ರೌಡಿಗಳಿಗೂ ಬಿಜೆಪಿ ನಾಯಕರಿಗೂ ಏನು ಸಂಬಂಧ? – ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ವಾಗ್ದಾಳಿ

ರೌಡಿಗಳಿಗೂ ಬಿಜೆಪಿ ನಾಯಕರಿಗೂ ಏನು ಸಂಬಂಧ? – ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ವಾಗ್ದಾಳಿ

ಬೆಂಗಳೂರು: ಬಿಜೆಪಿ ಮುಖಂಡರ ಜೊತೆ ವೇದಿಕೆಯೇರಿದ ಸೈಲೆಂಟ್ ಸುನಿಲ್ ನಿಂದಾಗಿ ಕಮಲಪಾಳಯದ ನಾಯಕರು ಮುಜುಗರ ಪಡುವಂತಾಗಿದೆ. ಇದಾದ ಬೆನ್ನಲ್ಲೇ ಈಗ ವಿಲ್ಸನ್​ಗಾರ್ಡನ್​ ನಾಗ ಕೂಡ ಬುಧವಾರ ರಾತ್ರಿ ಸಚಿವರ ಮನೆಗೆ ಭೇಟಿ ನೀಡಿದ್ದಾನೆ ಅನ್ನೋ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ಬಿಜೆಪಿ ವಿರುದ್ಧ ಟೀಕಾಪ್ರಹಾರ ಮುಂದುವರೆಸಿದೆ.  ರೌಡಿಶೀಟರ್​ಗಳಿಗೆ ಬಿಜೆಪಿ ಮಣೆ ಹಾಕುತ್ತಿದೆ ಎಂದು ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ವಾಗ್ದಾಳಿ ನಡೆಸುತ್ತಿದೆ.

ಇದನ್ನೂ ಓದಿ :  ಸಿದ್ದರಾಮಯ್ಯ ಜೀವನಾಧಾರಿತ ಸಿನಿಮಾ ನಿರ್ಮಾಣಕ್ಕೆ ಮುಂದಾದ ಅಭಿಮಾನಿಗಳು

ರೌಡಿಗಳಿಗೂ ಬಿಜೆಪಿ ನಾಯಕರಿಗೂ ಏನು ಸಂಬಂಧ? ರೌಡಿಗಳಿಗೂ ಬಿಜೆಪಿಗೂ ಯಾವ ನಂಟು, ಏನು ವ್ಯವಹಾರ? ಎಂದು ಟ್ವೀಟ್​ ಮೂಲಕ ರಾಜ್ಯ ಕಾಂಗ್ರೆಸ್ ಘಟಕ ಬಿಜೆಪಿಗೆ ಪ್ರಶ್ನೆ ಮಾಡಿದೆ. ಈಗಾಗಲೇ ಸೈಲೆಂಟ್ ಸುನಿಲ್, ಫೈಟರ್ ರವಿ, ಬೆತ್ತನಗೆರೆ ಶಂಕರ ಮತ್ತಿತರರು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ. ಆದ್ರೆ ಈಗ ವಿಲ್ಸನ್​ಗಾರ್ಡನ್​ ನಾಗ ಕೂಡ ನಿನ್ನೆ ರಾತ್ರಿ ಸಚಿವರ ಮನೆಗೆ ಭೇಟಿ ನೀಡಿದ್ದಾನೆ. ಸಚಿವ ವಿ.ಸೋಮಣ್ಣ ಮನೆಗೆ ರೌಡಿಶೀಟರ್​ ನಾಗ ಬಂದಿದ್ದೇಕೆ? ನಾಗನೂ ಬಿಜೆಪಿ ರೌಡಿ ಮೋರ್ಚಾ ಸೇರುವ ಸಂಭವವಿದೆಯೇ? ಎಂದು ಟ್ವೀಟ್ ಮೂಲಕ ಕಾಂಗ್ರೆಸ್​ ಟೀಕೆ ಮಾಡಿದೆ.

ಮೊದಲೆಲ್ಲಾ ರೌಡಿ ಶೀಟರ್‌ಗಳು ಪೊಲೀಸರೆದುರು ಪರೇಡ್ ನಡೆಸುತ್ತಿದ್ದರು. ಈಗ ಬಿಜೆಪಿ ಕಚೇರಿ ಮುಂದೆ ಪಕ್ಷ ಸೇರಲು ಪರೇಡ್ ನಡೆಸಲು ಸಜ್ಜಾಗಿದ್ದಾರೆ. ರೌಡಿಗಳೊಂದಿಗೆ ಬಿಜೆಪಿಗರ ಬಾಂಧವ್ಯ ಹೊರಬರುತ್ತಿರುವಾಗ ಮತ್ತೊಬ್ಬ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಸಚಿವ ಸೊಮ್ಮಣ್ಣನವರ ಮನೆಗೆ ಭೇಟಿ ನೀಡಿದ್ದು ಬಿಜೆಪಿಯ ರೌಡಿ ಮೋರ್ಚಾಗೆ ಶಕ್ತಿ ನೀಡುವುದಕ್ಕಾ? ಎಂದು ಟ್ವೀಟ್ ಮಾಡಿದೆ. ಕಾಂಗ್ರೆಸ್ ನ ಈ ಆರೋಪಗಳಿಗೆ ಬಿಜೆಪಿ ಹೇಗೆ ಪ್ರತಿಕ್ರಿಯಿ ನೀಡುತ್ತದೆ ಅನ್ನೋದನ್ನ ನೋಡಬೇಕಿದೆ.

suddiyaana