ಆ್ಯಕ್ಷನ್ ಪ್ರಿನ್ಸ್ ಗೆ ಕಾನೂನು ಸಂಕಷ್ಟ! – ಧ್ರುವ ಸರ್ಜಾ ವಿರುದ್ಧ ದೂರು ದಾಖಲು!

ಸ್ಯಾಂಡಲ್ವುಡ್ನ ಆ್ಯಕ್ಷನ್ ಪ್ರಿನ್ಸ್ ನಟ ಧ್ರುವ ಸರ್ಜಾಗೆ ಕಾನೂನು ಸಂಕಷ್ಟ ಎದುರಾಗಿದೆ. ನಟನ ವಿರುದ್ಧ ನಗರ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಕೇಸ್ಗೆ ಬಿಗ್ ಟ್ವಿಸ್ಟ್! – ಕೇಸ್ ರದ್ದತಿಗೆ ಹೈಕೋರ್ಟ್ ಮೊರೆ ಹೋದ ಬುರುಡೆ ಗ್ಯಾಂಗ್!
ಸ್ಯಾಂಡಲ್ವುಡ್ ನಟ ಧ್ರುವ ಸರ್ಜಾಗೆ ಸಾಕಷ್ಟು ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಅವರ ನಿವಾಸದ ಬಳಿ ನಿತ್ಯಾ ನೂರಾರು ಅಭಿಮಾನಿಗಳು ಜಮಾಯಿಸುತ್ತಾರೆ. ಇದೀಗ ನಟನಿಗೆ ಇದುವೇ ಮುಳುವಾಗಿದೆ. ಇದೀಗ ಧ್ರುವ ಸರ್ಜಾ ನಿವಾಸದ ಬಳಿ ವಾಸವಾಗಿರುವ ಮನೋಜ್ ಅನ್ನೋರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಧ್ರುವ ಹಾಗೂ ಮನೋಜ್ ಮನೆ ಒಂದೇ ಕಡೆ ಇದೆ. ನಿತ್ಯ ನೂರಾರು ಅಭಿಮಾನಿಗಳು ನೆಚ್ಚಿನ ನಟನನ್ನ ನೋಡಲು ಬರುತ್ತಾರೆ. ಅಲ್ಲಿಗೆ ಬಂದ ಧ್ರುವ ಅಭಿಮಾನಿಗಳು ಮನೋಜ್ ಮನೆಯ ಎದುರಿಗೆ ವಾಹನಗಳನ್ನು ಪಾರ್ಕ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಅಲ್ಲೇ ಧೂಮಪಾನ ಮಾಡುತ್ತಾರೆ. ಜೊತೆಗೆ ಮನೆಯ ಗೋಡೆಯ ಮೇಲೆ ಉಗಿಯುತ್ತಿದ್ದಾರೆ. ಇದರಿಂದ ಸ್ಥಳೀಯ ನಿವಾಸಿಗಳಿಗೆ ಕಿರಿ-ಕಿರಿ ಉಂಟಾಗುತ್ತಿದೆ ಎಂದು ಮನೋಜ್ ಆರೋಪಿಸಿದ್ದಾರೆ.
ಧ್ರುವ ಸರ್ಜಾ ಹಾಗೂ ಅವರ ಫ್ಯಾನ್ಸ್ ವಿರುದ್ಧ ಮಾತ್ರ ದೂರು ನೀಡಿಲ್ಲ. ಬದಲಾಗಿ, ಧ್ರುವ ಸರ್ಜಾರ ಮ್ಯಾನೇಜರ್ ವಿರುದ್ಧವೂ ಪೊಲೀಸರಿಗೆ ಕಂಪ್ಲೆಂಟ್ ಮಾಡಿದ್ದಾರೆ. ಸದ್ಯ ಬನಶಂಕರಿ ಪೊಲೀಸರು ಎನ್ಸಿಆರ್ ದಾಖಲಿಸಿಕೊಂಡಿದ್ದಾರೆ.

ನೋಡಿರಿ

