ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ – ಸಚಿವರ ಮಕ್ಕಳಿಗೆ ಮಣೆ

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ – ಸಚಿವರ ಮಕ್ಕಳಿಗೆ ಮಣೆ

ಲೋಕಸಭೆ ಚುನಾವಣೆಗೆ ಕೆಲವೇ ವಾರಗಳು ಮಾತ್ರ ಬಾಕಿ ಉಳಿದಿದೆ. ಕಾಂಗ್ರೆಸ್ ಈಗಾಗಲೇ ಮೊದಲ ಪಟ್ಟಿಯಲ್ಲಿ ಏಳು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿತ್ತು. ಇದೀಗ ರಾಜ್ಯ ಕಾಂಗ್ರೆಸ್‌ ಅಭ್ಯರ್ಥಿಗಳ 2 ನೇ ಪಟ್ಟಿ ರಿಲೀಸ್‌ ಮಾಡಿದೆ. ಕರ್ನಾಟಕದಿಂದ ಲೋಕಸಭೆಗೆ ಸ್ಪರ್ಧಿಸಲಿರುವ ಕಾಂಗ್ರೆಸ್‌ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ 17 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.

ಇದನ್ನೂ ಓದಿ : ಇನ್ನು ಮುಂದೆ ಹೊಯ್ಸಳ ಪೊಲೀಸರಿಗೆ ಬಂದೂಕು ಕಡ್ಡಾಯ – ಕಾರಣವೇನು ಗೊತ್ತಾ?

ಎರಡನೇ ಅಭ್ಯರ್ಥಿಗಳ ಪಟ್ಟಿಯಲ್ಲಿ ಸಚಿವರ ಮಕ್ಕಳಿಗೆ ಮಣೆಹಾಕಲಾಗಿದೆ. ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್​ ಖಂಡ್ರೆಗೆ ಬೀದರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಮಗ ಮೃಣಾಲ್ ಹೆಬ್ಬಾಳ್ಕರ್‌, ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿಗೆ ಚಿಕ್ಕೋಡಿ, ಸಚಿವ ರಾಮಲಿಂಗರೆಡ್ಡಿ ಪುತ್ರಿ ಸೌಮ್ಯಾರೆಡ್ಡಿಗೆ ಬೆಂಗಳೂರು ದಕ್ಷಿಣ ಟಿಕೆಟ್, ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್‌ ಅವರಿಗೆ ಬಾಗಲಕೋಟೆ ಟಿಕೆಟ್‌, ವೆಂಟಪ್ಪ ನಾಯಕ್ ಅವರ ಪುತ್ರ ರಾಜಾ ವೇಣುಗೋಪಾಲ ನಾಯಕ್‌ಗೆ ಲೋಕಸಭಾ ಟಿಕೆಟ್ ನೀಡಲಾಗಿದೆ.

ಕರ್ನಾಟಕದ 17 ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಹೀಗಿದೆ..

  • ಬಾಗಲಕೋಟೆ ಲೋಕಸಭಾ ಕ್ಷೇತ್ರ – ಸಂಯುಕ್ತಾ ಪಾಟೀಲ್‌
  • ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ – ಸೌಮ್ಯಾರೆಡ್ಡಿ
  • ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ – ಎಂ.ವಿ.ರಾಜೀವ್ ಗೌಡ
  • ಮೈಸೂರು ಲೋಕಸಭಾ ಕ್ಷೇತ್ರ – ಎಂ.ಲಕ್ಷ್ಮಣ್‌
  • ಚಿತ್ರದುರ್ಗ ಲೋಕಸಭಾ ಕ್ಷೇತ್ರ – ಬಿ.ಎನ್.ಚಂದ್ರಪ್ಪ
  • ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ – ಪದ್ಮರಾಜ್‌
  • ಉಡುಪಿ, ಚಿಕ್ಕಮಗಳೂರು ಕ್ಷೇತ್ರ – ಜಯಪ್ರಕಾಶ್ ಹೆಗ್ಡೆ
  • ಕಲಬುರಗಿ ಲೋಕಸಭಾ ಕ್ಷೇತ್ರ – ರಾಧಾಕೃಷ್ಣ ದೊಡ್ಡಮನಿ
  • ದಾವಣಗೆರೆ ಲೋಕಸಭಾ ಕ್ಷೇತ್ರ – ಪ್ರಭಾ ಮಲ್ಲಿಕಾರ್ಜುನ
  • ಬೆಂಗಳೂರು ಸೆಂಟ್ರಲ್‌ ಕ್ಷೇತ್ರ – ಮನ್ಸೂರ್ ಅಲಿಖಾನ್‌
  • ಉತ್ತರ ಕನ್ನಡ ಕ್ಷೇತ್ರ – ಡಾ.ಅಂಜಲಿ ನಿಂಬಾಳ್ಕರ್‌
  • ಧಾರವಾಡ ಲೋಕಸಭಾ ಕ್ಷೇತ್ರ – ವಿನೋದ್ ಅಸೋಟಿ
  • ಕೊಪ್ಪಳ ಲೋಕಸಭಾ ಕ್ಷೇತ್ರ – ರಾಜಶೇಖರ್ ಹಿಟ್ನಾಳ್‌
  • ಬೀದರ್ ಲೋಕಸಭಾ ಕ್ಷೇತ್ರ – ಸಾಗರ್ ಖಂಡ್ರೆ
  • ರಾಯಚೂರು ಲೋಕಸಭಾ ಕ್ಷೇತ್ರ – ಕುಮಾರ್‌ ಜಿ ನಾಯಕ್‌
  • ಬೆಳಗಾವಿ ಲೋಕಸಭಾ ಕ್ಷೇತ್ರ – ಮೃಣಾಲ್ ಹೆಬ್ಬಾಳ್ಕರ್‌
  • ಚಿಕ್ಕೋಡಿ ಲೋಕಸಭಾ ಕ್ಷೇತ್ರ – ಪ್ರಿಯಾಂಕಾ ಜಾರಕಿಹೊಳಿ

Shwetha M