ಯತ್ನಾಳ್ ಬಾಯಿಗೆ ಬೀಗ ಹಾಕುತ್ತಾ ಬಿಜೆಪಿ – ಫೈರ್ ಬ್ರ್ಯಾಂಡ್ ವಿರುದ್ಧ ಹೈಕಮಾಂಡ್‌ಗೆ ದೂರು..!

ಯತ್ನಾಳ್ ಬಾಯಿಗೆ ಬೀಗ ಹಾಕುತ್ತಾ ಬಿಜೆಪಿ – ಫೈರ್ ಬ್ರ್ಯಾಂಡ್ ವಿರುದ್ಧ ಹೈಕಮಾಂಡ್‌ಗೆ ದೂರು..!

ಮನೆ ಹೊರಗಿರುವ ಶತ್ರುಗಳ ವಿರುದ್ಧ ಹೇಗಾದ್ರೂ ಹೋರಾಟ ಮಾಡ್ಬೋದು. ಆದ್ರೆ ಮನೆ ಒಳಗೇ ಇದ್ದುಕೊಂಡು ಕೇಡು ಮಾಡ್ತಾರಲ್ಲ ಅಂಥವ್ರನ್ನ ನಾಶ ಮಾಡೋದು ಕಷ್ಟ. ಸದ್ಯ ರಾಜ್ಯ ಬಿಜೆಪಿ ಪರಿಸ್ಥಿತಿ ಹೀಗೆಯೇ ಆಗಿದೆ. ಹೋದಲ್ಲಿ ಬಂದಲ್ಲೆಲ್ಲಾ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮತ್ತು ಕುಟುಂಬಸ್ಥರ ವಿರುದ್ಧ ಬಾಂಬ್ ಸಿಡಿಸೋ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ನಾಯಕರ ಪಾಲಿಗೆ ಮಗ್ಗುಲ ಮುಳ್ಳಾಗಿದ್ದಾರೆ.

ಇದನ್ನೂ ಓದಿ: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ಗುಡುಗಿದ ಯತ್ನಾಳ್ – 40 ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರದ ಸ್ಫೋಟಕ ಹೇಳಿಕೆ

ಪಕ್ಷದೊಳಗಿನ ಹುಳುಕಿನ ಬಗ್ಗೆ ಬಹಿರಂಗವಾಗೇ ಹೇಳಿಕೆ ನೀಡುತ್ತಾ ಸ್ವಪಕ್ಷೀಯರಿಗೇ ಯತ್ನಾಳ್ ಸವಾಲ್ ಹಾಕ್ತಿದ್ದಾರೆ. ಅದ್ರಲ್ಲೂ ಬಿಎಸ್​ವೈ ವಿರುದ್ಧ ಯತ್ನಾಳ್ ಸಿಡಿಸಿದ್ದ 40 ಸಾವಿರ ಕೋಟಿಯ ಭಷ್ಟಾಚಾರದ ಬಾಂಬ್ ಆಡಳಿತ ಪಕ್ಷಕ್ಕೆ ಅಸ್ತ್ರವಾಗಿದೆ. ಇದನ್ನೇ ಮುಂದಿಟ್ಟುಕೊಂಡು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಯತ್ನಾಳ್​ರ ಈ ಆಟಾಟೋಪದಿಂದ ಬೇಸತ್ತಿರೋ ನಾಯಕರು ಗುರುವಾರ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ ನಡೆಸಿದ್ರು. ಸಭೆಯಲ್ಲಿ ಮಾಜಿ ಸಿಎಂಗಳಾದ ಬಿ.ಎಸ್ ಯಡಿಯೂರಪ್ಪ, ಡಿವಿ ಸದಾನಂದಗೌಡ, ಮಾಜಿ ಸಚಿವರಾದ ಶ್ರೀರಾಮುಲು, ಕೆಎಸ್ ಈಶ್ವರಪ್ಪ ಸೇರಿದಂತೆ ಹಲವರು ಭಾಗಿಯಾಗಿದ್ರು.    ಸಭೆಯಲ್ಲಿ ಯತ್ನಾಳ್ ವಿರುದ್ಧ ಹೈಕಮಾಂಡ್​ಗೆ ದೂರು ನೀಡಲು ನಿರ್ಧರಿಸಲಾಗಿದೆ.

ಯತ್ನಾಳ್ ವಿರುದ್ಧ ದೂರು! 

ಪಕ್ಷದ ಆಂತರಿಕ ಶಿಸ್ತನ್ನು ಪದೇ ಪದೇ ಉಲ್ಲಂಘನೆ ಮಾಡ್ತಿದ್ದಾರೆ ಹಾಗೇ ರಾಜ್ಯ ನಾಯಕತ್ವದ ವಿರುದ್ಧ ಪದೇ ಪದೇ ಹೇಳಿಕೆಗಳನ್ನ ನೀಡ್ತಿದ್ದಾರೆ. ಸ್ವಪಕ್ಷದವರ ವಿರುದ್ಧ ಹೇಳಿಕೆ ನೀಡ್ತಿರೋದ್ರಿಂದು ಇದು ಕಾಂಗ್ರೆಸ್‌ಗೆ ಅಸ್ತ್ರವಾಗುತ್ತಿದೆ. ಈ ಮೂಲಕ ಕಾಂಗ್ರೆಸ್ ಜೊತೆ ಹೊಂದಾಣಿಕೆ ರಾಜಕೀಯ ಮಾಡಿಕೊಂಡಂತಿದೆ. ಲೋಕಸಭೆ ಚುನಾವಣೆಗೆ ಯತ್ನಾಳ್ ಹೇಳಿಕೆಗಳಿಂದಲೇ ಡ್ಯಾಮೇಜ್  ಆಗುವ ಸಾದ್ಯತೆ ಇದೆ. ಈಗಾಗಲೇ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ  ಉಂಟಾಗಿದೆ. ಯತ್ನಾಲ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು  ವಿಪಕ್ಷ ನಾಯಕರಿಗೆ ಸಹಕರಿಸುತ್ತಿಲ್ಲ. ಕೇವಲ ಟೀಕೆಯಲ್ಲೇ ಮುಳುಗಿದ್ದಾರೆ. ಪಕ್ಷ ಸಂಘಟನೆ ಮಾಡೋದನ್ನ ಬಿಟ್ಟು ಆರೋಪದಲ್ಲೇ ನಿರತರಾಗಿದ್ದಾರೆ. ಹೀಗಾಗಿ ಯತ್ನಾಳ್ ವಿರುದ್ಧ ಶೀಘ್ರವೇ ಶಿಸ್ತುಕ್ರಮ ಅಗತ್ಯ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಯತ್ನಾಳ್​ರ ಈ ವರ್ತನೆ ವಿರುದ್ಧ ಸ್ವಪಕ್ಷದಲ್ಲೇ ಆಕ್ರೋಶ ವ್ಯಕ್ತವಾಗಿದೆ. ಮಂತ್ರಿ, ವಿಪಕ್ಷ ನಾಯಕ ಮಾಡಿಲ್ಲ ಎಂದು ಅರೆ ಹುಚ್ಚನಂತೆ ಮಾತನಾಡುತ್ತಿದ್ದಾರೆ ಎಂದು ಎಂಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ. ಇಂಥವ್ರನ್ನು ಇಟ್ಕೊಂಡು ಏನು ಮಾಡಬೇಕು? ಜೊತೆಯಲ್ಲಿದ್ದವರಿಗೆ ಚಾಕು ಹಾಕುವ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು. 40 ಸಾವಿರ ಕೋಟಿ ಹಗರಣ ಆರೋಪದ ದಾಖಲೆಗಳಿದ್ರೆ ತನ್ನಿ. ಇಲ್ಲವಾದ್ರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳಿ ಎಂದು ಸವಾಲು ಹಾಕಿದ್ದಾರೆ. ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿರೋ ಬಿಜೆಪಿ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಅನ್ನೋದೇ ಈಗಿರುವ ಪ್ರಶ್ನೆ.

 

Sulekha