ಕರ್ನಾಟಕ ವಾಣಿಜ್ಯ ತೆರಿಗೆ ನೋಟಿಸ್‌ಗೆ ಹೆದರಿದ ವ್ಯಾಪಾರಸ್ಥರು- ಆನ್‌ಲೈನ್ ಪೇಮೆಂಟ್ ಮಾಡಿಸಿಕೊಳ್ಳೋದೆ ತಪ್ಪಾ?

ಫೋನ್ ಪೇ, ಗೂಗಲ್ ಪೇ ಸೇರಿದಂತೆ ಆನ್‌ಲೈನ್ ಮೂಲಕ ವ್ಯಾವಹಾರ ಮಾಡುತ್ತಿದ್ದ ಸಾವಿರಾರು ಕಾಂಡಿಮೆಂಟ್ಸ್, ಬೇಕರಿ, ಬೀಡ ಶಾಪ್, ಟೀ, ಕಾಫಿ ಶಾಪ್ ಮಾಲೀಕರಿಗೆ ಬಿಗ್ ಶಾಕ್ ಎದುರಾಗಿದೆ. ಇವರೆಲ್ಲರಿಗೂ ಒಂದು ವಾರದಿಂದ ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟಿಸ್ ನೀಡಲಾಗುತ್ತಿದೆ
‘ನೀವು ಕಳೆದ ನಾಲ್ಕೈದು ವರ್ಷಗಳಿಂದ ಲಕ್ಷಾಂತರ ರುಪಾಯಿ ವ್ಯಾಪಾರ ವಹಿವಾಟು ಮಾಡಿದ್ದೀರಿ. ಅದಕ್ಕಾಗಿ ನೀವು ಕಮರ್ಷಿಯಲ್ ಟ್ಯಾಕ್ಸ್ ಪಾವತಿ ಮಾಡಬೇಕು’ ಎಂದು ಶೋಕಾಸ್ ನೋಟಿಸ್ ನೀಡಲಾಗುತ್ತಿದೆ. ಇದರಿಂದ ಶಾಪ್ ಮಾಲೀಕರು ಕಂಗಾಲಾಗಿ ಹೋಗಿದ್ದು, ಡಿಜಿಟಲ್ ಪಾವತಿ ಬೇಡವೇ ಬೇಡ ಎನ್ನುತ್ತಿದ್ದಾರೆ. ಕ್ಯಾಶ್ ಮೂಲಕವೇ ವ್ಯವಹಾರ ಮಾಡಬೇಕಿದ್ದು, ಈಗ ಏಕಾಏಕಿ ನೋಟಿಸ್ ನೀಡಿದ್ದು ಲಕ್ಷ ಲಕ್ಷ ಹಣವನ್ನ ಎಲ್ಲಿಂದ ತರುವುದು ಅಂತ ಕಂಗಾಲಾಗಿ ಹೋಗಿದ್ದಾರೆ.
ಕರ್ನಾಟಕ ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿಗಳು ಈ ಸಣ್ಣಪುಟ್ಟ ಬೇಕರಿ, ಕಾಂಡಿಮೆಂಟ್ಸ್, ಬೀಡ ಅಂಗಡಿಗಳಿಗೆ 37 ಲಕ್ಷ ರೂ, 32 ಲಕ್ಷ ರೂ.,54 ಲಕ್ಷ ರೂ., 19 ಲಕ್ಷ ರೂ., 15 ಲಕ್ಷ ರೂಪಾಯಿ ಕಮರ್ಷಿಯಲ್ ಟ್ಯಾಕ್ಸ್ ಪಾವತಿ ಮಾಡಬೇಕೆಂದು ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ.
ರಾಜ್ಯದ ಸಾವಿರಾರು ಸಣ್ಣಪುಟ್ಟ ವ್ಯಾಪಾರ ಮಾಡುವ ಅಂಗಡಿಗಳಿಗೆ ನೋಟಿಸ್ ನೀಡಿದ್ದು, ಇದರಿಂದ ಬೆಂಗಳೂರು ಸೇರಿದಂತೆ ರಾಜ್ಯದ ಇತರ ಕಡೆಗಳಲ್ಲಿನ ಅಂಗಡಿ ಮಾಲೀಕರು ಕಂಗಲಾಗಿದ್ದಾರೆ. ಯಾವುದೇ ಕಾರಣಕ್ಕೂ ಇಷ್ಟೊಂದು ಹಣವನ್ನು ನಾವು ಪಾವತಿ ಮಾಡಲು ಆಗದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೇ ಈ ಡಿಜಿಟಲ್ ಪೇಮೆಂಟ್ ಮೊದಲು ನಿಲ್ಲಿಸಬೇಕು ಅಂತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನೋಡಿರಿ

