ಅದ್ರಲ್ಲೂ ನಾಲ್ವರು ಹಾಲಿ ಶಾಸಕರ ಕ್ಷೇತ್ರಕ್ಕೂ ಟಿಕೆಟ್ ಅನೌನ್ಸ್ ಆಗಿಲ್ಲ. ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಕಣ್ಣಿಟ್ಟಿರುವ ಕೋಲಾರ ಕ್ಷೇತ್ರದ ಟಿಕೆಟ್ ಸಸ್ಪೆನ್ಸ್ ಹಾಗೇ ಉಳಿದಿದೆ. ಎರಡನೇ ಪಟ್ಟಿಯಲ್ಲೂ ಕೋಲಾರ ಅಭ್ಯರ್ಥಿ ಯಾರು ಅನ್ನೋದನ್ನ ಅನೌನ್ಸ್ ಮಾಡಿಲ್ಲ. ಇನ್ನು ಇವತ್ತು ರಿಲೀಸ್ ಆಗಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೆಲ ವಲಸಿಗರಿಗೆ ಮಣೆ ಹಾಕಲಾಗಿದೆ. ಹಾಗೇ ಕೆಲ ಕ್ಷೇತ್ರಗಳಿಗೆ ಅಚ್ಚರಿಯ ಅಭ್ಯರ್ಥಿಗಳನ್ನ ಆಯ್ಕೆ ಮಾಡಿದೆ.

ಅಚ್ಚರಿ ಅಭ್ಯರ್ಥಿಗಳು ಅಖಾಡಕ್ಕೆ!

42 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ರಿಲೀಸ್

ವಲಸಿಗರಿಗೆ ಮಣೆ ಹಾಕಿರುವ ಕಾಂಗ್ರೆಸ್

ಮೊಳಕಾಲ್ಮೂರು – ಎನ್.ವೈ ಗೋಪಾಲಕೃಷ್ಣ

ಗುರುಮಠಕಲ್ – ಬಾಬೂರಾವ್ ಚಿಂಚನಸೂರು

ಗುಬ್ಬಿ – ಎಸ್.ಆರ್ ಶ್ರೀನಿವಾಸ್

ಕೆ.ಆರ್ ಪೇಟೆ – ಬಿ.ಎಲ್ ದೇವರಾಜ್

ಯಲ್ಲಾಪುರ – ವಿ.ಎಸ್ ಪಾಟೀಲ್

ವೈಎಸ್ ವಿ ದತ್ತಗಿಲ್ಲ ಕಡೂರು ಟಿಕೆಟ್

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ದತ್ತ

ಕಡೂರಿನಿಂದ ಆನಂದ್ ಕೆ.ಎಸ್ ಕಣಕ್ಕೆ

ಧಾರವಾಡದಿಂದ ವಿನಯ್ ಕುಲಕರ್ಣಿ ಸ್ಪರ್ಧೆ

ಶಿಗ್ಗಾಂವಿಯಿಂದ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು

ಮೇಲುಕೋಟೆಯಲ್ಲಿ ದರ್ಶನ್ ಪುಟ್ಟಣ್ಣಯ್ಯಗೆ ಬೆಂಬಲ

ಮಾಜಿ ಸಿಎಂ ಧರಂ ಸಿಂಗ್ 2ನೇ ಪುತ್ರನಿಗೆ ಮಣೆ

ಬಸವಕಲ್ಯಾಣದಿಂದ ವಿಜಯ್ ಸಿಂಗ್ ಕಣಕ್ಕೆ

ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳಿಗೆ ಟಿಕೆಟ್ ಅನೌನ್ಸ್ ಮಾಡಿದ್ದ ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನ ರಿಲೀಸ್ ಮಾಡಿದೆ. ಆದರೆ ಇನ್ನೂ 58 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಕಸರತ್ತು ನಡೀತಿದೆ. ಆದರೆ ಕೆಲ ಹಾಲಿ ಶಾಸಕರಿಗೂ ಟಿಕೆಟ್ ಘೋಷಣೆ ಮಾಡದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಬೆಂಗಳೂರಿನ ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ, ಲಿಂಗಸುಗೂರಿನ ಹಾಲಿ ಶಾಸಕ ಡಿಎಸ್‌ ಹುಲಗೇರಿ, ಹರಿಹರ ಕ್ಷೇತ್ರದ ಹಾಲಿ ಶಾಸಕ ರಾಮಪ್ಪ, ಕುಂದಗೋಳದ ಹಾಲಿ ಶಾಸಕಿ ಕುಸುಮಾ ಶಿವಳ್ಳಿ ಅವರಿಗೆ ಇದುವರೆಗೂ ಟಿಕೆಟ್‌ ಘೋಷಣೆ ಆಗಿಲ್ಲ. ಹೀಗಾಗಿ ಮುಂದಿನ ಲಿಸ್ಟ್​ ನಲ್ಲಿ ಇವರಿಗೆ ಟಿಕೆಟ್ ಸಿಗುತ್ತಾ ಅಥವಾ ಹಾಲಿಶಾಸಕರ ಬದಲಾಗಿ ಬೇರೆಯವರಿಗೆ ಕಾಂಗ್ರೆಸ್ ಅವಕಾಶ ನೀಡುತ್ತಾ ಅನ್ನೋದನ್ನ ಕಾದು ನೋಡ್ಬೇಕು.

suddiyaana