ಚಿರತೆ ಸೆರೆಗೆ ಮುಂದುವರಿದ ಕೂಂಬಿಂಗ್ – ಅರಣ್ಯ ಇಲಾಖೆಯಿಂದ ಭಕ್ತರಿಗೆ ಹೊಸ ಸುತ್ತೋಲೆ

ಚಿರತೆ ಸೆರೆಗೆ ಮುಂದುವರಿದ ಕೂಂಬಿಂಗ್ – ಅರಣ್ಯ ಇಲಾಖೆಯಿಂದ ಭಕ್ತರಿಗೆ ಹೊಸ ಸುತ್ತೋಲೆ

ಚಾಮರಾಜನಗರದ ನಾಗಮಲೆ ಅರಣ್ಯದಲ್ಲಿ ಚಿರತೆ ದಾಳಿಗೆ ಬಾಲಕ ಬಲಿ ಪ್ರಕರಣ ಬೆನ್ನಲ್ಲೇ ಅರಣ್ಯ ಇಲಾಖೆ ಹೊಸ ಸುತ್ತೋಲೆ ಹೊರಡಿಸಿದೆ. ಜೊತೆಗೆ ಚಿರತೆ ಸೆರೆಗಾಗಿ ಕಾರ್ಯಾಚರಣೆ ಮುಂದುವರೆದಿದೆ.

ಇದನ್ನೂ ಓದಿ:ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ನಿಷೇಧ – ಭಕ್ತರೇ ಗಮನಿಸಿ.. ವರ್ಷವಿಡೀ ಪಾದಯಾತ್ರೆ ಮಾಡುವಂತಿಲ್ಲ..!

ಸಾರ್ವಜನಿಕರು ಮತ್ತು ಚಾರಣಿಗರ ಸುರಕ್ಷತೆಯನ್ನು ಹಿತದೃಷ್ಟಿಯಿಂದ ಅರಣ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಇದೀಗ ಮುಂದಿನ ಆದೇಶದವರೆಗೆ ಚಿರತೆ, ಹುಲಿ, ಆನೆ, ಕರಡಿ ಸೇರಿದಂತೆ ವನ್ಯಜೀವಿಗಳು ಸಂಚರಿಸುವ ಕಡೆ ಮತ್ತು ಮಾನವ-ವನ್ಯಜೀವಿ ಸಂಘರ್ಷ ಸಂಭವಿಸಿರುವ ಕಡೆಗಳಲ್ಲಿ ಚಾರಣ ಮತ್ತು ಸಂಚಾರ ಪಥಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಲು ಸೂಚನೆ ನೀಡಲಾಗಿದೆ. ಮುಖ್ಯ ವನ್ಯಜೀವಿ ಪರಿಪಾಲಕರು ಈ ಅಧಿಕೃತ ಸುತ್ತೋಲೆ ಹೊರಡಿಸಿದ್ದಾರೆ.

ಮತ್ತೊಂದೆಡೆ ಚಿರತೆ ದಾಳಿಗೆ ಬಾಲಕ ಬಲಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಿರತೆ ಸೆರೆಗೆ ಕೂಂಬಿಂಗ್ ಮುಂದುವರಿದಿದೆ. ಮೈಸೂರಿನಿಂದ ಚಿರತೆ ಕಾರ್ಯಪಡೆ ತಂಡ ಎಂಟ್ರಿ ಕೊಟ್ಟಿದೆ. ಈಗಾಗಲೇ ಚಿರತೆ ಸೆರೆಹಿಡಿಯಲು ನಾಲ್ಕು ಬೋನ್ ಅಳವಡಿಕೆ ಮಾಡಲಾಗಿದ್ದು, ಸುಮಾರು 70ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅರಣ್ಯ ಪ್ರದೇಶವಾದ್ದರಿಂದ ಡಾಟ್ ಮಾಡಿ ಹಿಡಿಯೋದು ಕಷ್ಟ ಅನ್ನೋ ನಿರ್ಧಾರಕ್ಕೆ ಬಂದಿರುವ ಅರಣ್ಯಾಧಿಕಾರಿಗಳು, ನಾಲ್ಕು ಬೋನ್ ಜೊತೆಗೆ ತುಮಕೂರು ಕೇಜ್ ಅಳವಡಿಸಿದ್ದಾರೆ. ರಾತ್ರಿ ವೇಳೆ ಥರ್ಮಲ್ ಡ್ರೋನ್ ಬಳಸಿ ಚಿರತೆ ಚಲನವಲನ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.

Sulekha

Leave a Reply

Your email address will not be published. Required fields are marked *