ಅರಮನೆ ಮಾದರಿಯಂತೆ ಬಸ್ ಶೆಲ್ಟರ್ ನಿರ್ಮಾಣ -ಸಂಸದರಿಗೆ ಶಾಸಕರ ಸವಾಲ್
ಪ್ರತಾಪ್ ಸಿಂಹ-ರಾಮ್‌ದಾಸ್ ನಡುವೆ ಶೀತಲ ಸಮರ

ಅರಮನೆ ಮಾದರಿಯಂತೆ ಬಸ್ ಶೆಲ್ಟರ್ ನಿರ್ಮಾಣ -ಸಂಸದರಿಗೆ ಶಾಸಕರ ಸವಾಲ್ಪ್ರತಾಪ್ ಸಿಂಹ-ರಾಮ್‌ದಾಸ್ ನಡುವೆ ಶೀತಲ ಸಮರ

ಮೈಸೂರು: ಮೈಸೂರು ನಗರದ ಊಟಿ ರಸ್ತೆಯ ಜೆಎಸ್‌ಎಸ್‌ ಕಾಲೇಜು ಬಳಿ ನಿರ್ಮಿಸಿರುವ ಬಸ್  ಶೆಲ್ಟರ್ ಮೇಲಿರುವ ಗುಂಬಜ್ ಗುದ್ದಾಟ ರಾಜಕೀಯ ತಿರುವು ಪಡೆದುಕೊಂಡು ದಿನಕ್ಕೊಂದು ವಿವಾದ ಸೃಷ್ಟಿಸುತ್ತಿದೆ. ಗುಂಬಜ್ ತೆರವು ಮಾಡಿಯೇ ಸಿದ್ದ ಅಂತಾ ಸಂಸದ ಪ್ರತಾಪ್ ಸಿಂಹ ಗುಡುಗಿದ್ರೆ, ಇತ್ತ ಬಸ್ ಶೆಲ್ಟರ್ ಮೇಲಿರುವ ಗುಂಬಜ್ ಬಣ್ಣವೇ ಬದಲಾಗಿದೆ. ಜೊತೆಗೆ ಬಸ್ ಶೆಲ್ಟರ್‌ಗೆ ನಾಮಫಲಕವನ್ನು ಅಳವಡಿಸಲಾಗಿದೆ.

ಇದನ್ನೂ ಓದಿ: ‘ಗುಂಬಜ್ ತೆರವು ಮಾಡಲು ಜಿಲ್ಲಾಡಳಿತದ ಅನುಮತಿ ಬೇಕಿಲ್ಲ’ –ಸಂಸದ ಪ್ರತಾಪ್ ಸಿಂಹ ಗುಡುಗು 

ಗುಂಬಜ್ ವಿವಾದದಿಂದಾಗಿ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ರಾಮದಾಸ್ ನಡುವೆ ಶೀತಲ ಸಮರ ಏರ್ಪಟ್ಟಿದೆ. ಕೊನೆಗೂ ಬಸ್ ಶೆಲ್ಟರ್ ವಿನ್ಯಾಸದ ಮಾದರಿಯನ್ನು ಬಿಡುಗಡೆ ಮಾಡಿದ್ದಾರೆ. ಇದರ ಜೊತೆಗೆ ಸಂಸದ ಪ್ರತಾಪ್ ಸಿಂಹ ಹೇಳಿಕೆ ಕೊಟ್ಟ ಮೇಲೆ ಕಳಶ ಸ್ಥಾಪನೆ ಮಾಡಿದ್ದಲ್ಲ. 10 ದಿನಗಳ ಹಿಂದೆಯೇ ಗುಂಬಜ್ ಮೇಲೆ ಕಳಶ ಸ್ಥಾಪಿಸಲಾಗಿತ್ತು ಅನ್ನೋದನ್ನ ರಾಮ್‌ದಾಸ್ ಹೇಳಿದ್ದಾರೆ. ವಿನ್ಯಾಸ ವಿವಾದವಾಗಿದ್ರೆ ತಜ್ಞರ ಸಮಿತಿ ಪರಿಶೀಲಿಸಿ ವರದಿ ನೀಡಲಿ ಅಂತಾ ರಾಮ್‌ದಾಸ್ ಸಂಸದರಿಗೆ ಟಾಂಗ್ ನೀಡಿದ್ದಾರೆ. ಅರಮನೆ ಮಾದರಿಯಲ್ಲಿ ಬಸ್ ನಿಲ್ದಾಣದ ವಿನ್ಯಾಸ ಮಾಡಿದ್ದೇವೆ ಎಂದು ರಾಮ್‌ದಾಸ್ ಪತ್ರಿಕಾ ಪ್ರಕಟಣೆಯಲ್ಲೂ ಸ್ಪಷ್ಟಪಡಿಸಿದ್ದಾರೆ.

ಇದರ ಮಧ್ಯೆ, ರಾತ್ರೋರಾತ್ರಿ ಬಸ್​ ಶೆಲ್ಟರ್ ಮೇಲ್ಭಾಗ ನಿರ್ಮಾಣ ಮಾಡಿರುವ ಮೂರು ಗುಂಬಜ್​ಗಳ ಪೈಕಿ ಒಂದರ ಬಣ್ಣ ಬದಲಾಗಿದೆ. ಜೊತೆಗೆ ಹೊಸದಾಗಿ ಅಳವಡಿಸಲಾಗಿರುವ ನಾಮಫಲಕದಲ್ಲಿ ಸುತ್ತೂರು ಶ್ರೀ, ಸೇರಿದಂತೆ ಗಣ್ಯರ ಭಾವಚಿತ್ರ ಅಳವಡಿಸಲಾಗಿದೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ, ಮತ್ತು ಸಿಎಂ ಬಸವರಾಜ್ ಬೊಮ್ಮಾಯಿ ಫೋಟೋವನ್ನೂ ಅಳವಡಿಕೆ ಮಾಡಲಾಗಿದೆ.

suddiyaana