ತಮ್ಮ ತಪ್ಪನ್ನು ಇತರರ ಮೇಲೆ ಹೊರಿಸಲು ಕಾಂಗ್ರೆಸ್ ಸರ್ಕಾರ ಸದಾ “ಸಿದ್ದ”.. ಇದು ಬಂದ ಬರವಲ್ಲ, ಕಾಂಗ್ರೆಸ್‌ ತಂದ ಬರ – ಬಿಜೆಪಿ ಕಿಡಿ

ತಮ್ಮ ತಪ್ಪನ್ನು ಇತರರ ಮೇಲೆ ಹೊರಿಸಲು ಕಾಂಗ್ರೆಸ್ ಸರ್ಕಾರ ಸದಾ “ಸಿದ್ದ”.. ಇದು ಬಂದ ಬರವಲ್ಲ, ಕಾಂಗ್ರೆಸ್‌ ತಂದ ಬರ – ಬಿಜೆಪಿ ಕಿಡಿ

ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆಯಾಗಿದ್ದು, ಬರಗಾಲದ ಪರಿಸ್ಥಿತಿ ಉಂಟಾಗಿದೆ. ಬೆಳೆಗಳು ಸಂಪೂರ್ಣ ನಾಶವಾಗಿದ್ದು, ರೈತರು ಕಂಗಾಲಾಗಿದ್ದಾರೆ. ಅಷ್ಟೇ ಅಲ್ಲದೇ ಆತ್ಮಹತ್ಯೆಗೂ ಶರಣಾಗುತ್ತಿದ್ದಾರೆ. ರೈತರಿಗೆ ಇಷ್ಟೊಂದು ಸಮಸ್ತೆಯಾಗುತ್ತಿದ್ದರೂ ರಾಜ್ಯ ಸರ್ಕಾರ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ. ನಾಡಿನ ನೇಗಿಲಯೋಗಿಗಳ ಸಂಕಷ್ಟಕ್ಕೆ ದನಿಯಾಗದೇ, ಕಾಲಹರಣ ಮಾಡುತ್ತಿರುವ ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ರಾಜ್ಯದಲ್ಲಿ ರೈತರ ಪರಿಸ್ಥಿತಿ ಶೋಚನೀಯವಾಗಿದೆ. ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಬರದ ಬೇಗೆಯನ್ನು ಕಾಂಗ್ರೆಸ್ ತೀಕ್ಷ್ಣಗೊಳಿಸಿದೆ. ಬಿಜೆಪಿ ಸರ್ಕಾರ ಜಾರಿಗೆ ತಂದ ಎಲ್ಲಾ ರೈತಪರ ಯೋಜನೆಗಳನ್ನೂ ಸ್ಥಗಿತಗೊಳಿಸಿ ಸಿದ್ದರಾಮಯ್ಯ ಅವರ ಸರ್ಕಾರ ಬಡ ರೈತರ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ. ಇದು ಬಂದ ಬರವಲ್ಲ, ಕಾಂಗ್ರೆಸ್‌ ತಂದ ಬರ. ಎಂದು ಕಿಡಿಕಾರಿದೆ. ಅಷ್ಟೇ ಅಲ್ಲದೇ ರೈತರ ಸಮಸ್ಯೆಗಳನ್ನು ಬಿಜೆಪಿ ಪಟ್ಟಿಮಾಡಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ನೇರಳೆ ಮಾರ್ಗದ ಪ್ರಯಾಣಿಕರಿಗೆ ಸಿಹಿಸುದ್ದಿ – ಸೆ. 15 ರ ನಂತರ ಈ ಎರಡು ಮಾರ್ಗಗಳಲ್ಲಿ ಸಂಚಾರ ಆರಂಭ?

ಪಂಪ್‌ಸೆಟ್‌ಗಳಿಗೆ 2 ಗಂಟೆಯೂ ಕರೆಂಟಿಲ್ಲ. ಜಲಾಶಯಗಳಲ್ಲಿ ನೀರೇ ಇಲ್ಲ. ಸಮ್ಮಾನ್‌ ನಿಧಿ ಕೈಗೆ ಸಿಗುತ್ತಿಲ್ಲ. ಓದುವ ರೈತ ಮಕ್ಕಳಿಗೆ ರೈತ ವಿದ್ಯಾ ನಿಧಿಯ ಬೆಂಬಲವಿಲ್ಲ. ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಮೂಲಕವೂ ಭೂ ಸಿರಿಯ ₹10,000 ಈಗ ಸಿಗುವುದಿಲ್ಲ. ಹೈನುಗಾರರಿಗೆ ಕ್ಷೀರ ಸಮೃದ್ಧಿ ಬ್ಯಾಂಕ್‌ನ ಲಾಭವಿಲ್ಲ. ಇಷ್ಟೆಲ್ಲಾ ಆದ ಮೇಲೂ ರೈತನ ಪ್ರಾಣಕ್ಕೂ ಬೆಲೆಯಿಲ್ಲ ಎಂದು ರೈತರ ಸಮಸ್ಯೆಗಳನ್ನು ಪಟ್ಟಿ ಮಾಡಿ ಬಿಜೆಪಿ ಕಿಡಿಕಾರಿದೆ.

ತಮ್ಮ ತಪ್ಪನ್ನು ಇತರರ ಮೇಲೆ ಹೊರಿಸಲು ಕಾಂಗ್ರೆಸ್ ಸರ್ಕಾರ ಸದಾ “ಸಿದ್ದ”ವಾಗಿರುತ್ತದೆ. ರಾಜ್ಯದಲ್ಲಿ 130 ಕ್ಕೂ ಹೆಚ್ಚು ತಾಲೂಕುಗಳಲ್ಲಿ ಕಂಡು ಕೇಳರಿಯದಂತಹ ಬರವಿದ್ದರೂ, ರಾಜ್ಯದ ಎಟಿಎಂ ಸರ್ಕಾರ ಬರ ಘೋಷಿಸಲು ಮೀನಮೇಷ ಎಣಿಸುತ್ತಾ ಕಾಲಹರಣ ಮಾಡುತ್ತಿದೆ. ರಾಜ್ಯದಲ್ಲಿ ಬರ ಘೋಷಿಸಲು, ಇನ್ನೆಷ್ಟು ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂಬುದನ್ನು ಸಿಎಂ ಸಿದ್ದರಾಮಯ್ಯನವರೇ ಸ್ಪಷ್ಟಪಡಿಸಬೇಕು.

ನಾಡಿನ ನೇಗಿಲಯೋಗಿಗಳ ಸಂಕಷ್ಟಕ್ಕೆ ದನಿಯಾಗದೇ, ಕಾಲಹರಣ ಮಾಡುತ್ತಿರುವ ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ಎಂದಿದೆ. ಅಷ್ಟೇ ಅಲ್ಲದೇ ಸರ್ಕಾರದ ವಿರುದ್ಧ ಕಾರ್ಟೂನ್‌ ಚಿತ್ರವೊಂದನ್ನು ಬಿಡುಗಡೆ ಮಾಡಿದೆ. ಈ ಕಾರ್ಟೂನ್‌ ಚಿತ್ರದಲ್ಲಿ ಸಿದ್ದರಾಮಯ್ಯ ಹಾಗೂ ರೈತನ ಚಿತ್ರವನ್ನು ಬಿಡಿಸಲಾಗಿದೆ. ರೈತನೊಬ್ಬ ಗೋಣಿ ಚೀಲ ಹೊತ್ತುಕೊಂಡಿದ್ದಾನೆ. ಇದರಲ್ಲಿ ರೈತರ ಸಮಸ್ಯೆಗಳನ್ನು ಪಟ್ಟಿ ಮಾಡಲಾಗಿದೆ.

suddiyaana