ʼಕಾಂಗ್ರೆಸ್ ಅಧಿಕಾರಕ್ಕೆ ಬಂತು ಎಲ್ಲವೂ ಹೋಯ್ತು!.. ರಾಜ್ಯದ ಜನತೆಗೆ ದ್ರೋಹ ಬಗೆಯುತ್ತಿದೆ ರಾಜ್ಯ ಸರ್ಕಾರʼ – ಬಿಜೆಪಿ ಆಕ್ರೋಶ

ಬೆಂಗಳೂರು: ರಾಜ್ಯದಲ್ಲಿ ಕಿಚ್ಚು ಜೋರಾಗಿದೆ. ಕಾವೇರಿ ನೀರಿಗಾಗಿ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಒಟ್ಟಾಗಿ ಹೋರಾಟಕ್ಕೆ ಇಳಿದಿದ್ದಾರೆ. ಕಾವೇರಿ ನೀರು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಮಾಜಿ ಸಿಎಂಗಳಾದ ಬಿಎಸ್ ಯಡಿಯೂರಪ್ಪ, ಹೆಚ್ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಈ ಬೆನ್ನಲ್ಲೇ ರಾಜ್ಯ ತಮ್ಮ ವೈಯಕ್ತಿಕ ಸ್ನೇಹವನ್ನು ಕಾಪಾಡಿಕೊಳ್ಳಲು, ರಾಜ್ಯದ ಜನತೆಗೆ ಕಾಂಗ್ರೆಸ್ ದ್ರೋಹ ಬಗೆಯುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು ಎಲ್ಲವೂ ಹೋಯ್ತು ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: ರಾಜ್ಯ ಸರ್ಕಾರ ತಮಿಳುನಾಡಿನ ಏಜೆಂಟ್ನಂತೆ ವರ್ತಿಸುತ್ತಿದೆ – ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕಿಡಿ
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಕಾವೇರಿ ಎಂದೆಂದಿಗೂ ನಮ್ಮದು, ತಮ್ಮ ವೈಯಕ್ತಿಕ ಸ್ನೇಹವನ್ನು ಕಾಪಾಡಿಕೊಳ್ಳಲು, ರಾಜ್ಯದ ಜನತೆಗೆ ಕಾಂಗ್ರೆಸ್ ದ್ರೋಹ ಬಗೆಯುತ್ತಿದೆ. ರಾಜಕೀಯ ಮಿತ್ರರನ್ನು ಮೆಚ್ಚಿಸಲು, I.N.D.I. ಮೈತ್ರಿಕೂಟದ ಪಾಲುದಾರ ಸ್ಟಾಲಿನ್‌ರನ್ನು ಓಲೈಸಲು ಜನರು ನೀಡಿದ ಅಧಿಕಾರವನ್ನು ಬಳಸಬೇಡಿ. ಜನರು ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಸರ್ಕಾರ ಅವರ ಭಾವನೆಗಳನ್ನು ಆಲಿಸುವುದು ಬಿಟ್ಟು ಪೊಲೀಸ್ ಬಲದ ಮೂಲಕ ಹತ್ತಿಕ್ಕುತ್ತಿರುವುದು ಖಂಡನೀಯ ಎಂದು ಕಿಡಿಕಾರಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು ಎಲ್ಲವೂ ಹೋಯ್ತು..! ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಏನೆಲ್ಲಾ ಹೋಯ್ತು ಎಂಬ ಪಟ್ಟಿಯನ್ನು ಕೂಡ ಟ್ವೀಟ್ ಮಾಡಿದೆ. ಬಿಜೆಪಿ ಬಿಡುಗಡೆ ಮಾಡಿದ ಪಟ್ಟಿ ಹೀಗಿದೆ..
- ಕಾಂಗ್ರೆಸ್ ಬಂತು ಕಾವೇರಿ ಹೋಯ್ತು..!
- ಕಾಂಗ್ರೆಸ್ ಬಂತು ಅಭಿವೃದ್ಧಿ ಹೋಯ್ತು..!
- ಕಾಂಗ್ರೆಸ್ ಬಂತು ಆರ್ಥಿಕತೆ ಹೋಯ್ತು..!
- ಕಾಂಗ್ರೆಸ್ ಬಂತು ಕರ್ನಾಟಕದ ಆಸ್ಮಿತೆ ಹೋಯ್ತು..!
- ಕಾಂಗ್ರೆಸ್ ಬಂತು ಮಹದಾಯಿ ಹೋಯ್ತು..!
- ಕಾಂಗ್ರೆಸ್ ಬಂತು ಭದ್ರಾ ಮೇಲ್ದಂಡೆ ಹೋಯ್ತು..!
- ಕಾಂಗ್ರೆಸ್ ಬಂತು ಅನ್ನಭಾಗ್ಯ ಹೋಯ್ತು..!
- ಕಾಂಗ್ರೆಸ್ ಬಂತು ಕಿಸಾನ್ ಸಮ್ಮಾನ್ ಹೋಯ್ತು..!
- ಕಾಂಗ್ರೆಸ್ ಬಂತು ರೈತ ಮಕ್ಕಳ ವಿದ್ಯಾನಿಧಿ ಹೋಯ್ತು..!
- ಕಾಂಗ್ರೆಸ್ ಬಂದಿದೆ ಜನತೆಯ ಬದುಕು ದುಸ್ತರವಾಗಿದೆ..! ಎಂದು ಬಿಜೆಪಿ ಲೇವಡಿ ಮಾಡಿದೆ.