ನೀವೇನಾದ್ರೂ ಅತಿಯಾಗಿ ಯೋಚಿಸ್ತೀರಾ? – ಅತಿಯಾಗಿ ಯೋಚಿಸುವುದು ಅನಾರೋಗ್ಯಕ್ಕೆ ಆಹ್ವಾನ!
ಜೀವನದಲ್ಲಿ ಸಂತೋಷವಾಗಿರಲು ಸಣ್ಣ ವಿಚಾರಗಳಲ್ಲಿಯೂ ಸಂತಸ ಕಂಡುಕೊಳ್ಳುವುದು ಬಹಳ ಮುಖ್ಯ. ಯಾವುದರ ಬಗ್ಗೆಯೂ ಹೆಚ್ಚು ಚಿಂತಿಸಬಾರದು. ಏಕೆಂದರೆ ಇದರಿಂದ ಮನಃಶಾಂತಿ ಕದಡುವುದಲ್ಲದೇ ಮಾನಸಿಕವಾಗಿ ಮಾತ್ರವಲ್ಲದೇ ದೈಹಿಕವಾಗಿಯೂ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.
ಇದನ್ನೂ ಓದಿ: ಬೆಳಗ್ಗೆ ಎದ್ದಾಗ ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತದೆಯೇ? ಅದಕ್ಕೇನು ಕಾರಣ ಗೊತ್ತಾ?
ಅತಿಯಾಗಿ ಯೋಚಿಸುವುದು ಎಂದರೆ ಯಾವುದೇ ವಿಷಯದ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಯೋಚಿಸುವುದು. ಒಂದು ವಿಷ್ಯದ ಬಗ್ಗೆ ಹೆಚ್ಚು ಯೋಚಿಸುವ ಜನರು ಸಾಮಾನ್ಯ ವ್ಯಕ್ತಿಗಿಂತ ಹೆಚ್ಚು ಅಸಮಾಧಾನಗೊಳ್ಳುತ್ತಾರೆ. ಆದರೆ ಅತಿಯಾಗಿ ಯೋಚಿಸುವ ಪರಿಣಾಮವು ಮಾನಸಿಕ ಆರೋಗ್ಯಕ್ಕೆ ಸೀಮಿತವಾಗಿಲ್ಲ, ಇದು ದೈಹಿಕ ಸಮಸ್ಯೆಗಳಿಂದ ಬಳಲುವಂತೆ ಮಾಡಬಹುದು.
ಒಂದೇ ವಿಷಯವನ್ನು ಮತ್ತೆ ಮತ್ತೆ ಯೋಚಿಸುತ್ತಿದ್ದರೆ, ಮನಸ್ಸು ಪ್ರಕ್ಷುಬ್ಧವಾಗುತ್ತದೆ. ಇದು ಒತ್ತಡವನ್ನು ಆಹ್ವಾನಿಸುತ್ತದೆ, ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇದರಿಂದ ಪಾರ್ಶ್ವವಾಯು ಅಥವಾ ಹೃದಯಾಘಾತದಂತಹ ಹೃದಯ ಸಮಸ್ಯೆಗಳೂ ಕಾಡಬಹುದು. ಅಧಿಕ ಒತ್ತಡದಿಂದ ಧೂಮಪಾನ, ಮದ್ಯಪಾನವೂ ರೂಢಿಯಾಗಿ ಆರೋಗ್ಯಕ್ಕೆ ಹಾನಿ ಮಾಡಬಹುದು.
ಇನ್ನು ಅತಿಯಾಗಿ ಯೋಚಿಸಿದ್ರೆ ನಿದ್ರೆಯ ಕೊರತೆಯೂ ಎದುರಾಗಬಹುದು. ಅಲ್ಲದೆ ದೇಹದ ರೋಗನಿರೋಧಕ ಶಕ್ತಿಯ ಮೇಲೂ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇರುತ್ತೆ. ಹೀಗಾಗಿ ಜಾಸ್ತಿ ಯೋಚಿಸ್ಬೇಡಿ.. ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಮುಂದುವರಿಯಿರಿ.