ವಿರೋಧ ಪಕ್ಷದ ನಾಯಕನ ಆಯ್ಕೆಗೆ ಸದನದಲ್ಲಿ ಗಂಟಲು ಹರಿದುಕೊಳ್ಳುವ ಕಾಂಪಿಟೇಷನ್! – ಕಾಂಗ್ರೆಸ್‌ ವ್ಯಂಗ್ಯ

ವಿರೋಧ ಪಕ್ಷದ ನಾಯಕನ ಆಯ್ಕೆಗೆ ಸದನದಲ್ಲಿ ಗಂಟಲು ಹರಿದುಕೊಳ್ಳುವ ಕಾಂಪಿಟೇಷನ್! – ಕಾಂಗ್ರೆಸ್‌ ವ್ಯಂಗ್ಯ

ಬೆಂಗಳೂರು: ವಿಧಾನಸಭೆ ಅಧಿವೇಶನ ಆರಂಭವಾಗಿ 3 ದಿನ ಆದರೂ ವಿಪಕ್ಷ ನಾಯಕ ಆಯ್ಕೆಯಾಗಿಲ್ಲ. ವಿರೋಧ ಪಕ್ಷದ ನಾಯಕನಿಲ್ಲದೇ ವಿಧಾನಸಭೆ ಅಧಿವೇಶನ ನಡೆಯುತ್ತಿದೆ. ಈ ವಿಚಾರವಾಗಿ ಕಾಂಗ್ರೆಸ್ ನಾಯಕರು ಮಾತಿನಲ್ಲೇ ಬಿಜೆಪಿ ಬಗ್ಗೆ ವ್ಯಂಗ್ಯವಾಡುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಹೊಸ ಟೋಲ್‌ಗೇಟ್ ಎಫೆಕ್ಟ್ – ಜಾಸ್ತಿಯಾಯ್ತು ಬಸ್ ರೇಟ್..!

ಬುಧವಾರ ಸದನದಲ್ಲಿ ಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪದೇ ಪದೇ ಎದ್ದು ನಿಂತು ಮಾತನಾಡಿದ್ದಾರೆ. ಬಳಿಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸಲು ಎದ್ದುನಿಂತಾಗ ಯತ್ನಾಳ್ ಏನನ್ನೋ ಹೇಳಬಯಸುತ್ತಾರೆ. ಅವರು ಉತ್ತರಿಸುವಾಗ ನೀವ್ಯಾಕೆ ಮಾತಾಡೋದು ಅಂತ ಸ್ಪೀಕರ್ ಕೇಳುತ್ತಾರೆ. ಆಗ ಸಿದ್ದರಾಮಯ್ಯ, ‘ಯತ್ನಾಳ್ ಅವರೇ ಯಾಕಿಷ್ಟು ಆತುರ ನಿಮಗೆ? ನಿಮ್ಮನ್ನು ಲೀಡರ್ ಆಫ್ ದಿ ಅಪೋಸಿಷನ್ ಮಾಡ್ತಾರೋ ಇಲ್ವೋ ಗೊತ್ತಿಲ್ಲ ನಂಗೆ. ನೀವು ಹೀಗೆ ಮಧ್ಯೆ ಮಧ್ಯೆ ಮಾತಾಡಿದರೆ ಬಿಜೆಪಿ ನಾಯಕರು ನಿಮ್ಮನ್ನು ಆಯ್ಕೆ ಮಾಡುತ್ತಾರೆ ಅಂದಿಕೊಂಡಿದ್ದೀರಾ? ಎಂದು ಸಿಎಂ ಸಿದ್ದು ಟಾಂಗ್‌ ನೀಡಿದ್ದಾರೆ.

ಸದನ ಆರಂಭವಾಗಿ 3 ದಿನ ಆದರೂ ವಿಪಕ್ಷ ನಾಯಕ ಆಯ್ಕೆಯಾಗಿಲ್ಲ. ಇಲ್ಲಿ ಬಂದು ಬುರುಡೆ ಹೊಡೆಯುತ್ತಿದ್ದೀರಿ. ಅಶೋಕ್ ಮಾತಾಡುವುದು ನೋಡಿದರೆ ಮಹಿಳೆಯರಿಗೆ ಫ್ರೀ ಕೊಟ್ಟಿರುವುದನ್ನೇ ವಿರೋಧಿಸುತ್ತಿರುವಂತೆ ಕಾಣುತ್ತಿದೆ ಎಂದು ಶಾಸಕ ಅಶೋಕ್​ಗೆ ಸಿಎಂ ಸಿದ್ದರಾಮಯ್ಯ ಅವರು ಕಿಚಾಯಿಸಿದ್ದಾರೆ.

ಇನ್ನು ಈ ವಿಚಾರವಾಗಿ ಕಾಂಗ್ರೆಸ್‌ ಟ್ವೀಟ್‌ ಮುಖಾಂತರವೂ ಕಾಲೆಳೆದಿದೆ. ಅಧಿವೇಶನಕ್ಕೂ ಮೊದಲೇ ವಿರೋಧ ಪಕ್ಷದ ನಾಯಕನನ್ನು ಘೋಷಿಸುತ್ತೇವೆ ಎಂದು ಬಿಜೆಪಿ ಹೇಳಿತ್ತು. ಅಧಿವೇಶನ ಮೂರನೇ ದಿನಕ್ಕೆ ಕಾಲಿಟ್ಟರೂ ವಿಪಕ್ಷ ನಾಯಕನ ಸುಳಿವೇ ಇಲ್ಲ! ಹೈಕಮಾಂಡ್ ನಾಯಕರು ಇಲ್ಲಿನ ನಾಯಕರಿಗೆ ಸದನದಲ್ಲಿ ಗಂಟಲು ಹರಿದುಕೊಳ್ಳುವ ಕಾಂಪಿಟೇಷನ್ ಇಟ್ಟಿರಬಹುದೇನೋ! ಆ ಮೂಲಕವಾದರೂ ಬಿಜೆಪಿಗೆ ಒಬ್ಬ ವಿಪಕ್ಷ ನಾಯಕ ಸಿಗಲಿ ಎನ್ನುವುದು ನಮ್ಮ ಹಾರೈಕೆ! ಎಂದು ವ್ಯಂಗ್ಯವಾಡಿದೆ.

suddiyaana