ಕಾಂಗ್ರೆಸ್‌ ಸರ್ಕಾರ ಪ್ರಿಯಾಂಕ್ ಖರ್ಗೆಯವರನ್ನು ಪ್ರಿಯಾಂಕಾ ಗಾಂಧಿಯೆಂದು ಭಾವಿಸಿ ಸಹಿಸಿಕೊಂಡಿದೆ! – ಬಿಜೆಪಿ ಟ್ವೀಟ್

ಕಾಂಗ್ರೆಸ್‌ ಸರ್ಕಾರ ಪ್ರಿಯಾಂಕ್ ಖರ್ಗೆಯವರನ್ನು ಪ್ರಿಯಾಂಕಾ ಗಾಂಧಿಯೆಂದು ಭಾವಿಸಿ ಸಹಿಸಿಕೊಂಡಿದೆ! – ಬಿಜೆಪಿ ಟ್ವೀಟ್

ಬೆಂಗಳೂರು: ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವಿನ ಟ್ವೀಟ್‌ ಸಮರ ನಿಲ್ಲುವಂತೆ ಕಾಣುತ್ತಿಲ್ಲ. ಬಿಜೆಪಿ ಈಗ ಕಾಂಗ್ರೆಸ್‌ ನಾಯಕ ಪ್ರಿಯಾಂಕ್‌ ಖರ್ಗೆ ವಿರುದ್ಧ ಛಾಟಿ ಬೀಸಿದೆ. ಎಟಿಎಂ ಸರ್ಕಾರದ ಶ್ಯಾಡೋ ಸಿಎಂ ಯತೀಂದ್ರ ಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿದೆ. ಸಿಕ್ಕ ಸಿಕ್ಕಲ್ಲಿ ಪ್ರಿಯಾಂಕ್‌ ಖರ್ಗೆ ಕೈಯಾಡಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ.

ಇದನ್ನೂ ಓದಿ:‌ ಪ್ರವಾಹ ಪರಿಸ್ಥಿತಿ ಅವಲೋಕಿಸಲು ಬಂದ ಶಾಸಕರು – ಆಕ್ರೋಶಗೊಂಡ ಮಹಿಳೆಯಿಂದ ಶಾಸಕರಿಗೆ ಕಪಾಳಮೋಕ್ಷ..!

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ಎಟಿಎಂ ಸರ್ಕಾರದ ಶ್ಯಾಡೋ ಸಿಎಂ ಯತೀಂದ್ರ ಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿದೆ. ಸಿಕ್ಕ ಸಿಕ್ಕಲ್ಲಿ ಪ್ರಿಯಾಂಕ್‌ ಖರ್ಗೆ ಕೈಯಾಡಿಸುತ್ತಿದ್ದಾರೆ. ಎಟಿಎಂ ಸರ್ಕಾರದ ಹಣಕಾಸು ಬಜೆಟ್ ಮಂಡಿಸಿದ್ದು ಸಿದ್ದರಾಮಯ್ಯ. ಆದರೆ ವಿನಾಕಾರಣ ಉತ್ತರ ನೀಡುವುದು ಪ್ರಿಯಾಂಕ್ ಖರ್ಗೆ..! ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್, ಚೆಸ್ ಆಡುತ್ತಿರುವುದು ಪ್ರಿಯಾಂಕ್ ಖರ್ಗೆ..!‌ ಇನ್ನು ಗೃಹ ಇಲಾಖೆ ಸಚಿವ ಖಾತೆ ಡಾ. ಜಿ ಪರಮೇಶ್ವರ್‌ ಅವರದ್ದು, ಆದರೆ ಅಧಿಕಾರ‌ ಚಲಾಯಿಸುತ್ತಿರುವುದು ಪ್ರಿಯಾಂಕ್ ಖರ್ಗೆ..!  ಎಂದು ಕಾಂಗ್ರೆಸ್‌ ಕಾಲೆಳೆದಿದೆ.

ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್ ಕೆ ಪಾಟೀಲ್, ಅನಧಿಕೃತ ‌ನಿರ್ವಹಣೆ ಮಾಡುತ್ತಿರುವುದು ಪ್ರಿಯಾಂಕ್ ಖರ್ಗೆ..!   ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾಗಿ ದಿನೇಶ್ ಗುಂಡೂರಾವ್ ನಾಮಕಾವಸ್ಥೆ ಮಾತ್ರ. ಇಲ್ಲೂ ಮದ್ದು ಚುಚ್ಚುತ್ತಿರುವುದು ಪ್ರಿಯಾಂಕ್ ಖರ್ಗೆ..! ಇನ್ನು ಸಮಾಜ ಕಲ್ಯಾಣಯಲ್ಲಿ ತೋರಿಕೆಗಾಗಿ ಡಾ.ಎಚ್.ಸಿ. ಮಹದೇವಪ್ಪ. ಅಲ್ಲೂ ಕೈಯಾಡಿಸುತ್ತಿರುವುದು ಪ್ರಿಯಾಂಕ್ ಖರ್ಗೆ..! ಕಂದಾಯ ಇಲಾಖೆ ಸಚಿವ ಎಂದು ಹೇಳಿಕೊಳ್ಳಲು ಕೃಷ್ಣಭೈರೇಗೌಡ, ಹುದ್ದೆ ನಡೆಸುತ್ತಿರುವುದು ಪ್ರಿಯಾಂಕ್ ಖರ್ಗೆ..! ಕಾಂಗ್ರೆಸ್‌ ಸರ್ಕಾರ ಪ್ರಿಯಾಂಕ್ ಖರ್ಗೆಯವರನ್ನು ಪ್ರಿಯಾಂಕಾ ಗಾಂಧಿಯೆಂದು ಭಾವಿಸಿ ಸಹಿಸಿಕೊಂಡಂತೆ ಕಾಣುತ್ತಿದೆ ಎಂದು ವ್ಯಂಗ್ಯವಾಡಿದೆ.

suddiyaana