ಚುನಾವಣೆಯಲ್ಲಿ ಗೆಲ್ಲಬೇಕೆಂದು ಚಪ್ಪಲಿಯಿಂದ ಹೊಡೆಸಿಕೊಂಡ ಕಾಂಗ್ರೆಸ್‌ ಅಭ್ಯರ್ಥಿ!

ಚುನಾವಣೆಯಲ್ಲಿ ಗೆಲ್ಲಬೇಕೆಂದು ಚಪ್ಪಲಿಯಿಂದ ಹೊಡೆಸಿಕೊಂಡ ಕಾಂಗ್ರೆಸ್‌ ಅಭ್ಯರ್ಥಿ!

ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ನಾಯಕರು ತಮ್ಮ ಹೈಡ್ರಾಮ ಶುರು ಮಾಡುತ್ತಾರೆ. ಪ್ರಚಾರಕ್ಕೆ ತೆರಳುವಾಗ ಎಲ್ಲರ ಬಳಿ ತೆರಳಿ ಕಾಲಿಗೆ ಬಿದ್ದು ಆಶಿರ್ವಾದ ಪಡೆಯುವುದು, ಜನರ ಸಮಸ್ಯೆಗಳನ್ನು ಆಲಿಸುವುದು,  ನಿಂತಲ್ಲೇ ಸಮಸ್ಯೆ ಪರಿಹಾರ ಮಾಡುತ್ತಾರೆ. ಇದು ಸಾಮಾನ್ಯ. ಆದ್ರೆ ಇಲ್ಲೊಬ್ಬ ಕಾಂಗ್ರೆಸ್‌ ಅಭ್ಯರ್ಥಿ ಚುನಾವಣೆಯಲ್ಲಿ ವೃದ್ಧನೊಬ್ಬನ ಕೈಯಿಂದ ಚಪ್ಪಲಿಯಲ್ಲಿ ಹೊಡೆಸಿಕೊಂಡಿದ್ದಾರೆ.

ಹೌದು, ಈ ಘಟನೆ ಮಧ್ಯಪ್ರದೇಶದ ರತ್ಲಂ ವಿಧಾನ ಸಭಾ ಕ್ಷೇತ್ರದಲ್ಲಿ ನಡೆದಿದೆ.  ಕಾಂಗ್ರೆಸ್​​​ ಅಭ್ಯರ್ಥಿ ಸಕ್ಲೇಚಾ ಎಂಬುವವರು  “ಅಬ್ಬಾ” ಎಂದು ಕರೆಯಲ್ಪಡುವ ಫಕೀರ್ ಬಾಬಾರಿಂದ ಚಪ್ಪಲಿ ಆಶೀರ್ವಾದ ಪಡೆದಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಚಪ್ಪಲಿಯಿಂದ ಹೊಡೆಸಿಕೊಳ್ಳುತ್ತಿರುವ ವಿಡಿಯೋ ಭಾರಿ  ವೈರಲ್​​​ ಆಗುತ್ತಿದೆ.

ಇದನ್ನೂ ಓದಿ: ಹಮಾಸ್‌ ಉಗ್ರರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿದ ಇಸ್ರೇಲ್ – ಐವರು ಭಯೋತ್ಪಾದಕರ ಹತ್ಯೆ

ಈ ವಿಡಿಯೋ ವೈರಲ್​​​ ಆಗುತ್ತಿದ್ದಂತೆ, ಇದಕ್ಕೆ ಪ್ರತಿಕ್ರಿಯಿಸಿದ ಪರಸ್ ಸಕ್ಲೇಚಾ, ಈ ಫಕೀರ ಅತ್ಯಂತ ಗೌರವಾನ್ವಿತ, ಅವರು ಮೋವ್ ರಸ್ತೆಯಲ್ಲಿರುವ ದರ್ಗಾದಲ್ಲಿ ವಾಸಿವಾಗಿರುತ್ತಾರೆ. ಯಾವುದೇ ಒಂದು ಕಾರ್ಯ ಯಶಸ್ವಿಯಾಗಬೇಕಾದರೆ, ಈ ಫಕೀರನಿಗೆ ಲುಂಗಿ ಮತ್ತು ಚಪ್ಪಲಿಗಳಂತಹ ಕಾಣಿಕೆಗಳನ್ನು ನೀಡುತ್ತಾರೆ. ಈ ಕಾಣಿಕೆಯಲ್ಲಿ ಅವರಿಗೆ ಯಾವುದು ಬೇಕು ಅದನ್ನು ಸ್ವೀಕರಿಸಿ, ಉಳಿದದ್ದನ್ನು ಹಿಂದಕ್ಕೆ ನೀಡುತ್ತಾರೆ ಎಂದು ಹೇಳಿದ್ದಾರೆ.

ಸಕ್ಲೇಚಾ ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಅವರು ಬಿಜೆಪಿಯ ಹಾಲಿ ಶಾಸಕ, ಚೇತನ್ ಕಶ್ಯಪ್ ವಿರುದ್ಧ ಕಣಕ್ಕೆ ಇಳಿದಿದ್ದಾರೆ. ಸಕ್ಲೇಚಾ ಈ ಹಿಂದೆ 2008ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ರತ್ಲಾಮ್ ಕ್ಷೇತ್ರದಿಂದ ಗೆದ್ದಿದ್ದರು. ನಂತರ 2013ರಲ್ಲಿ ಮತ್ತೆ ಸ್ವರ್ಧಿಸಿ ಸೋತರು.

Shwetha M