ಮೈಸೂರಿನಲ್ಲಿ ಕಾಮಿಡಿ ನಟ ಚಿಕ್ಕಣ್ಣ ಮದುವೆ – 29 ಮತ್ತು 30 ರಂದು ಮೆಚ್ಚಿದ ಹುಡುಗಿ ಜೊತೆ ಕಲ್ಯಾಣ

ಮೈಸೂರಿನಲ್ಲಿ ಕಾಮಿಡಿ ನಟ ಚಿಕ್ಕಣ್ಣ ಮದುವೆ – 29 ಮತ್ತು 30 ರಂದು ಮೆಚ್ಚಿದ ಹುಡುಗಿ ಜೊತೆ ಕಲ್ಯಾಣ

ಸ್ಯಾಂಡಲ್‌ವುಡ್ ನಟ, ಕಾಮಿಡಿ ಕಲಾವಿದ ಚಿಕ್ಕಣ್ಣ ಇನ್ನೆರೆಡು ದಿನಗಳಲ್ಲಿ ಹಸೆಮಣೆಯೇರಲಿದ್ದಾರೆ. ಆಗಸ್ಟ್-29 ಮತ್ತು 30 ರಂದು ಮೈಸೂರಿನಲ್ಲಿ ಮದುವೆ ನಡೆಯಲಿದೆ.

ಇದನ್ನೂ ಓದಿ:ಟಾಕ್ಸಿಕ್ ಮೊದಲ ದಿನದ ಗಳಿಕೆ ಎಷ್ಟು? – ನಟ ಯಶ್ ಹವಾ ಹೇಗಿದೆ?

ಕನ್ನಡ ಚಿತ್ರರಂಗದ ಕಾಮಿಡಿ ಕಿಂಗ್ ಚಿಕ್ಕಣ್ಣ ಅವರ ಮದುವೆಗೆ ಭರದ ಸಿದ್ಧತೆಗಳು ನಡೆಯುತ್ತಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಮಹದೇವಪುರದ ಪಾವನಾ ಅವರನ್ನ ಚಿಕ್ಕಣ್ಣ ಮದುವೆಯಾಗುತ್ತಿದ್ದಾರೆ. ಮನೆಯವರು ನೋಡಿದ ಹುಡುಗಿ, ನಂತರ ಮನಮೆಚ್ಚಿದ ಹುಡುಗಿಯಾದಳು ಎಂದು ಸ್ವತಃ ಚಿಕ್ಕಣ್ಣನೇ ಹೇಳಿಕೊಂಡಿದ್ದಾರೆ. ಚಿಕ್ಕಣ್ಣ ಮತ್ತು ಪಾವನಾ ಅವರ ಮದುವೆ ಮೈಸೂರಿನಲ್ಲಿ ನಡೆಯುತ್ತಿದೆ. ಪಾವನಾ ಅವರಿಗೂ ಮೈಸೂರು ಹತ್ತಿರ ಆಗುತ್ತದೆ. ನಾನೂ ಮೈಸೂರಿನವೇ ಆಗಿದ್ದೇನೆ. ಹಾಗಾಗಿಯೆ ಮೈಸೂರು ಅಲ್ಲಿಯೇ ಮದುವೆ ಆಗುತ್ತಿದ್ದೇವೆ ಎಂದು ಚಿಕ್ಕಣ್ಣ ಹೇಳಿದ್ದಾರೆ.

ಸಿಂಪಲ್ ಆಗಿ ಮದುವೆ ಆಗೋ ಯೋಚನೆ ಇತ್ತು. ಆದರೆ, ನಮ್ಮ ಅಮ್ಮನ ಆಸೆಯಂತೆ ಒಂಚೂರು ದೊಡ್ಡದಾಗಿಯೇ ಮದುವೆ ಆಗುತ್ತಿದ್ದೇನೆ. ಆದರೆ, ಇದು ಕೂಡ ಸಿಂಪಲ್ ಆಗಿಯೇ ಇರುತ್ತದೆ ಎಂದು ನಟ ಹೇಳಿದ್ದಾರೆ . ಮೈಸೂರಿನ ಸ್ಪೆಕ್ಟ್ರಮ್ ಹಾಲ್‌ನಲ್ಲಿ ಅದ್ದೂರಿಯಾಗಿ ಮದುವೆ ಕಾರ್ಯಕ್ರಮ ನಡೆಯಲಿದೆ. ಮದುವೆಗೆ ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ಸೇರಿದಂತೆ ಹಲವು ಪ್ರಮುಖರಿಗೆ ಈಗಾಗಲೇ ಆಹ್ವಾನ ನೀಡಲಾಗಿದೆ.

Sulekha

Leave a Reply

Your email address will not be published. Required fields are marked *