ಮೊದಲ ದಿನವೇ ಕಾಕ್ಟೇಲ್ -2 ಕಿಕ್ – ಬಾಕ್ಸ್ ಆಫೀಸ್ನಲ್ಲಿ ಕೋಟಿ ಕೋಟಿ ಲೂಟಿ ಮಾಡಿದ ರಶ್ಮಿಕಾ ಸಿನಿಮಾ

ಬಾಲಿವುಡ್ ಸಿನಿಮಾ ಕಾಕ್ಟೇಲ್ 2 ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನವೇ ಅಬ್ಬರಿಸಿದೆ. ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ, ಕೃತಿ ಸನೋನ್ ನಟನೆಯ ಕಾಕ್ಟೇಲ್ 2 ಸಿನಿಮಾ ತೆರೆ ಕಂಡ ದಿನವೇ ಕೋಟಿ ಕೋಟಿ ಬಾಚಿದೆ.
ಇದನ್ನೂ ಓದಿ:ಮೊನ್ನೆ ಕಾಂಟ್ರವರ್ಸಿ.. ಈಗ ಪ್ಯಾಚಪ್.. ಮಾದರಿ ದಂಪತಿ ಕರೆಸಿ ತೇಪೆ ಹಚ್ಚಿದ್ರಾ? – ಜೋಡಿ No.1 ಶೋ TRP ಗಿಮಿಕ್ ಇದಾ?
ಬಾಲಿವುಡ್ನ ಭಾರಿ ನಿರೀಕ್ಷೆಯ ಸಿನಿಮಾ ಕಾಕ್ಟೇಲ್ 2 ಸಿನಿಮಾ ಮೊದಲ ದಿನವೇ ಗಲ್ಲಾಪೆಟ್ಟಿಗೆ ಲೂಟಿ ಮಾಡಿದೆ. ದೇಶಾದ್ಯಂತ ಬರೋಬ್ಬರಿ 10,835 ಶೋಗಳನ್ನು ಪಡೆದುಕೊಂಡಿದ್ದ ಈ ಚಿತ್ರ, ಕೆಲವು ಕಡೆ ಹೌಸ್ಫುಲ್ ಪ್ರದರ್ಶನ ಕಂಡಿದೆ. ಈ ಚಿತ್ರಕ್ಕೆ ಹೆಚ್ಚಿನ ಶೋ ಸಿಕ್ಕಿದ್ದರಿಂದ ಗಳಿಕೆ ಕೂಡಾ ಭರ್ಜರಿಯಾಗಿದೆ. ಮೊದಲ ದಿನವೇ ಈ ಸಿನಿಮಾ ಭಾರತದಲ್ಲಿ ಒಟ್ಟು 13.50 ಕೋಟಿ ನೆಟ್ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಭಾರತದ ಒಟ್ಟು ಗ್ರಾಸ್ ಕಲೆಕ್ಷನ್ 16.20 ಕೋಟಿ ರೂಪಾಯಿ ತಲುಪಿದೆ. ಇನ್ನು ವಿದೇಶದಲ್ಲೂ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಒಟ್ಟು 4.00 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಆಗಿದೆ. ಈ ಮೂಲಕ ‘ಕಾಕ್ಟೇಲ್ 2’ ಮೊದಲ ದಿನವೇ ವಿಶ್ವಾದ್ಯಂತ ಒಟ್ಟು 20.20 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ.
2012 ರಲ್ಲಿ ಬಿಡುಗಡೆ ಆಗಿ ಬ್ಲಾಕ್ಬಸ್ಟರ್ ಆಗಿದ್ದ ಕಾಕ್ಟೇಲ್ ಸಿನಿಮಾದ ಸೀಕ್ವೆಲ್ ಆಗಿರುವ ಕಾಕ್ಟೇಲ್ 2 ಸಿನಿಮಾ ಸೊರಗಿಹೋಗಿರುವ ಬಾಲಿವುಡ್ಗೆ ಹೊಸ ಚೈತನ್ಯ ನೀಡಿದೆ.

ನೋಡಿರಿ

