ರಕ್ಷಿತಾ ಶೆಟ್ಟಿ S ಕೆಟಗೆರಿ ಎಂದ ಅಶ್ವಿನಿ ಗೌಡಗೆ ಕಾನೂನು ಸಂಕಷ್ಟ! – ನಟಿ ವಿರುದ್ದ ದಾಖಲಾಯ್ತು ಕೇಸ್!

ಬಿಗ್ ಬಾಸ್ ಮನೆಯ ಆಟ ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ತಿದೆ. ಕಳೆದ ವಾರ ದೊಡ್ಮನೆಯಲ್ಲಿ ಗೆಜ್ಜೆ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಈ ವಿಚಾರವಾಗಿ ಅಶ್ವಿನಿ ಗೌಡ ರಕ್ಷಿತಾ ಶೆಟ್ಟಿಗೆ ಅವಮಾನ ಮಾಡಿದ್ರು. ಕಳೆದ ವೀಕೆಂಡ್‌ನಲ್ಲಿ ಸುದೀಪ್ ಅಶ್ವಿನಿ ಹಾಗೂ ಜಾಹ್ನವಿಗೆ ಕ್ಲಾಸ್ ತೆಗೆದುಕೊಂಡಿದ್ರು. ಆದ್ರೀಗ ನಟಿ ಅಶ್ವಿನಿ ಗೌಡಗೆ ಕಾನೂನು ಸಂಕಷ್ಟ ಶುರುವಾಗಿದೆ. ಆಕೆ ವಿರುದ್ದ ದೂರು ದಾಖಲಾಗಿದೆ.
ಇದನ್ನೂ ಓದಿ: ಜೆಡಿಎಸ್ ನಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆಯಾಗುತ್ತಾ? – ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದೇನು?
ಅಶ್ವಿನಿ ಗೌಡ ಬಟ್ಟೆ ತೋರಿಸಿ, ನೀನು ಎಲ್ಲಿಂದ ಬಂದಿದ್ದೀಯಾ ಗೊತ್ತು ಅಂತಾ ಹೇಳಿ ಅವಮಾನ ಮಾಡಿದ್ರು. ಮರುದಿನ ಮನೆಯ ವರಾಂಡದಲ್ಲಿ ಜಾಹ್ನವಿ ಜೊತೆ ಅಶ್ವಿನಿ ಕುಳಿತು ರಾತ್ರಿ ನಡೆದ ಗಲಾಟೆಯ ವಿಚಾರದ ಬಗ್ಗೆ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ರಕ್ಷಿತಾ ಉದ್ದೇಶಿಸಿ ಅವಳು ʼಎಸ್ ಕೆಟಗೆರಿʼ ಎಂದು ಹೇಳಿದ್ದರು. ಈ ವಿಚಾರ ಸಾಕಷ್ಟು ಚರ್ಚೆಯಾಗಿತ್ತು. ಇದೀಗ ಬಿಗ್ ಬಾಸ್ ಮನೆಯಲ್ಲಿ S ಪದ ಬಳಕೆ ಮಾಡಿದಕ್ಕೆ ಅಶ್ವಿನಿಗೌಡ ಮತ್ತು ಆಯೋಜಕರ ವಿರುದ್ಧ ಹೈಕೋರ್ಟ್ ವಕೀಲ ಪ್ರಶಾಂತ್ ಮೆತಾಲ್ ಬಿಡದಿ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸಹ ಸ್ಪರ್ಧಿ ರಕ್ಷಿತಾ ಕುರಿತು ಈ ಮಾತನ್ನು ಆಡಿದ್ದಾರೆ. ಇದೊಂದು ವ್ಯಕ್ತಿತ್ವ ನಿಂದನೆ ಎಂದು ಆರೋಪಿಸಿ ಅಶ್ವಿನಿಗೌಡ, ಕಲರ್ಸ್ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್ , ಕ್ಲಸ್ಟರ್ ಹೆಡ್ ಸುಷ್ಮಾ ಮತ್ತು ಡೈರೆಕ್ಟರ್ ಪ್ರಕಾಶ್ ವಿರುದ್ಧ ದೂರು ನೀಡಿದ್ದಾರೆ. ಬಿಡದಿ ಪೊಲೀಸರು ದೂರು ಸ್ವೀಕರಿಸಿ ಎನ್‌ಸಿಆರ್ ದಾಖಲಿಸಿದ್ದಾರೆ.
ದೂರಿನಲ್ಲಿ ಏನಿದೆ?
ಬಿಗ್‌ಬಾಸ್ 12 ಕಾರ್ಯಕ್ರಮದಲ್ಲಿ ಕಂಟೆಸ್ಟೆಂಟ್ ರಕ್ಷಿತ ರವರಿಗೆ ‘She is S, ಆ Category ನ ಎಂದು ಸ್ಪರ್ಧಿಯಾದ ಅಶ್ವಿನಿ ಗೌಡ ಅವರು ಪದ ಬಳಕೆಯನ್ನು ಮಾಡಿರುತ್ತಾರೆ.
ಇದು ಜಾತಿ ನಿಂದನೆ ಮತ್ತು ವ್ಯಕ್ತಿತ್ವದ ನಿಂದನೆ ಮಾಡುವಂತಹ ವಿಷಯ. ಈ ಸಮಾಜದಲ್ಲಿ ಎಲ್ಲರೂ ಒಂದೇ ಯಾವ ಜಾತಿ ಅಥವಾ ಭೇದವನ್ನು ಹರಡುವಂತಿಲ್ಲ. ಅಶ್ವಿನಿ ಗೌಡ ಹೇಳಿದ ಮಾತನ್ನು ತೆಗೆಯದೇ ತಮ್ಮ ಟಿಆರ್‌ಪಿ ಹೆಚ್ಚಾಗಲು ಇದನ್ನು ಪ್ರಸಾರ ಮಾಡಿರುತ್ತಾರೆ. ಇದರಿಂದ ಸಮಾಜಕ್ಕೆ ಒಂದು ಕೆಟ್ಟ ಸಂದೇಶವನ್ನು ಕಳುಹಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ನೋಡಿರಿ

