ಡ್ಯಾನ್ಸ್ ನಲ್ಲೇ ಗಿನ್ನೆಸ್ ದಾಖಲೆ ಬರೆದ 14 ಶ್ವಾನಗಳು! – ನೃತ್ಯ ಹೇಗಿದೆ ನೋಡಿ…

ಡ್ಯಾನ್ಸ್ ನಲ್ಲೇ ಗಿನ್ನೆಸ್ ದಾಖಲೆ ಬರೆದ 14 ಶ್ವಾನಗಳು! – ನೃತ್ಯ ಹೇಗಿದೆ ನೋಡಿ…

ಗಿನ್ನೆಸ್ ದಾಖಲೆ ಎಂದರೆ ಪ್ರಪಂಚದಲ್ಲಿ ಕೆಲವರು ಮಾತ್ರ ಮಾಡುವ ದಾಖಲೆ ಎಂಬ ಕಲ್ಪನೆಗಳು ಬರುತ್ತವೆ. ಕೆಲವರು ಉತ್ತಮ ಕೆಲಸ, ತಮ್ಮ ಟ್ಯಾಲೆಂಟ್ ಗಳ ಮೂಲಕ ದಾಖಲೆ ಮಾಡಿದರೆ, ಇನ್ನೂ ಕೆಲವರು ಏನೇನೋ ಚಿತ್ರ ವಿಚಿತ್ರವಾಗಿ ಗುರುತಿಸಿಕೊಂಡು ದಾಖಲೆ ಬರೆಯುತ್ತಾರೆ. ಈ ಹಿಂದೆ ಕೆಲ ಪ್ರಾಣಿ ಪ್ರಿಯರು ತಮ್ಮನ್ನು ತಾವು ಪ್ರಾಣಿ, ಪಕ್ಷಿಗಳಂತೆ ಪರಿವರ್ತಿಸಿಕೊಂಡು ಗಿನ್ನೆಸ್ ದಾಖಲೆ ಮಾಡಿರುವುದನ್ನು ನಾವು ಕೇಳಿದ್ದೇವೆ. ಈಗ ಜರ್ಮನ್ ನಲ್ಲಿ 14 ಶ್ವಾನಗಳು ಕೊಂಗ ನೃತ್ಯ ಮಾಡುವುದರ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಮಾಡಿವೆ.

ಇದನ್ನೂ ಓದಿ: ಝೂನಿಂದಲೇ ಉದ್ದಮೀಸೆಯ ಕೋತಿಗಳನ್ನ ಕದ್ದೊಯ್ದ ಕಳ್ಳರು – ಅಧಿಕಾರಿಗಳೇ ನೀಡಿದ್ರಾ ಸಾಥ್..!?

ಹೌದು ಜರ್ಮನ್ ಪ್ರಜೆ ವೋಲ್ಫ್‌ಗ್ಯಾಂಗ್ ಲಾಯೆನ್‌ಬರ್ಗರ್  ಎಂಬಾತ ತನ್ನ 14 ನಾಯಿಗಳಿಗೆ ಕೊಂಗ ನೃತ್ಯವನ್ನು ಕಲಿಸಿದ್ದಾರೆ. ಬಳಿಕ ಶ್ವಾನಗಳು ಮಾಲೀಕ ಹೇಳಿಕೊಟ್ಟ ರೀತಿಯಲ್ಲೇ ನೃತ್ಯ ಮಾಡಿ ಗಿನ್ನೆಸ್ ದಾಖಲೆ ಮಾಡಿವೆ.

ಕೊಂಗ ಎಂಬುದು ಲ್ಯಾಟಿನ್ ಅಮೆರಿಕನ್ ನೃತ್ಯವಾಗಿದೆ. ಕೊಂಗ ಲೈನ್ ಎಂದರೆ ಒಬ್ಬರ ಹಿಂದೆ ಒಬ್ಬರಂತೆ ಎರಡೇ ಕಾಲಿನಲ್ಲಿ ಸರಪಳಿ ರೀತಿಯಲ್ಲಿ ನಿಲ್ಲುವುದಾಗಿದೆ. ಈ ನೃತ್ಯವನ್ನು ಶ್ವಾನಗಳಾದ ಎಮ್ಮಾ, ಫಿಲೌ, ಫಿನ್, ಸೈಮನ್, ಸೂಸಿ, ಮಾಯಾ, ಉಲ್ಫ್, ಸ್ಪೆಕ್, ಬೀಬಿ, ಕೇಟೀ, ಜೆನ್ನಿಫರ್, ಎಲ್ವಿಸ್, ಚಾರ್ಲಿ ಮತ್ತು ಕ್ಯಾಥಿ ಸೇರಿದಂತೆ ಒಟ್ಟು 14 ಶ್ವಾನಗಳು ಮಾಡಿ ದಾಖಲೆ ಬರೆದಿವೆ.

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್​ನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮಾಲೀಕ ಒಂದೊಂದಾಗಿ ಹೆಸರು ಹೇಳುತ್ತಿದ್ದಂತೆ ಶ್ವಾನಗಳು ಎರಡೇ ಕಾಲಿನಲ್ಲಿ ನಿಲ್ಲಲು ಪ್ರಾರಂಭಿಸುತ್ತವೆ. ತನ್ನ ಯಜಮಾನ ಏನು ಹೇಳುತ್ತಾನೋ ಅದೇ ರೀತಿಯಲ್ಲಿಈ ಶ್ವಾನಗಳು ಅನುಸರಿಸುತ್ತಾ ಹೋಗುತ್ತಿವೆ. ಸದ್ಯ ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದ್ದು, ಭಾರಿ ವೈರಲ್ ಆಗುತ್ತಿದೆ.

2020ರಲ್ಲಿ ಅಲೆಕ್ಸಾ ಲೌನ್‌ಬರ್ಗರ್ ಎಂಬ 12 ವರ್ಷದ ಬಾಲಕಿ ತನ್ನ 8 ನಾಯಿಗಳಿಗೆ ಕೊಂಗ ಮಾಡಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದಳು. ಈಗ ಆಕೆಯ ತಂದೆ ಕೊಂಗದ ಮೂಲಕವೇ ಮಗಳ ದಾಖಲೆಯನ್ನು ಮುರಿದಿದ್ದಾರೆ.

suddiyaana