ಧ್ರುವಂತ್‌ಗೆ ಕಿಚ್ಚನ ಸೀಸನ್‌ ಚಪ್ಪಾಳೆ ಅಲ್ಲ.. ವಾರದ ಚಪ್ಪಾಳೆ! – ವೀಕ್ಷಕರ ಆಕ್ರೋಶದ ಬೆನ್ನಲ್ಲೇ ಯೂಟರ್ನ್‌!

ಧ್ರುವಂತ್‌ಗೆ ಕಿಚ್ಚನ ಸೀಸನ್‌ ಚಪ್ಪಾಳೆ ಅಲ್ಲ.. ವಾರದ ಚಪ್ಪಾಳೆ! – ವೀಕ್ಷಕರ ಆಕ್ರೋಶದ ಬೆನ್ನಲ್ಲೇ ಯೂಟರ್ನ್‌!

ಬಿಗ್‌ಬಾಸ್‌ ಕನ್ನಡ ಸೀಸನ್‌ 12ರ ಕಳೆದ ವಾರದ ವೀಕೆಂಡ್‌ ಸಂಚಿಕೆ ಭಾರಿ ವಿವಾದಕ್ಕೆ ಗುರಿಯಾಗಿತ್ತು. ಕಿಚ್ಚ ಸುದೀಪ್‌ ಅವರು ಕಳೆದ ವಾರ ಧ್ರುವಂತ್‌ಗೆ ಸೀಸನ್‌ನ ಕಿಚ್ಚನ ಚಪ್ಪಾಳೆ ನೀಡಿದ್ದು ವೀಕ್ಷಕರ ಅಸಮಧಾನಕ್ಕೆ ಕಾರಣವಾಗಿತ್ತು. ಕಿಚ್ಚನ ಚಪ್ಪಾಳೆ ಟ್ರೋಲ್‌ ಪೇಜ್‌ಗಳಿಗೆ ಆಹಾರವಾಗಿತ್ತು. ಈ ಬೆನ್ನಲ್ಲೇ ಕಿಚ್ಚನ ಚಪ್ಪಾಳೆ ಪೋಸ್ಟರ್‌ ಚೇಂಜ್‌ ಆಗಿದೆ.

ಇದನ್ನೂ ಓದಿ: ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡುತ್ತೀರಾ? – ಇನ್ಮುಂದೆ ಫೈನ್‌ ಮಾತ್ರವಲ್ಲ, FIR ದಾಖಲಾಗುತ್ತೆ!

ಕಿಚ್ಚನ ಚಪ್ಪಾಳೆಗೆ ಅದರದ್ದೇ ಆದ ಗೌರವವಿದೆ. ಕಿಚ್ಚನ ಚಪ್ಪಾಳೆ ಸ್ಪರ್ಧಿಗಳಿ ಸ್ಪೂರ್ತಿ. ಸ್ಪರ್ಧಿಗಳು ಮಾತ್ರವಲ್ಲ ವೀಕ್ಷಕರು ಕೂಡ ಕಿಚ್ಚನ ಚಪ್ಪಾಳೆಗೆ ಗೌರವ ನೀಡುತ್ತಾರೆ. ಕಳೆದ ವಾರ ಕಿಚ್ಚ ಸುದೀಪ್‌ ಅಶ್ವಿನಿ ಹಾಗೂ ಧ್ರುವಂತ್‌ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಅಷ್ಟೇ ಅಲ್ಲ ವಾರದ ಕಿಚ್ಚನ ಚಪ್ಪಾಳೆ ಅಶ್ವಿನಿಗೆ ನೀಡಿದ್ರೆ, ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಅವರು ಇಡೀ ಸೀಸನ್​ನ ಆಟವನ್ನು ಪರಿಗಣಿಸಿ ಧ್ರುವಂತ್ ಅವರಿಗೆ ಚಪ್ಪಾಳೆ ನೀಡಿದ್ದರು. ಸುದೀಪ್‌ ಈ ನಿರ್ಧಾರಕ್ಕೆ ವೀಕ್ಷಕರು ಅಸಮಧಾನ ಹೊರ ಹಾಕಿದ್ರು. ಈ ವಾರದ ಕಳಪೆ ಕಿಚ್ಚ ಸುದೀಪ್‌ ಎಂದೆಲ್ಲಾ ಟ್ರೋಲ್‌ ಮಾಡಿದ್ರು. ಈ ಬೆನ್ನಲ್ಲೇ ಬಿಗ್‌ಬಾಸ್‌ ತಂಡ ಯೂಟರ್ನ್‌ ಹೊಡೆದಿದೆ. ಇದೀಗ ಕಿಚ್ಚನ ಸೀಸನ್‌ ಚಪ್ಪಾಳೆ ಪೋಸ್ಟರ್‌ ಡಿಲೀಟ್‌ ಮಾಡಿ, ಕಿಚ್ಚನ ವಾರದ ಚಪ್ಪಾಳೆ ಎಂದು ಎಡಿಟ್‌ ಮಾಡಿರೋ ಪೋಸ್ಟರ್‌ ಅನ್ನ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಲಾಗಿದೆ.

ಧ್ರುವಂತ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 12 ಆಟದ ಮಧ್ಯೆ ಸೋಲು ಒಪ್ಪಿಕೊಂಡಿದ್ದರು. ತಾವಾಗಿಯೇ ಆಟ ತೊರೆಯುವ ನಿರ್ಧಾರ ಮಾಡಿದ್ದರು. ಆದರೆ ಸುದೀಪ್ ಅವರು ಪ್ರೋತ್ಸಾಹದ ಮಾತುಗಳನ್ನು ಹೇಳಿದ ಬಳಿಕ ಆಟ ಮುಂದುವರಿಸಿದ್ದರು. ಕಳೆದ ವಾರ ಅಶ್ಬಿನಿ ಒಂಟಿಯಾಗಿದ್ದಾಗ ಧ್ರುವಂತ್‌ ಅವರ ಪರ ನಿಂತಿದ್ದರು. ಇದೆಲ್ಲಾ ವಿಚಾರಕ್ಕೆ ಧ್ರುವಂತ್‌ಗೆ  ಕಿಚ್ಚನ ಸೀಸನ್‌ ಚಪ್ಪಾಳೆ ಸಿಕ್ಕಿತ್ತು. ಇದ್ರ ಬೆನ್ನಲ್ಲೇ ಮೊಟ್ಟ ಮೊದಲ ಕಿಚ್ಚನ ಸೀಸನ್ ಚಪ್ಪಾಳೆ ಎಂದು ಧ್ರುವಂತ್ ಅವರ ಫೋಟೋವನ್ನು ಕಲರ್ಸ್ ಕನ್ನಡ ವಾಹಿನಿಯ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿತ್ತು. ಅದಕ್ಕೆ ಜನರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಈಗ ‘ಈ ವಾರದ ಕಿಚ್ಚನ ಚಪ್ಪಾಳೆ ಎಂದು ಹೊಸ ಪೋಸ್ಟ್ ಹಾಕಲಾಗಿದೆ. ಈ ಮೊದಲ ಹಾಕಿದ್ದ ಪೋಸ್ಟ್ ಡಿಲೀಟ್ ಮಾಡಲಾಗಿದೆ. ಬಿಗ್ ಬಾಸ್ ಆಯೋಜಕರು ನಿರ್ಧಾರ ಬದಲಿಸಿದ್ದಕ್ಕೆ ವೀಕ್ಷಕರಿಗೆ ಖುಷಿ ಆಗಿದೆ. ಇಡೀ ಸೀಸನ್​​ನ ಚಪ್ಪಾಳೆ ಪಡೆಯುವಷ್ಟು ಉತ್ತಮ ಆಟವನ್ನು ಧ್ರುವಂತ್ ಆಡಿಲ್ಲ ಎಂಬುದು ವೀಕ್ಷಕರು ಅಭಿಪ್ರಾಯ. ಹಾಗಾಗಿ ಇಡೀ ಸೀಸನ್ ಚಪ್ಪಾಳೆ ಗಿಲ್ಲಿಗೆ ಸಲ್ಲಬೇಕು ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ವಾರದ ಚಪ್ಪಾಳೆಯನ್ನು ಅಶ್ವಿನಿ ಗೌಡ ಅವರಿಗೂ ನೀಡಲಾಗಿದೆ.

Shwetha M