ಗಾಯದ ಮೇಲೆ ಬರೆ ಎಳೆದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ – ಮೈ-ಬೆಂ ದಶಪಥದಲ್ಲಿ ಟೋಲ್ ದರ ಹೆಚ್ಚಳ!
ಯಾವ್ಯಾವ ವಾಹನಗಳಿಗೆ ಎಷ್ಟೆಷ್ಟು ಶುಲ್ಕ ಹೆಚ್ಚಳ..?
ಮೈಸೂರು ಬೆಂಗಳೂರು ದಶಪಥ ಹೆದ್ದಾರಿ ಜನಮೆಚ್ಚುಗೆಗಿಂತ ಜನಾಕ್ರೋಶದಿಂದಲೇ ಹೆಚ್ಚು ಸುದ್ದಿ ಮಾಡ್ತಿದೆ. ಸಂಚಾರ ಸುಗಮವಾಗುತ್ತೆ, ಸಮಯ ಉಳಿತಾಯ ಆಗುತ್ತೆ ಅಂತಾ ಖುಷಿ ಪಟ್ಟಿದ್ದ ಸವಾರರು ಈಗ ಹಿಡಿಶಾಪ ಹಾಕಿಕೊಂಡು ಓಡಾಡುತ್ತಿದ್ದಾರೆ. ಕಾಮಗಾರಿ ಮುಗಿಯದೇ ಸಂಚಾರಕ್ಕೆ ಮುಕ್ತವಾಗಿದ್ದ ಈ ರಸ್ತೆಯಲ್ಲಿ ಮಾರ್ಚ್ 14ರಿಂದ ಟೋಲ್ ಸಂಗ್ರಹ ಶುರುಮಾಡಲಾಗಿತ್ತು. ಟೋಲ್ ಸಂಗ್ರಹ ಶುರುವಾದಾಗಲೇ ದುಬಾರಿಯಾಯ್ತು ಅಂತಾ ಸವಾರರು ಸಿಡಿದೆದ್ದಿದ್ದರು. ಆದರೆ ಈಗ ಗಾಯದ ಮೇಲೆ ಬರೆ ಎಂಬಂತೆ ಟೋಲ್ ಸಂಗ್ರಹ ಆರಂಭವಾದ 17 ದಿನಕ್ಕೆ ಮತ್ತೆ ದರ ಹೆಚ್ಚಳ ಮಾಡಲಾಗಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶೇಕಡಾ 22ರಷ್ಟು ಟೋಲ್ ದರ ಹೆಚ್ಚಿಸಿದ್ದು, ಏಪ್ರಿಲ್ 1ರಿಂದಲೇ ಹೊಸ ದರ ಜಾರಿಗೆ ಬರಲಿದೆ. ಆರಂಭವಾದಾಗ ದರ ಎಷ್ಟಿತ್ತು, ಎಷ್ಟು ಹೆಚ್ಚಳ ಮಾಡಲಾಗಿದೆ, ಇನ್ಮುಂದೆ ಯಾವ್ಯಾವ ವಾಹನ ಸವಾರರು ಎಷ್ಟು ಟೋಲ್ ಪಾವತಿಸಬೇಕು ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.
ಪರಿಷ್ಕತ ದರಗಳ ಪಟ್ಟಿ
ಇದನ್ನೂ ಓದಿ : ಅವಾಂತರಗಳ ಗೂಡಾದ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ – ರಸ್ತೆಯಲ್ಲಿ ಓಡಾಡದಿದ್ರೂ ಟೋಲ್ ಶುಲ್ಕ ಕಡಿತ
ವಾಹನಗಳು ಸಂಚಾರ ಹಿಂದಿನ ಶುಲ್ಕ ಎಷ್ಟು ಹೆಚ್ಚಳ ಪರಿಷ್ಕೃತ ದರ
– ಕಾರು/ವ್ಯಾನ್/ಜೀಪ್ ಏಕಮುಖ ₹135 ₹30 ₹165
ದ್ವಿಮುಖ ₹205 ₹45 ₹250
– ಲಘು ವಾಹನಗಳು/ಮಿನಿಬಸ್ ಏಕಮುಖ ₹220 ₹50 ₹270
ದ್ವಿಮುಖ ₹330 ₹75 ₹405
– ಟ್ರಕ್/ ಬಸ್/ ಏಕಮುಖ ₹460 ₹105 ₹565
2 ಆಕ್ಸೆಲ್ ವಾಹನಗಳು ದ್ವಿಮುಖ ₹690 ₹160 ₹850
– 3-6 ಆಕ್ಸೆಲ್ ಗಳಿರುವ ಏಕಮುಖ ₹500 ₹115 ₹615
ವಾಹನಗಳು ದ್ವಿಮುಖ ₹750 ₹225 ₹925
– ಕಟ್ಟಡ ನಿರ್ಮಾಣ ಏಕಮುಖ ₹720 ₹165 ₹885
ಅರ್ಥ್ ಮೂವರ್ಸ್ ದ್ವಿಮುಖ ₹1,080 ₹250 ₹1330
4ರಿಂದ 6 ಆಕ್ಸೆಲ್ ವಾಹನಗಳು
– ಏಳು ಅಥವಾ ಅದಕ್ಕಿಂತ ಏಕಮುಖ ₹880 ₹200 ₹1,080
ಹೆಚ್ಚಿನ ಆಕ್ಸೆಲ್ ವಾಹನಗಳು ದ್ವಿಮುಖ ₹1315 ₹305 ₹1620
ಮಾರ್ಚ್ 13ರಂದು ಪ್ರಧಾನಿ ಮೋದಿ ಉದ್ಘಾಟಿಸಿದ್ದ ದಶಪಥ ಹೆದ್ದಾರಿ ಸದ್ದು ವಿವಾದಗಳಿಂದಲೇ ಸದ್ದು ಮಾಡ್ತಿದೆ. ಇದೀಗ ಮತ್ತೆ ಟೋಲ್ ದರ ಹೆಚ್ಚಳ ಮಾಡಿರೋದು ಸವಾರರ ಕೆಂಗಣ್ಣಿಗೆ ಗುರಿಯಾಗಿದೆ.