ಹಣದ ಆಮಿಷ.. ಕುಕ್ಕರ್ ಕಾಳಗ – ರಾಜ್ಯ ರಾಜಕೀಯದಲ್ಲಿ ಗಿಫ್ಟ್ ಪಾಲಿಟಿಕ್ಸ್..!

ಹಣದ ಆಮಿಷ.. ಕುಕ್ಕರ್ ಕಾಳಗ – ರಾಜ್ಯ ರಾಜಕೀಯದಲ್ಲಿ ಗಿಫ್ಟ್ ಪಾಲಿಟಿಕ್ಸ್..!

ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಗೂ ಮುನ್ನವೇ ಗಿಫ್ಟ್ ಪಾಲಿಟಿಕ್ಸ್ ಶುರುವಾಗಿದೆ. ಕಾಂಚಾಣ ಸದ್ದಿನ ಜೊತೆ ಕುಕ್ಕರ್ ಕಾಳಗ ಕೂಡ ತಾರಕಕ್ಕೇರಿದೆ. ಇದೇ ಸಮರ ಈಗ ಠಾಣೆ ಮೆಟ್ಟಿಲೇರಿದೆ.

ವಿಧಾನಸಭಾ ಚುನಾವಣೆಗೆ ಎರಡೇ ತಿಂಗಳು ಬಾಕಿ ಇದ್ದು, ಬಿಜೆಪಿ ನಾಯಕರು ಮತದಾರರಿಗೆ ಹಣದ ಆಮಿಷ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ದೂರು ನೀಡಿದ್ದಾರೆ. ವಿಪಕ್ಷನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಇತರೆ ನಾಯಕರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಸಿಎಂ ಬಸವರಾಜ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲು, ರಮೇಶ್ ಜಾರಕಿಹೊಳಿ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ : ಮೊಟ್ಟೆಯೇ ಬೇಕೆಂದು ಪಟ್ಟು ಹಿಡಿದ ಮಕ್ಕಳು – ಸಮೀಕ್ಷೆಯಲ್ಲಿ ಸತ್ಯ ಬಹಿರಂಗ!

40 ಪರ್ಸೆಂಟ್ ಕಮಿಷನ್ ಮೂಲಕ ಬಿಜೆಪಿ ನಾಯಕರು ಸಾವಿರಾರು ಕೋಟಿ ರೂಪಾಯಿ ಸಂಗ್ರಹ ಮಾಡಿಕೊಂಡಿದ್ದಾರೆ. ಒಂದು ಮತಕ್ಕೆ 6 ಸಾವಿರ ಕೊಡ್ತೀವಿ ಅಂತಾ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಆಮಿಷದ ವಿಡಿಯೋ ಸಾಕ್ಷಿ ಸಮೇತ ಪೊಲೀಸರಿಗೆ ದೂರು ಕೊಟ್ಟಿರೋದಾಗಿ ಡಿಕೆಶಿ ಹೇಳಿದ್ದಾರೆ.

ಕಾಂಗ್ರೆಸ್ ಆರೋಪಕ್ಕೆ ಸಿಎಂ ಬೊಮ್ಮಾಯಿ ತಿರುಗೇಟು ಕೊಟ್ಟಿದ್ದಾರೆ. ಕಾಂಗ್ರೆಸ್ ಎಷ್ಟು ತಳಮಟ್ಟಕ್ಕೆ ಹೋಗಿದೆ ಅನ್ನೋದಕ್ಕೆ ಇದು ಉದಾಹರಣೆ. ಅವ್ರು ಒಂದು ಕಂಪ್ಲೇಂಟ್ ಕೊಟ್ರೆ ನಾವು ನೂರು ಕಂಪ್ಲೇಂಟ್ ಕೊಡಬಹುದು. ಕುಣಿಗಲ್​ನಲ್ಲಿ ಕಾಂಗ್ರೆಸ್ ಫೋಟೋ ಇರೋ ಕುಕ್ಕರ್ ಕೊಟ್ಟಿದ್ದಾರೆ. ಸಾಕ್ಷಿಸಮೇತ ಸಿಕ್ಕಿಬಿದ್ದಿದ್ದು ಇದು ಆಮಿಷ ಒಡ್ಡಿದಂಗೆ ಆಗಲ್ವಾ ಎಂದು ಟಾಂಗ್ ಕೊಟ್ಟಿದ್ದಾರೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ ಗಿಫ್ಟ್ ಪಾಲಿಟಿಕ್ಸ್ ಸಮರ ಜೋರಾಗಿದೆ.

suddiyaana