IPL ಫೈನಲ್​​ನಲ್ಲಿ WPL ಘಟನೆಗಳು ಪುನರಾವರ್ತನೆ!  – ಮ್ಯಾಚ್‌ನಲ್ಲಿ ಅಚ್ಚರಿಯ ಕಾಕತಾಳೀಯಗಳು!

IPL ಫೈನಲ್​​ನಲ್ಲಿ WPL ಘಟನೆಗಳು ಪುನರಾವರ್ತನೆ!  – ಮ್ಯಾಚ್‌ನಲ್ಲಿ ಅಚ್ಚರಿಯ ಕಾಕತಾಳೀಯಗಳು!

ಈ ವರ್ಷ ನಡೆದ ಐಪಿಎಲ್ ಹಾಗೂ ಡಬ್ಲ್ಯೂಪಿಎಲ್ ಟೂರ್ನಿಯಲ್ಲಿ ಕಾಕತಾಳೀಯ ಎಂಬಂತೆ ಕೆಲವು ಘಟನೆಗಳು ನಡೆದಿದೆ. ಮೊನ್ನೆ ನಡೆದ ಫೈನಲ್ ಪಂದ್ಯದಲ್ಲೂ ಇದೇ ಆಗಿದೆ.

ಇದನ್ನೂ ಓದಿ: IPL ಟ್ರೋಫಿಗೆ ಮುತ್ತಿಕ್ಕಿದ KKR  – RCB & ಕೊಹ್ಲಿಗೆ ಸಿಕ್ಕ ಹಣವೆಷ್ಟು?

ಐಪಿಎಲ್ 2024​​ ಫೈನಲ್​ನಲ್ಲಿ ಒಂದು ತಂಡದ ನಾಯಕ ಭಾರತೀಯ ಅಂದ್ರೆ ಶ್ರೇಯಸ್ ಅಯ್ಯರ್, ಇನ್ನೊಂದು ತಂಡದ ನಾಯಕ ಆಸ್ಟ್ರೇಲಿಯನ್ ಆಟಗಾರ ಪ್ಯಾಟ್ ಕಮ್ಮಿನ್ಸ್​ ಇದ್ದರು. WPL 2024 ಫೈನಲ್​​ನಲ್ಲಿಯೂ ಆಸ್ಟ್ರೇಲಿಯಾದ ಮಾಜಿ ನಾಯಕಿ ಮೆಗ್​ ಲ್ಯಾನಿಂಗ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಸ್ಮೃತಿ ಮಂದಾನ ಆರ್​ಸಿಬಿ ನಾಯಕತ್ವ ವಹಿಸಿದ್ದರು. WPL 2024 ಫೈನಲ್​ನಲ್ಲಿ ಆಸ್ಟ್ರೇಲಿಯಾದ ನಾಯಕಿ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಮೊನ್ನೆ ನಡೆದ ಪಂದ್ಯದಲ್ಲೂ ಕಮ್ಮಿನ್ಸ್​ ಟಾಸ್​ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದರು.

WPL ಫೈನಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡ 18.3 ಓವರ್​ಗಳಲ್ಲಿ 113 ರನ್​​ಗಳಿಗೆ ಆಲೌಟ್ ಆಗಿತ್ತು. ಐಪಿಎಲ್​​ನಲ್ಲಿ ಹೈದರಾಬಾದ್​​ 18.3 ಓವರ್​ಗಳಲ್ಲಿ 113ರನ್​ಗಳಿಗೆ ಸೀಮಿತವಾಯಿತು. ಅಂದರೆ ಎರಡೂ ಫೈನಲ್​ಗಳಲ್ಲೂ ಮೊದಲು ಬ್ಯಾಟ್ ಮಾಡಿದ ತಂಡವು ಸಮಾನ ಸಂಖ್ಯೆಯ ರನ್​ಗಳಿಸಿದ್ದವು. ಸಮಾನ ಸಂಖ್ಯೆಯ ಎಸೆತಗಳನ್ನು ಆಡಿದ್ದವು. WPL ಫೈನಲ್​ನಲ್ಲಿ 8 ವಿಕೆಟ್​ಗಳಿಂದ ಗೆದ್ದಿತ್ತು. ಐಪಿಎಲ್​ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್​ 8 ವಿಕೆಟ್​ಗಳಿಂದ ಗೆಲುವು ಸಾಧಿಸಿದೆ. ಎರಡೂ ಪಂದ್ಯಗಳಲ್ಲೂ ಭಾರತೀಯ ಕ್ಯಾಪ್ಟನ್​ಗಳು ಟ್ರೋಫಿಯನ್ನ ಎತ್ತಿ ಹಿಡಿದಿದ್ದು ವಿಶೇಷವಾಗಿತ್ತು.

Shwetha M