ಚಂದ್ರಯಾನಗಿಂತ, ಸೂರ್ಯಯಾನ ಕಂಪ್ಲೀಟ್ ಭಿನ್ನ! -ಲಾಗ್ರೇಂಜ್ ಪಾಯಿಂಟ್ ತಲುಪಲು ನೌಕೆ ಎಷ್ಟು ದಿನ ತೆಗೆದುಕೊಳ್ಳುತ್ತೆ?
ಆದಿತ್ಯ -L1, ದೇಶದ ಮೊದಲ ಸೋಲಾರ್ ಮಿಷನ್, ಶ್ರೀ ಹರಿಕೋಟಾದ ಸತೀಶ್ ಧವನ್ ಉಡಾವಣ ಕೇಂದ್ರದಿಂದ PSLV -C57 ರಾಕೆಟ್ ಮೂಲಕ ಉಡಾವಣೆಗೊಂಡು ಭೂಮಿಯ ಕೆಳಕಕ್ಷೆಗೆ ಯಶಸ್ವಿಯಾಗಿ ಸೇರಿದೆ. PSLV ರಾಕೆಟ್ ನ 57 ನೇ ಉಡಾವಣೆ ಇದಾಗಿದ್ದು ಒಟ್ಟು ಏಳು ಪೇಲೋಡ್ ಗಳನ್ನ ಹೊತ್ತ ಆದಿತ್ಯ L1 ಸ್ಪೇಸ್ ಕ್ರಾಫ್ಟ್, ಸೂರ್ಯನ ಹೊರಮೈ ಕರೊನಾ ವಲಯವನ್ನು ಅಧ್ಯಯನ ಮಾಡೋದು, ಅಲ್ಲಿನ ತಾಪಮಾನ, ಸೌರ ಜ್ವಾಲೆ, ಸೌರ ಮಾರುತಗಳ ಹೊರಹೊಮ್ಮುವಿಕೆ, ಬಾಹ್ಯಾಕಾಶ ಹವಾಮಾನದ ಬದಲಾವಣೆಗಳ ಕುರಿತಾಗಿ ಅಧ್ಯಯನ ನಡೆಸಲಿದೆ.
ಶನಿವಾರ ಉಡಾವಣೆಯಾಗಿರುವ ಆದಿತ್ಯ-L1 ನೌಕೆ, ಸುಮಾರು ಮೂರು ಮುಕ್ಕಾಲು ತಿಂಗಳ ಜರ್ನಿಯ ನಂತರ ಸೂರ್ಯ ಮತ್ತೂ ಭೂಮಿ ನಡುವಿನ ಲಾಗ್ರೇಂಜ್ ಪಾಯಿಂಟ್ L1 ಗೆ ಸೇರಲಿದೆ. 15 ಲಕ್ಷ ಕಿಲೋಮೀಟರ್ ದೂರದಲ್ಲಿರುವ ಲಾಗ್ರೇಂಜ್ ಪಾಯಿಂಟ್ ತಲುಪಲು ಆಲ್‌ಮೋಸ್ಟ್ 4 ತಿಂಗಳ ತೆಗೆದುಕೊಳ್ಳುವ ಈ ಸುದೀರ್ಘ ಜರ್ನಿ ಗೆ ಇರೋ ಸವಾಲು ಏನೂ.. ಆದಿತ್ಯ ನೌಕೆಯನ್ನ ಯಾಕೆ L1 ಪಾಯಿಂಟ್ ಗೆ ನಿಯೋಜಿಸಲಾಗುತ್ತೆ ಎಂಬ ಮಾಹಿತಿ ಈ ಸ್ಟೋರಿಯಲ್ಲಿದೆ.
ಇದನ್ನೂ ಓದಿ: ಭೂಮಿಯ ವಿಕಸನಕ್ಕೆ ಸೂರ್ಯನೇ ಶಕ್ತಿ – ಬೆಂಕಿಯ ಉಂಡೆಯಂತಿದ್ದ ಭೂಮಿ ಅಸ್ತಿತ್ವ ಶುರುವಾಗಿದ್ದು ಎಲ್ಲಿಂದ?
ಆದಿತ್ಯ L1 ನೌಕೆ ಲಾಗ್ರೇಂಜ್ ಪಾಯಿಂಟ್ ತಲುಪಲು ಸರಿಯಾಗಿ 109 ದಿನಗಳನ್ನ ತೆಗೆದುಕೊಳ್ಳಲಿದೆ. ಈ ಯೋಜನೆಯ ಮೂಲಕ ಸುಮಾರು 5 ವರುಷಗಳವರೆಗೆ ಸೂರ್ಯನನ್ನ ಹತ್ತಿರದಿಂದ ಅನ್ವೇಷಿಸಲಿದೆ ಮತ್ತೂ ನಿರಂತರವಾಗಿ ಗಮನಿಸಲಿದೆ. ದೇಶದ ಪ್ರಥಮ ಸೌರ ಯೋಜನೆಯಾದ ಆದಿತ್ಯ-L1, ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರಕ್ಕೆ ತಲುಪಿ ಸೂರ್ಯನನ್ನ ನಿರಂತರವಾಗಿ ಅನ್ವೇಷಿಸುವ ಮೂಲಕ ಬಾಹ್ಯಾಕಾಶ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಲಿದೆ.
ಸೂರ್ಯಯಾನ ಯೋಜನೆ ಚಂದ್ರಯಾನ ಗಿಂತ ಕಂಪ್ಲೀಟ್ ಭಿನ್ನ!
ಸೂರ್ಯಯಾನ ಯೋಜನೆಯು, ಚಂದ್ರಯಾನ ಗಿಂತ ಕಂಪ್ಲೀಟ್ ಭಿನ್ನವಾಗಿದೆ. ನಿಮಗೆ ನೆನಪಿರಬಹುದು, ಚಂದ್ರಯಾನ-3 ಯಲ್ಲಿ ಮಾರ್ಕ್ -3 ರಾಕೆಟ್ ಬಳಸಲಾಗಿತ್ತು. ಆದರೆ ಇಲ್ಲಿ PSLV ರಾಕೆಟ್ ಬಳಸಲಾಗುತ್ತೆ. ಉಡಾವಣೆ ಗೊಳ್ಳುವ ರಾಕೆಟ್ ನಿಂದ ಹಿಡಿದು ನೌಕೆಯು ಹೋಗುವ ಪಥ ಅಂದರೆ trajectory ಕೂಡಾ ಇಲ್ಲಿ ಪೂರ್ತಿಯಾಗಿ ಭಿನ್ನವಾಗಿರುತ್ತೆ. ಚಂದ್ರಯಾನದಲ್ಲಿ ದಕ್ಷಿಣ ದ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡೋದೇ ಒಂದು crucial phase ಆಗಿತ್ತು ಆದರೆ ಇಲ್ಲಿ ನೌಕೆಯನ್ನ ಆ ಪರ್ಟಿಕ್ಯುಲರ್ L1 ಪಾಯಿಂಟ್ ನ ಸುತ್ತಾ ಹ್ಯಾಲೋ ಕಕ್ಷೆಗೆ ಸೇರಿಸೋದೆ ಈ ಯೋಜನೆಯ crucial phase ಆಗಿರುತ್ತೆ. ಒಮ್ಮೆ L1 ಪಾಯಿಂಟ್ ನ ಹ್ಯಾಲೋ ಕಕ್ಷೆಗೆ ಸೇರಿದ ನಂತರ ನೌಕೆಯು 24*7 ನಿರಂತರವಾಗಿ ಯಾವುದೇ ಅಡೆತಡೆ ಯಿಲ್ಲದೆ ಸೂರ್ಯನನ್ನು ಗಮನಿಸಲಿದೆ.
ಶನಿವಾರ ಉಡಾವಣೆಯಾದ ಆದಿತ್ಯ -L1 ನೌಕೆಯನ್ನ ಹೊತ್ತ PSLC-C57 ರಾಕೆಟ್ ಯಶಸ್ವೀ ಯಾಗಿ ಭೂಮಿಯ ಕೆಳ ಕಕ್ಷೆಗೆ ಸೇರಿದೆ. ಮುಂದಿನ ಕೆಲವು ದಿನಗಳ ವರೆಗೆ Proplusion ಎಂಜಿನ್ ಮೂಲಕ ಹಲವು ಬಾರಿ ನೌಕೆಯು ಭೂಮಿಯ ಸುತ್ತಲು ಕಕ್ಷೆಗಳನ್ನು ಬದಲಿಸುತ್ತಾ ಸುತ್ತಲಿದೆ. ಇದಾದ ನಂತರ ಕೊನೆಯ ದೀರ್ಘ ವೃತ್ತದ ಕಕ್ಷೆಗೆ ತಲುಪುತ್ತಿದ್ದಂತೆ ಬಾಹ್ಯಾಕಾಶ ನೌಕೆಯನ್ನು ಆನ್‌ಬೋರ್ಡ್ ಪ್ರೊಪಲ್ಷನ್ ಬಳಸಿ L1 ಪಾಯಿಂಟ್ ಪಥಕ್ಕೆ ತಳ್ಳಲಾಗುತ್ತದೆ. ಈ ಹಂತದಲ್ಲಿ ನೌಕೆ ಯು ಭೂಮಿಯ ಗುರುತ್ವಾಕರ್ಷಣೆಯ ಪ್ರಭಾವದಿಂದ ಪೂರ್ತಿಯಾಗಿ ಹೊರ ಬಂದು ಲ್ಯಾಗ್ರೇಂಜ್ ಪಾಯಿಂಟ್ ಪಥದಲ್ಲಿ ಚಲಿಸೋದಿಕ್ಕೆ ಪ್ರಾರಂಭಿಸುತ್ತದೆ. ಇದನ್ನ cruise phase ಅಂತಾ ಕರಿತಾರೆ. ಲಾಗ್ರೇಂಜ್ ಪಾಯಿಂಟ್ ಪಥದಲ್ಲಿ ಸಾಗುತ್ತಿರುವ ನೌಕೆಯು ಸುಮಾರು 4 ತಿಂಗಳ ನಂತರ L1 ಪಾಯಿಂಟ್ ನ ಸುತ್ತಾ ವಿರುವ ಹ್ಯಾಲೋ ಕಕ್ಷಗೆ ಸೇರಲಿದೆ.
ಏನಿದು ಲ್ಯಾಗ್ರೇಂಜ್ ಪಾಯಿಂಟ್?
ಇದುವರೆಗೆ ಲಾಂಗ್ರೇಂಜ್ ಪಾಯಿಂಟ್ ಲ್ಯಾಗ್ರೇಂಜ್ ಪಾಯಿಂಟ್ ಅಂತ ಹೇಳೋದನ್ನು ಕೇಳಿರುತ್ತಿರಾ.. ಈ ಲ್ಯಾಗ್ರೇಂಜ್ ಪಾಯಿಂಟ್ ಅನ್ನೋ ಹೆಸರು ಬರೋದಿಕ್ಕೆ ಕಾರಣ ಹದಿನೆಂಟನೇ ಶತಮಾನದ, ಇಟಾಲಿಯನ್ ಮೂಲದ ಗಣಿತಶಾಸ್ತ್ರಜ್ಞ ಮತ್ತು ಖಗೋಳಶಾಸ್ತ್ರಜ್ಞ ಜೋಸೆಫ್-ಲೂಯಿಸ್ ಲ್ಯಾಗ್ರೇಂಜ. ಆತ ಆಕಾಶದಲ್ಲಿರುವ ಎರಡು ಕಾಯಗಳ ನಡುವಿನ ಬಿಂದುಗಳನ್ನು ಗುರುತಿಸಿದ್ದ. ಹಾಗಾಗಿ ಆತನ ಹೆಸರನ್ನೇ ಈ ಪಾಯಿಂಟ್ ಗಳಿಗೆ ಇಡಲಾಗಿತ್ತು. ಇದೂ ಎರಡು ಆಕಾಶ ಕಾಯಗಳ ನಡುವಿನ ಪಾಯಿಂಟ್ ಆಗಿರುತ್ತೆ. ಒಂದು ಕಾಯವು ಇನ್ನೊಂದು ಕಾಯದ ಸುತ್ತಾ ಸುತ್ತುತ್ತಿರುತ್ತೆ. ಎರಡು ಕಾಯಗಳು ಅಂದರೆ ಇಲ್ಲಿ ಭೂಮಿ ಮತ್ತೂ ಸೂರ್ಯ ಆಗಿರಬಹುದು, ಅಥವಾ ಭೂಮಿ ಮತ್ತೂ ಚಂದ್ರನೂ ಆಗಿರಬಹುದು. ಈ ಲಾಗ್ರೇಂಜ್ ಬಿಂದು ವಿನಲ್ಲಿ ಭೂಮಿ ಮತ್ತೂ ಸೂರ್ಯನ ಗುರುತ್ವಾಕರ್ಷಣ ಶಕ್ತಿ ಸಮ ಬಲದಲ್ಲಿ ಇರುತ್ತೆ. ಎರಡು ಕಾಯಗಳ ಗುರುತ್ವಾರ್ಷಣ ಶಕ್ತಿಯ ಎಳೆತವು ಸಮವಾಗಿರುತ್ತೆ. ಅಂದ್ರೆ ಬ್ಯಾಲೆನ್ಸ್ಡ್ ಆಗಿರುತ್ತೆ. ಹಾಗಾಗಿ ಆ ಪ್ರದೇಶವು ಸ್ಥಿರವಾಗಿರುತ್ತೆ. ಅದ್ರಿಂದ ಬಾಹ್ಯಾಕಾಶ ನೌಕೆಯನ್ನು ಆ ಸ್ಥಿರವಾದ ಬಿಂದುವಿನಲ್ಲಿ ಇರಿಸಿಕೊಳ್ಳಲು ಹೆಚ್ಚಿನ ಶಕ್ತಿ ಮತ್ತೂ ಇಂಧನ ಬೇಕಾಗುವುದಿಲ್ಲ.
ಸೂರ್ಯ ಮತ್ತೂ ಭೂಮಿ ನಡುವೆ ಒಟ್ಟು ಐದು ಲಾಗ್ರೇಂಜ್ ಪಾಯಿಂಟ್ ಗಳು ಇದ್ದಾವೆ, L1 to L5. ಹಾಗಂತ ಈ ಎಲ್ಲಾ ಲಾಗ್ರೇಂಜ್ ಪಾಯಿಂಟ್ ಗಳು ಒಂದೇ ರೀತಿಯಲ್ಲಿ ಇರೋದಿಲ್ಲ. ಪ್ರತಿ ಲ್ಯಾಗ್ರೇಂಜ್ ಪಾಯಿಂಟ್ ಗೂ ಅದರದ್ದೇ ಆದ ವಿಶೇಷತೆ ಇದೆ. L1, ಇದೂ ಭೂಮಿ ಮತ್ತೂ ಸೂರ್ಯನ ನಡುವೆ ಇರುತ್ತೆ. L2 ಭೂಮಿಯ ಮತ್ತೊಂದು ಬದಿಯಲ್ಲಿ L3 ಸೂರ್ಯನ ಇನ್ನೊಂದು ಬದಿಯಲ್ಲಿ, ಹಾಗೇ L4 ಅಂಡ್ L5 ಭೂಮಿಯ ಕಕ್ಷೆಯಲ್ಲಿ ಇರುವಂತದ್ದಾಗಿದೆ.