ಕೊಲಂಬಿಯಾದಲ್ಲಿ ಭೀಕರ ವಾಯುಪಡೆ ವಿಮಾನ ದುರಂತ – 30ಕ್ಕೂ ಹೆಚ್ಚು ಸಾ*ವು, 70 ಜನಕ್ಕೆ ಗಾಯ

ಕೊಲಂಬಿಯಾದಲ್ಲಿ 124 ಜನರಿದ್ದ ವಾಯುಪಡೆಯ ವಿಮಾನ ಪತ್ನಗೊಂಡಿದ್ದು, 30ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ವಿಮಾನ ಸೋಮವಾರ ಟೇಕ್ ಆಫ್ ಆದ ನಂತರ ಪತನಗೊಂಡಿದ್ದು, 34 ಜನರು ಸಾವನ್ನಪ್ಪಿದ್ದಾರೆ, ಸುಮಾರು 20ಕ್ಕೂ ಅಧಿಕ ಮಂದಿ ಕಾಣೆಯಾಗಿದ್ದಾರೆ. ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಇದನ್ನೂ ಓದಿ: IPL ಅಭಿಮಾನಿಗಳಿಗೆ ಗುಡ್ನ್ಯೂಸ್! – ದೇಶದ 15 ನಗರಗಳಲ್ಲಿ ಬಿಗ್ ಸ್ಕ್ರೀನ್ಗಳಲ್ಲಿ IPL ಮ್ಯಾಚ್ ಪ್ರಸಾರ!
ಕೊಲಂಬಿಯಾದ ವಾಯುಪಡೆಯ ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ಮಾರಕವಾದ ಅಪಘಾತ ಇದಾಗಿದೆ. ಈ ದುರಂತವು ಲಾಕ್ಹೀಡ್ ಮಾರ್ಟಿನ್ ನಿರ್ಮಿತ ಹರ್ಕ್ಯುಲಸ್ ಸಿ -130 ಸಾರಿಗೆ ವಿಮಾನವು ಪೆರುವಿನ ಗಡಿಯಲ್ಲಿರುವ ಪೋರ್ಟೊ ಲೆಗುಯಿಜಾಮೊದಿಂದ ಹಾರುತ್ತಿದ್ದಾಗ ಸಂಭವಿಸಿದೆ ಎಂದು ರಕ್ಷಣಾ ಸಚಿವ ಪೆಡ್ರೊ ಸ್ಯಾಂಚೆಜ್ ಎಕ್ಸ್ನಲ್ಲಿ ತಿಳಿಸಿದ್ದಾರೆ. ವಿಮಾನವು ಮದ್ದುಗುಂಡುಗಳನ್ನು ಹೊತ್ತೊಯ್ಯುತ್ತಿತ್ತು, ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ನೆಲಕ್ಕೆ ಅಪ್ಪಳಿಸಿ ನಂತರ ಅದು ಸ್ಫೋಟಗೊಂಡ ಪರಿಣಾಮ ವಿಮಾನ ಬೆಂಕಿಗೆ ಆಹುತಿಯಾಗಿದೆ.
ಇನ್ನೂ ಅಧಿಕೃತವಾಗಿ ಸಾವಿನ ಸಂಖ್ಯೆ ಲಭ್ಯವಾಗಿಲ್ಲ. ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ನೆಲಕ್ಕೆ ಅಪ್ಪಳಿಸಿರುವುದು ತಿಳಿದು ಬಂದಿದೆ. ಈ ಬಗ್ಗೆ ಪುಟುಮಾಯೊ ಇಲಾಖೆಯ ಗವರ್ನರ್ ಜಾನ್ ಗೇಬ್ರಿಯಲ್ ಮೋಲಿನಾ ಸ್ಥಳೀಯ ಸುದ್ದಿ ಸಂಸ್ಥೆಗೆ ತಿಳಿಸಿದ್ದು, 34 ಜನರು ಸಾವನ್ನಪ್ಪಿದ್ದಾರೆ, 70 ಜನರು ಗಾಯಗೊಂಡಿದ್ದಾರೆ ಮತ್ತು 21 ಜನರು ಕಾಣೆಯಾಗಿದ್ದಾರೆ ಎಂದು ಹೇಳಲಾಗಿದೆ.

ನೋಡಿರಿ

