ಭಾನುವಾರದಿಂದ ಬಿಗ್ ಬಾಸ್ ಸೀಸನ್ 10 ಶುರು – ಕಲರ್ಸ್ ಕನ್ನಡದ ಲಕ್ಷಣ ಮತ್ತು ತ್ರಿಪುರ ಸುಂದರಿ ಮುಕ್ತಾಯ

ಭಾನುವಾರದಿಂದ ಬಿಗ್ ಬಾಸ್ ಸೀಸನ್ 10 ಶುರು – ಕಲರ್ಸ್ ಕನ್ನಡದ ಲಕ್ಷಣ ಮತ್ತು ತ್ರಿಪುರ ಸುಂದರಿ ಮುಕ್ತಾಯ

ಕಲರ್ಸ್ ಕನ್ನಡದಲ್ಲಿ ಇನ್ಮುಂದೆ ಬಿಗ್ ಬಾಸ್ ಹಬ್ಬ ಶುರುವಾಗಲಿದ್ದು, ಒಂದೂವರೆ ಗಂಟೆಗಳ ಕಾಲ ಮಸ್ತ್ ಮನರಂಜನೆ ಸಿಗಲಿದೆ.  ನಟ ಕಿಚ್ಚ ಸುದೀಪ್ ಈ ಕಾರ್ಯಕ್ರಮವನ್ನ ನಡೆಸಿಕೊಡೋದು ಮತ್ತೊಂದು ಸ್ಪೆಷಾಲಿಟಿ. ಇನ್ನು ಪ್ರತೀವರ್ಷ ಬಿಗ್ ಬಾಸ್ ಶುರುವಾದಾಗಲೂ ಕಲರ್ಸ್ ಕನ್ನಡದ ಹಲವು ಧಾರಾವಾಹಿಗಳು ನೆನಪಿನಂಗಳಕ್ಕೆ ಜಾರುತ್ತವೆ. ಈ ಬಾರಿಯೂ ಕೂಡ ನಾಲ್ಕು ಸೀರಿಯಲ್​ಗಳು ದೊಡ್ಮನೆ ಕಾರ್ಯಕ್ರಮಕ್ಕಾಗಿ ಮುಕ್ತಾಯವಾಗುತ್ತಿವೆ.

ಇದನ್ನೂ ಓದಿ : ಲಕ್ಷಣ ಧಾರಾವಾಹಿಯ ಡೆವಿಲ್ ಸೀಕ್ರೆಟ್ ಬಯಲು..! – ಸತ್ಯ ಗೊತ್ತಾದ ಮೇಲೆ ಭೂಪತಿ, ನಕ್ಷತ್ರ, ಚಂದ್ರಶೇಖರ್‌ಗೆ ಶಾಕ್

ಒಂದೂವರೆ ಗಂಟೆಯ ಬಿಗ್​ಬಾಸ್​​ ಕಾರ್ಯಕ್ರಮಕ್ಕಾಗಿ ನಾಲ್ಕು ಧಾರಾವಾಹಿಗಳು ಕೊನೆಗೊಳ್ಳುತ್ತಿವೆ. ಗೀತಾ, ಲಕ್ಷಣ, ತ್ರಿಪುರ ಸುಂದರಿ ಹಾಗೂ ಪುಣ್ಯವತಿ ಧಾರಾವಾಹಿಗಳು ಮುಕ್ತಾಯಗೊಳ್ಳುತ್ತಿವೆ. ಬಿಗ್​ಬಾಸ್ ಜೊತೆಗೆ ಮತ್ತೊಂದು ಹೊಸ ಧಾರಾವಾಹಿ ಬೃಂದಾವನ ಕೂಡ ಶುರುವಾಗಲಿದೆ. ಹೀಗಾಗಿ ನಾಲ್ಕು ಧಾರಾವಾಹಿಗಳನ್ನ ಮುಗಿಸಲಾಗ್ತಿದೆ. ಕಲರ್ಸ್ ಕನ್ನಡದಲ್ಲಿ ರಾತ್ರಿ 8.30 ಕ್ಕೆ ಪ್ರಸಾರವಾಗ್ತಿದ್ದ ಲಕ್ಷಣ ಧಾರಾವಾಹಿಯನ್ನ ಮುಗಿಸಲಾಗಿದೆ. ಡೆವಿಲ್ ಪಾತ್ರ ರಿವೀಲ್ ಆಗುವ ಮೂಲಕ ಕ್ಲೈಮ್ಯಾಕ್ಸ್ ಕಂಡಿದೆ. ಶಕುಂತಲಾ ದೇವಿಯಿಂದ ಆಸ್ತಿಯನ್ನೆಲ್ಲಾ ಕುತಂತ್ರದಿಂದ ತನ್ನ ಹೆಸರಿಗೆ ಮಾಡಿಕೊಂಡಿದ್ದ ಶ್ವೇತಾ ಆಸ್ತಿಯನ್ನೆಲ್ಲಾ ಮತ್ತೆ ಶಕುಂತಲಾ ದೇವಿಗೆ ಬರೆದು ಕೊಟ್ಟಿದ್ದಾಳೆ. ಶ್ವೇತಾ ತಾನು ಫಾರಿನ್​ಗೆ ಹೋಗಿ ಸೆಟಲ್ ಆಗುತ್ತೇನೆ. ನನಗೆ ಫ್ಲೈಟ್ ಟಿಕೆಟ್ ಹಾಗೂ ಕ್ಯಾಶ್ ಬೇಕು ಎಂದು ತನ್ನ ಸಾಕು ತಂದೆ ಚಂದ್ರಶೇಖರ್ ಬಳಿ ಕೇಳಿದ್ದಳು. ಅದಕ್ಕೆ ಪರ್ಯಾಯವಾಗಿ ಡೆವಿಲ್ ಯಾರೆಂದು ಹೇಳುವಂತೆ ಷರತ್ತು ಹಾಕಿ ಭೂಪತಿ, ನಕ್ಷತ್ರಾ ಹಾಗೂ ಚಂದ್ರಶೇಖರ್ ಬಂದಿದ್ದರು. ಈ ವೇಳೆ ಶ್ವೇತಾ ಸಾಕ್ಷಿ ತರುತ್ತೇನೆಂದು ತನ್ನ ಕಾರಿನ ಬಳಿ ತೆರಳಿದ್ದಳು. ಈ ವೇಳೆ ಡೆವಿಲ್​ ಅಂದ್ರೆ ಭಾರ್ಗವಿ ಮಗಳು ಕಾರಿನಲ್ಲಿ ಬಂದು ಶ್ವೇತಾಗೆ ಡಿಕ್ಕಿ ಹೊಡೆದಿದ್ಲು. ಕೆಳಗೆ ಬಿದ್ದ ಶ್ವೇತಾಳನ್ನ ಕೊಲ್ಲೋಕೆ ಮುಂದಾಗಿದ್ದಳು. ಅಷ್ಟ್ರಲ್ಲಿ ಭೂಪತಿ, ಚಂದ್ರಶೇಖರ್, ನಕ್ಷತ್ರ ಅಲ್ಲಿಗೆ ಬಂದಿದ್ದು  ಮಿಲಿಯನ್ನ ಹಿಡಿದಿದ್ರು. ಮಿಲಿ ಸತ್ತಿದ್ದಾಳೆ ಅಂದ್ರೆ ಅವಳ ತಾಯಿ ಡೆವಿಲ್ ಬಂದೇ ಬರುತ್ತಾಳೆ ಎಂದು ಪ್ಲ್ಯಾನ್ ಮಾಡಿದ್ರು. ಅದ್ರಂತೆ ಶವಾಗಾರದಲ್ಲಿರೋ ತನ್ನ ಮಗಳನ್ನ ನೋಡೋಕೆ ವೈದ್ಯರ ವೇಷದಲ್ಲಿ ಬಂದ ಭಾರ್ಗವಿಯೇ ಡೆವಿಲ್ ಅನ್ನೋದು ಎಲ್ಲರಿಗೂ ಗೊತ್ತಾಗಿದೆ. ಡೆವಿಲ್ ಪಾತ್ರ ರಿವೀಲ್ ಆಗುವ ಮೂಲಕ ಲಕ್ಷಣ ಧಾರಾವಾಹಿ ಕ್ಲೈಮ್ಯಾಕ್ಸ್ ಕಂಡಿದೆ.

ಇನ್ನು ವಿಭಿನ್ನ ಕಥಾಹಂದರದ ಮೂಲಕ ಶುರುವಾಗಿದ್ದ ತ್ರಿಪುರ ಸುಂದರಿ ಸೀರಿಯಲ್​ ಕೂಡ ಮುಗಿದಿದೆ. ರಾತ್ರಿ 9:30 ಕ್ಕೆ ಪ್ರಸಾರವಾಗ್ತಾ ಇದ್ದ ಈ ಧಾರವಾಹಿಯಲ್ಲಿ ಬಿಗ್ ಬಾಸ್​ನಿಂದಲೇ ಕರ್ನಾಟಕಕ್ಕೆ ಪರಿಚಯವಾಗಿರುವ ದಿವ್ಯಾ ಸುರೇಶ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತನ್ನ ರಾಜಕುಮಾರನನ್ನು ಹುಡುಕಿಕೊಂಡು ಬಂದ ಗಂಧರ್ವ ಲೋಕದ ಕನ್ಯೆ ಆಮ್ರಪಾಲಿಗೆ ಪ್ರದ್ಯುಮ್ನನೇ ರಾಜಕುಮಾರ ಎಂಬುದು ಗೊತ್ತಾಗುವ ಮೂಲಕ ಸೀರಿಯಲ್​ಗೆ ಇತಿಶ್ರೀ ಆಡಲಾಗಿದೆ. ಕೊನೇ ಸಂಚಿಕೆಗಳಲ್ಲಿ ತಾನು ಗಂಧರ್ವಲೋಕದ ರಾಜಕುಮಾರ ಅನ್ನೋದು ಗೊತ್ತಾದ್ರೂ ತನ್ನ ಫ್ಯಾಮಿಲಿ ಬಿಟ್ಟು ಹೋಗಲ್ಲ ಎಂದು ಹಠ ಹಿಡಿದಿದ್ದ. ಹೀಗಾಗಿ ಆಮ್ರಪಾಲಿ ಗಂಧರ್ವಲೋಕವನ್ನ ಉಳಿಸಲು ನಾನೊಬ್ಬಳೇ ಹೋಗುತ್ತೇನೆ. ಯುದ್ಧ ಮಾಡುತ್ತೇನೆ ಎಂದು ಹೊರಟಿದ್ದಳು.. ಈ ವೇಳೆಗೆ ಅಲ್ಲಿಗೆ ಬಂದ ಪ್ರದ್ಯುಮ್ನ ನಾನೂ ಕೂಡ ಬರುತ್ತೇನೆ. ನಿನ್ನನ್ನ ಬಿಟ್ಟು ಇರೋಕೆ ಆಗಲ್ಲ ಎಂದಿದ್ದ. ಅಷ್ಟ್ರಲ್ಲಿ ಅರಸು ಮನೆಯವರೆಲ್ಲಾ ಅಲ್ಲಿಗೆ ಬಂದಿದ್ದು ಪರಸ್ಪರ ಹಾರ ಬದಲಿಸಿಕೊಳ್ಳುವ ಮೂಲಕ ಆಮ್ರಪಾಲಿ ಮತ್ತು ಪ್ರದ್ಯುಮ್ನನ ವಿವಾಹವಾಗಿತ್ತು. ಬಳಿಕ ಗಂಧರ್ವಲೋಕಕ್ಕೆ ತೆರಳದ ಆಮ್ರಪಾಲಿ ನಾನು ನಿಮ್ಮ ಕುಟುಂಬಸ್ಥರ ಜೊತೆಯೇ ಇದ್ದು ಅವರನ್ನ ಜೋಪಾನ ಮಾಡುತ್ತೇನೆ. ನೀನು ಹೋಗಿ ಯುದ್ಧದಲ್ಲಿ ಜಯಶಾಲಿಯಾಗಿ ಬಾ.. ನಾನು ನಿನಗಾಗಿ ಎದುರು ನೋಡುತ್ತಿರುತ್ತೇನೆ ಎಂದು ತನ್ನ ತಂದೆಯ ಜೊತೆ ಪ್ರದ್ಯುಮ್ನನನ್ನ ಕಳಿಸಿದ್ದಾಳೆ. ಈ ಮೂಲಕ ಈ ಧಾರಾವಾಹಿ ಬಿಗ್​ಬಾಸ್ ನಂತರವೂ ಮತ್ತೆ ಶುರುವಾಗುವ ಸಾಧ್ಯತೆ ಇದೆ.

Shantha Kumari