ಕಾಮನ್ ಮ್ಯಾನ್ ಆಟಕ್ಕೆ ವೀಕ್ಷಕರಿಗೆ ಕಿರಿಕಿರಿ – ಕುತೂಹಲ ಹೆಚ್ಚಿಸಿದ ಕಿಚ್ಚನ ಪಂಚಾಯಿತಿ

ಕಾಮನ್ ಮ್ಯಾನ್ ಆಟಕ್ಕೆ ವೀಕ್ಷಕರಿಗೆ ಕಿರಿಕಿರಿ – ಕುತೂಹಲ ಹೆಚ್ಚಿಸಿದ ಕಿಚ್ಚನ ಪಂಚಾಯಿತಿ

ಬಿಗ್ ಬಾಸ್ ಮನೆಯಲ್ಲಿ ಕಾಮನ್ ಮ್ಯಾನ್ ಸ್ಪರ್ಧಿಗಳ ಆಟ ತೀರಾ ಕಿರಿಕಿರಿಯುಂಟು ಮಾಡುತ್ತಿದೆ ಅನ್ನೋ ಆರೋಪವನ್ನು ಕೆಲ ವೀಕ್ಷಕರು ಮಾಡಿದ್ದಾರೆ. ಬೇರೆಯವರ ಆಹಾರ ಕದ್ದು ತಿನ್ನುವುದು, ವಿಪರೀತ ಮಾತು, ಜಗಳ, ಕೆಲ ಸ್ಪರ್ಧಿಗಳ ವರ್ತನೆಗೆ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಮತ್ತೆ ಅರ್ಧಕ್ಕೆ ಆಟ ನಿಲ್ಲಿಸಿದ ಓಂ ಪ್ರಕಾಶ್ ರಾವ್ – ಬಿಗ್ ಬಾಸ್ ಮನೆಯಿಂದ ಹೊರ ಬಂದ ಡೈರೆಕ್ಟರ್

ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಕಾಮನ್​ ಮ್ಯಾನ್​ಗಳ ಎಂಟ್ರಿ ಆಗಿದೆ. ನಾಲಗೆಗೆ ಲಗಾಮಿಲ್ಲ.  ಬೇರೆಯವರ ಆಹಾರ ಕದ್ದು ತಿನ್ನುವುದು, ಮಾತಿನ ಭರದಲ್ಲಿ ಪದಗಳಿಗಂತೂ ಕಡಿವಾಣವೇ ಇಲ್ಲ. ಇದೆಲ್ಲಾ ವೀಕ್ಷಕರ ಬೇಸರಕ್ಕೆ ಕಾರಣವಾಗಿದೆ. ಕಿರಣ್ ಶಾಸ್ತ್ರಿ, ಧನುಷ್, ಲಿಖಿತ್ ಹಾಗೂ ಮಹಾಕವಿ ಮಂಜು ಅವರು ಕಾಮನ್ ಮ್ಯಾನ್ ಕೆಟಗರಿಯಲ್ಲಿ ಬಿಗ್ ಬಾಸ್ ಮನೆ ಸೇರಿದವರು. ಇವರ ಪೈಕಿ ಧನುಷ್ ಸ್ವಲ್ಪ ಚೆನ್ನಾಗಿಯೇ ಆಟವಾಡುತ್ತಿದ್ದಾರೆ. ಆದರೆ, ಕಿರಣ್ ಶಾಸ್ತ್ರಿ, ಮಂಜು ಅವರ ವರ್ತನೆ ಮತ್ತು ಮಾತಿನ ಭರಾಟೆ ಕುಟುಂಬ ಸಮೇತ, ಅದರಲ್ಲೂ ಮಕ್ಕಳು ಟಿವಿ ನೋಡುವಾಗ ತೀರ ಕಿರಿಕಿರಿಯುಂಟು ಮಾಡುತ್ತಿದೆ.

ಬಿಗ್‌ಬಾಸ್ ಮನೆಯಲ್ಲಿ ಬೇರೆಯವರಿಗೋಸ್ಕರ ಇಟ್ಟ ಮೊಟ್ಟೆ ಹಾಲನ್ನು ಲಿಖಿತ್, ಮಂಜು ಕದ್ದಿದ್ದೂ ಅಲ್ಲದೆ, ತಮ್ಮ ತಪ್ಪೇ ಇಲ್ಲ ಎಂಬ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಅವಿನಾಶ್ ಹಾಗೂ ಇತರ ಸ್ಪರ್ಧಿಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇವರ ವರ್ತನೆಗೆ ವೀಕ್ಷಕರು ಬೇಸರ ಹೊರಹಾಕಿದ್ದು, ಈವರೆಗೆ ಬಿಗ್ ಬಾಸ್ ಮನೆ ಸೇರಿದ ಅತ್ಯಂತ ಕೆಟ್ಟ ಸ್ಪರ್ಧಿಗಳು ಇವರು ಎಂದು ಕಾಮೆಂಟ್ ಹಾಕಿದ್ದಾರೆ. ರಿಯಾಲಿಟಿ ಸ್ಪರ್ಧೆ ಅಂದ ಮೇಲೆ ಕಾಮನ್ ಮ್ಯಾನ್, ಸೆಲೆಬ್ರಿಟಿಗಳು ಎಂಬ ತಾರತಮ್ಯ ಇರುವುದಿಲ್ಲ. ಇಲ್ಲಿ ಎಲ್ಲರೂ ಸ್ಪರ್ಧಿಗಳೇ. ಆದರೆ, ಬೇರೆ ಸ್ಪರ್ಧಿಗಳಿಗೆ ಹೋಲಿಸಿದರೆ, ಕಾಮನ್ ಮ್ಯಾನ್ ಸ್ಪರ್ಧಿಗಳ ವರ್ತನೆ ತೀರಾ ಕಿರಿಕಿರಿಯಾಗುತ್ತಿರುವುದಂತೂ ಸತ್ಯ. ಈ ಬಗ್ಗೆ ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಯಾವ ರೀತಿ ಕ್ಲಾಸ್ ತೆಗೆದುಕೊಳ್ಳುತ್ತಾರೋ ಎಂಬ ಕುತೂಹಲ ವೀಕ್ಷಕರದ್ದು.

Sulekha

Leave a Reply

Your email address will not be published. Required fields are marked *