ಆಂಗ್ಲರ ವಿರುದ್ಧ ಅಫ್ಘಾನಿಸ್ತಾನದ ಮರೆಯಲಾಗದ ಗೆಲುವು – ಭಾರತೀಯ ಕ್ರಿಕೆಟ್ ದಿಗ್ಗಜರಿಂದಲೂ ಅಭಿನಂದನೆ

ಆಂಗ್ಲರ ವಿರುದ್ಧ ಅಫ್ಘಾನಿಸ್ತಾನದ ಮರೆಯಲಾಗದ ಗೆಲುವು – ಭಾರತೀಯ ಕ್ರಿಕೆಟ್ ದಿಗ್ಗಜರಿಂದಲೂ ಅಭಿನಂದನೆ

2019ರ ವರ್ಲ್ಡ್​​ಕಪ್​ ಚಾಂಪಿಯನ್​ ಇಂಗ್ಲೆಂಡ್​​ಗೆ ಈ ಗತಿ ಬರುತ್ತೆ ಅಂತಾ ಯಾರೂ ಊಹಿಸಿರಲಿಲ್ಲ ಬಿಡಿ. ಈಗ ಅಫ್ಘಾನಿಸ್ತಾನ ಟೀಂನ ತಾಕತ್ತು ಏನು ಅನ್ನೋದು ಇಡೀ ಜಗತ್ತಿಗೇ ಗೊತ್ತಾಗಿದೆ. ಮುಂದಿನ ದಿನಗಳಲ್ಲಿ ಯಾವುದೇ ತಂಡಗಳು ಕೂಡ ಅಫ್ಘಾನಿಸ್ತಾನವನ್ನ ವೀಕ್ ಟೀಮ್ ಎಂದು ಪರಿಗಣಿಸಲು ಸಾಧ್ಯವೇ ಇಲ್ಲ. ಜೊತೆಗೆ

ಇದನ್ನೂ ಓದಿ: ಅಫ್ಘಾನಿಸ್ತಾನ ವಿರುದ್ಧ ಸೋತು ಸುಣ್ಣವಾದ ಹಾಲಿ ಚಾಂಪಿಯನ್ ಇಂಗ್ಲೆಂಡ್ –ಆಂಗ್ಲರ ಅವಮಾನಕರ ಸೋಲಿಗೆ ಸಿಕ್ಕಾಪಟ್ಟೆ ಟ್ರೋಲ್

2011ರಲ್ಲಿ ಐರ್​ಲ್ಯಾಂಡ್​ ಮತ್ತು ಬಾಂಗ್ಲಾದೇಶದ ವಿರುದ್ಧ ಇಂಗ್ಲೆಂಡ್​ ಸೋತಿತ್ತು. 2015ರಲ್ಲಿ ಮತ್ತೊಮ್ಮೆ ಬಾಂಗ್ಲಾದೇಶದ ಎದುರು ಇಂಗ್ಲೆಂಡ್ ಸೋಲನುಭವಿಸಿತ್ತು. ಈಗ 2023ರಲ್ಲಿ ಅಫ್ಘಾನಿಸ್ತಾನದ ವಿರುದ್ಧ ಸೋತಿದ್ದಾರೆ. ಇಂಗ್ಲೆಂಡ್​ ವಿರುದ್ಧ ಅಫ್ಘಾನಿಸ್ತಾನದ ಗೆಲುವು ನಿಜಕ್ಕೂ ತುಂಬಾನೆ ಸ್ಪೆಷಲ್. ಇಲ್ಲಿ ಆರಂಭದಲ್ಲೇ ಇಂಗ್ಲೆಂಡ್​​ನ ಲೆಕ್ಕಾಚಾರಗಳೆಲ್ಲಾ ಬುಡಮೇಲಾಗಿದೆ. ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಸೆಕೆಂಡ್​ ಇನ್ನಿಂಗ್ಸ್​ ವೇಳೆ ದೆಹಲಿಯಲ್ಲಿ ಅರುಣ್​ ಜೇಟ್ಲಿ ಮೈದಾನದಲ್ಲಿ ಹನಿ ಬೀಳಬಹುದು ಎಂಬ ಲೆಕ್ಕಾಚಾರವಿತ್ತು. ಒಂದು ಹನಿ ಕೂಡ ಗ್ರೌಂಡ್​ನ ಹುಲ್ಲಿನ ಮೇಲೆ ಬೀಳಲಿಲ್ಲ. ಹೀಗಾಗಿ ಆಫ್ಘನ್ನರ ಬೌಲರ್ ನಿಜವಾಗಲೂ ಕಮಾಲ್ ಮಾಡಿದ್ದರು.

ದೆಹಲಿಯ ಪಿಚ್​ನಲ್ಲಿ 285 ರನ್​ ಏನೂ ಚೇಸ್​ ಮಾಡೋಕೆ ಸಾಧ್ಯವೇ ಆಗದಂತಹ ಟಾರ್ಗೆಟ್​ ಆಗಿರಲಿಲ್ಲ. ಬ್ಯಾಟ್ಸ್​ಮನ್​ಗಳಿಗೆ ಫೇವರ್ ಆಗಿರುವಂತಹ ಪಿಚ್ಚೇ ಆಗಿತ್ತು. ಆದರೆ, ಆಂಗ್ಲರು ಅಫ್ಘಾನಿಸ್ತಾನದ ಎದುರು ಸೋತು ಸುಣ್ಣವಾಗಿ ಹೋದರು. ಇಂಗ್ಲೆಂಡ್​ ವಿರುದ್ಧದ ಪಂದ್ಯದ ವೇಳೆ ಸ್ಟೇಡಿಯಂನಲ್ಲಿದ್ದ ಭಾರತೀಯರೆಲ್ಲಾ ಅಫ್ಘಾನಿಸ್ತಾನವನ್ನೇ ಬೆಂಬಲಿಸಿದರು. ಆಫ್ಘನ್​​ ಗೆಲುವನ್ನು ಇಡೀ ಭಾರತವೇ ಸಂಭ್ರಮಿಸಿದೆ.  ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಸುರೇಶ್ ರೈನಾ, ಇರ್ಫಾನ್ ಪಠಾಣ್, ವಿರೇಂದ್ರ ಸೆಹ್ವಾಗ್, ರವಿಶಾಸ್ತ್ರಿ ಸೇರಿದಂತೆ ಮಾಜಿ ಕ್ರಿಕೆಟಗರು ಅಫ್ಘಾನಿಸ್ತಾನ ತಂಡವನ್ನ ಅಭಿನಂದಿಸಿದ್ದಾರೆ.

ಇವೆಲ್ಲಕ್ಕಿಂತ ಹೆಚ್ಚಾಗಿ ಅಫ್ಘಾನಿಸ್ತಾನದಲ್ಲಿ ಭೀಕರ ಭೂಕಂಪಕ್ಕೆ ಸಾವಿರಾರು ಮಂದಿ ಬಲಿಯಾಗಿದ್ದು, ಭೂಕಂಪದಿಂದ ಕಣ್ಣೀರಿಡುತ್ತಿರುವ ಆಫ್ಘನ್ನರ ಮುಖದಲ್ಲಿ ಒಂದಷ್ಟು ನಗು ತರಿಸುವ ಕೆಲಸವನ್ನ ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಮಾಡಿದೆ. ಈ ಎಲ್ಲಾ ಕಾರಣಗಳಿಂದಾಗಿ ಅಫ್ಘಾನಿಸ್ತಾನದ ಈ ಗೆಲುವನ್ನ ಮರೆಯಲು ಸಾಧ್ಯವಿಲ್ಲ.

Sulekha