ಬಿಗ್ ಬಾಸ್ ಗಾಗಿ ಗೀತಾ ಮತ್ತು ಪುಣ್ಯವತಿ ಸೀರಿಯಲ್ ಮುಕ್ತಾಯ – ಧಾರಾವಾಹಿಗಳ ಕ್ಲೈಮ್ಯಾಕ್ಸ್ ಬಗ್ಗೆ ಇಲ್ಲಿದೆ ಮಾಹಿತಿ
ಪ್ರತೀವರ್ಷ ಬಿಗ್ ಬಾಸ್ ಶುರುವಾದಾಗಲೂ ಕಲರ್ಸ್ ಕನ್ನಡದ ಹಲವು ಧಾರಾವಾಹಿಗಳು ನೆನಪಿನಂಗಳಕ್ಕೆ ಜಾರುತ್ತವೆ. ಈ ಬಾರಿಯೂ ಕೂಡ ನಾಲ್ಕು ಸೀರಿಯಲ್ಗಳು ದೊಡ್ಮನೆ ಕಾರ್ಯಕ್ರಮಕ್ಕಾಗಿ ಮುಕ್ತಾಯವಾಗುತ್ತಿವೆ. ಬಿಗ್ ಬಾಸ್ ಸೀಸನ್ 9 ಮುಗಿದಾಗ ಆರಂಭವಾಗಿದ್ದ ಪುಣ್ಯವತಿ ಕೂಡ ಸೀಸನ್ 10ರ ವೇಳೆಗೆ ಮುಗಿದಿದೆ. ಗೀತಾ ಕೂಡ ಮುಗಿಯುವ ಹಂತಕ್ಕೆ ಬಂದಿದೆ.
ಇದನ್ನೂ ಓದಿ : ವರ್ಷದ ನಂತರ ಅಮ್ಮನ ನೋಡಿದ ಮಗಳು – ಮುಗ್ಧ ಮನಸಿನ ಕಂದಮ್ಮನ ಖುಷಿ ನೋಡಿದವರೆಲ್ಲರೂ ಭಾವುಕ..!
ನಂದನ್ ಹಾಗೂ ಪದ್ಮಿನಿ ಮದುವೆ ನಡೆಯಬೇಕಿತ್ತು. ಆದರೆ ಪದ್ಮಿನಿ ಹಸೆಮಣೆ ಏರೋ ಬದಲು ಪೂರ್ವಿ ತಾಳಿ ಕಟ್ಟಿಸಿಕೊಂಡಿದ್ದಳು. ನಂದನ್‌ಗೆ ಪದ್ಮಿನಿ ಜೊತೆ ಬಾಳುವ ಆಸೆ ಇತ್ತು.. ಆದ್ರೆ ಪೂರ್ವಿ ನಂದನ್‌ನನ್ನು ಬಿಟ್ಟು ಕೊಡೋದಿಲ್ಲ ಎಂದು ಕುತಂತ್ರ ಮಾಡುತ್ತಿದ್ದಳು.. ಅಮ್ಮಾಜಿ ಕೂಡ ಪೂರ್ವಿ ಪರವೇ ನಿಂತಿದ್ದರು. ಕೊನೇ ವೇಳೆಗೆ ಪೂರ್ವಿ ಆಸ್ತಿಗಾಗಿ ಆಸೆ ಪಡುತ್ತಿದ್ದಾಳೆ ಅನ್ನೋದು ಗೊತ್ತಾಗಿ ಅಮ್ಮಾಜಿ ಪೂರ್ವಿಯ ಕಪಾಳಕ್ಕೆ ಭಾರಿಸಿ ಮನೆಯಿಂದ ಆಚೆ ಹಾಕಿದ್ದರು. ಬಳಿಕ ಪದ್ಮಿನಿ ತನ್ನ ತಂಗಿ ಪೂರ್ವಿಗೆ ಒಂದೇ ಒಂದು ಚಾನ್ಸ್ ಕೊಟ್ಟು ಕ್ಷಮಿಸುವಂತೆ ಅಮ್ಮಾಜಿ ಬಳಿ ಗೋಗರೆದಿದ್ದಳು. ಅಮ್ಮಾಜಿ ಒಪ್ಪಿಕೊಂಡಿದ್ದರು. ಬಳಿಕ ಪೂರ್ವಿ ಎಲ್ಲರ ಬಳಿ ಕ್ಷಮೆ ಕೇಳಿ ತನ್ನ ಕೊರಳಲ್ಲಿದ್ದ ತಾಳಿಯನ್ನ ತೆಗೆದಳು. ಈ ಮೂಲಕ ನಂದನ್ ಹಾಗೂ ಪದ್ಮಿನಿ ಬದುಕಿನಿಂದ ಪೂರ್ವಿ ಒರ ಬರುವ ಮೂಲಕ ಸೀರಿಯಲ್ ಮುಕ್ತಾಯ ಕಂಡಿತು.
ಇನ್ನು ಗೀತಾ ಧಾರಾವಾಹಿ ಕೂಡ ಫೈನಲ್ ಸ್ಟೇಜ್ಗೆ ಬಂದಿದೆ. ಕಲರ್ಸ್ ಕನ್ನಡದಲ್ಲಿ ಬೃಂದಾವನ ಎನ್ನುವ ಹೊಸ ಸೀರಿಯಲ್ ಶುರುವಾಗಲಿದ್ದು ಈಗಾಗಲೇ ಪ್ರೋಮೋ ಕೂಡ ಬಿಡಲಾಗಿದೆ. ಹೀಗಾಗಿ ಗೀತಾ ಸೀರಿಯಲ್ ಮುಗಿಯಲಿದೆ. ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿದ್ದ ಗೀತಾ ಧಾರಾವಾಹಿಯಲ್ಲಿ ವಿಜಯ್ ಮತ್ತು ಗೀತಾ ಪಾತ್ರದಾರಿಗಳು ಮುಖ್ಯ ಪಾತ್ರದಲ್ಲಿದ್ದರು. ವಿಜಯ್ನ ಮಲತಾಯಿ ಪಾತ್ರಧಾರಿ ಭಾನುಮತಿ ವಿಲನ್ ರೋಲ್ ನಲ್ಲಿದ್ರು. ಧಾರಾವಾಹಿಯ ಅಂತಿಮ ಸಂಚಿಕೆಗಳಲ್ಲಿ ಹಲವು ಪಾತ್ರಗಳನ್ನ ಪರಿಚಯಿಸಲಾಗಿತ್ತು. ಭಾನುಮತಿ ಅಮ್ಮನೇ ತನ್ನ ಸರ್ವಸ್ವ ಅಂದುಕೊಂಡಿದ್ದ ವಿಜಿಗೆ ಅವಳೇ ತಮ್ಮ ಸಂಸಾರಕ್ಕೆ ವಿಷ ಹಾಕಿದ್ದು ಅನ್ನೋದು ಗೊತ್ತಾಗಿದೆ. ತನ್ನ ತಂದೆಯನ್ನ ಕೊಂದಿದ್ದು, ಗೀತಾ ತಾಯಿ ಜೈಲಿಗೆ ಹೋಗೋಕೆ ಕಾರಣ ಎಲ್ಲದಕ್ಕೂ ಭಾನುಮತಿಯೇ ಕಾರಣ ಅನ್ನೋದು ಬಯಲಾಗಿದೆ. ಈ ಮೂಲಕ ವಿಜಿ ಹಾಗೂ ಗೀತಾ ಕುಟುಂಬಸ್ಥರು ಒಂದಾಗುವ ಮೂಲಕ ಸೀರಿಯಲ್ ಮುಗಿಯಲಿದೆ. ಒಟ್ಟಿನಲ್ಲಿ ಬಿಗ್ ಬಾಸ್ ಸೀಸನ್ 10 ಆರಂಭವಾಗುವ ಬೆನ್ನಲ್ಲೇ ಕಲರ್ಸ್ ಕನ್ನಡದ 4 ಧಾರವಾಹಿಗಳು ಮುಕ್ತಾಯವಾಗ್ತಿವೆ. ಬಿಗ್ಬಾಸ್ ಶುರುವಾಗುತ್ತೆ ಅನ್ನೋ ಕುತೂಹಲ ಒಂದ್ಕಡೆಯಾದ್ರೆ ನೆಚ್ಚಿನ ಸೀರಿಯಲ್ಗಳು ಮುಗಿಯುತ್ತಿರೋದು ಬೇಸರ ಕೂಡ ಇದೆ.